ಕೊವಿಶೀಲ್ಡ್‌ ಲಸಿಕೆ ಲಭ್ಯತೆ ಕುರಿತು ಸೀರಂ ಇನ್‌ಸ್ಟಿಟ್ಯೂಟ್ ಸ್ಪಷ್ಟನೆ

ನವದೆಹಲಿ, ಆಗಸ್ಟ್ 23: ಕೊವಿಶೀಲ್ಡ್‌ ಲಸಿಕೆ ಲಭ್ಯತೆ ಹಾಗೂ ಪ್ರಸ್ತುತತೆ ಕುರಿತು ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿ ಸಂಪೂರ್ಣ ಸುಳ್ಳು ಎಂದು ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.

ಪ್ರಯೋಗಗಳು ಯಶಸ್ವಿಯಾದ ಬಳಿಕ ಕೊವಿಶೀಲ್ಡ್‌ನ್ನು ವಾಣಿಜ್ಯೀಕರಣಗೊಳಿಸಲಾಗುತ್ತದೆ.ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಗಾಗಿ 3 ಹಂತದ ಪ್ರಯೋಗಗಳು ನಡೆಯುತ್ತಿವೆ. ಲಸಿಕೆ ಇಮ್ಯುನೊಜೆನಿಕ್ ಮತ್ತು ಪರಿಣಾಮಕಾರಿ ಎಂದು ಸಾಬೀತಾದ ನಂತರ, ಎಸ್‌ಐಐ ಅದರ ಲಭ್ಯತೆಯನ್ನು ಅಧಿಕೃತವಾಗಿ ಖಚಿತಪಡಿಸುತ್ತದೆ.

ಲಸಿಕೆ ತಯಾರಿಸಲು ಮತ್ತು ಭವಿಷ್ಯದಲ್ಲಿ ಸಂಗ್ರಹಿಸಲು ಸರ್ಕಾರ ನಮಗೆ ಅನುಮತಿ ನೀಡಿದೆ ಮತ್ಯಾವುದಕ್ಕೂ ಅನುಮತಿ ಇಲ್ಲ ಎಂದು ತಿಳಿಸಿದೆ.

COVISHIELD Will Be Commercialised Once Trials Are Proven Successful

ಬಿಹಾರದ ಪಟ್ನಾದಲ್ಲಿರುವ ಆರ್‌ಎಂಆರ್‌ಐ ಕೊವಿಶೀಲ್ಡ್ ಲಸಿಕೆಯ ಮಾನವ ಪ್ರಯೋಗದ ಎರಡು ಮತ್ತು ಮೂರನೇ ಹಂತಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಬ್ರಿಟಿಷ್-ಸ್ವೀಡಿಷ್ ಬಹುರಾಷ್ಟ್ರೀಯ ಕಂಪೆನಿ ಆಸ್ಟ್ರಾಜೆನಿಕಾ ಜತೆಗಿನ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಿದ ಲಸಿಕೆ ಇದಾಗಿದೆ.

ದೆಹಲಿಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಕೊವಿಶೀಲ್ಡ್ ಲಸಿಕೆಯ 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ದೇಶದಾದ್ಯಂತ ಒಟ್ಟು 17 ಸಂಸ್ಥೆಗಳಿಗೆ ಅನುಮತಿ ನೀಡಿದೆ. ಅದರಲ್ಲಿ ಆರ್‌ಎಂಆರ್‌ಐ ಒಂದು.

ಈ ಪ್ರಯೋಗಕ್ಕೆ 18 ವರ್ಷ ಮೇಲ್ಪಟ್ಟ ಒಟ್ಟು 160 ಆರೋಗ್ಯವಂತ ಪುರುಷರು ಮತ್ತು ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಒಪಿಡಿ ಆಧಾರದಲ್ಲಿ ಈ ಕ್ಲಿನಿಕಲ್ ಪ್ರಯೋಗಗಳು ನಡೆಯಲಿವೆ. ಅಂದರೆ, ಇದರಲ್ಲಿ ಪಾಲ್ಗೊಳ್ಳುವ ಜನರು ದಾಖಲಾಗುವ ಅಗತ್ಯವಿಲ್ಲ. ಸ್ವಯಂ ಸೇವಕರ ಸ್ನಾಯುಯೊಳಗೆ ಮೊದಲ ದಿನದಿಂದ 29ನೇ ದಿನದವರೆಗೆ 0.5 ಮಿ.ಲೀ ಇಂಜೆಕ್ಷನ್ ಲಸಿಕೆ ನೀಡಲಾಗುತ್ತದೆ. 59ನೇ ದಿನ ಮತ್ತು 180ನೇ ದಿನ ಅದನ್ನು ಪುನಃ ನಡೆಸಲಾಗುತ್ತದೆ.

ಈ ಲಸಿಕೆಯ ಫಲಿತಾಂಶವನ್ನು ಇದರಲ್ಲಿ ಅಧ್ಯಯನ ಮಾಡಲಾಗುತ್ತದೆ ಎಂದು ಆರ್‌ಎಂಆರ್‌ಐ-ಪಟ್ನಾದ ನಿರ್ದೇಶಕ ಡಾ. ಪ್ರದೀಪ್ ದಾಸ್ ತಿಳಿಸಿದ್ದಾರೆ.

ಸಿಕೆ ನೀಡಿದ 14 ದಿನಗಳ ಒಳಗೆ ಲಸಿಕೆಯು ಟಿ-ಸೆಲ್‌ಗಳನ್ನು ಪ್ರತಿಕ್ರಿಯಿಸುವಂತೆ ಪ್ರಚೋದಿಸುತ್ತದೆ. 28 ದಿನಗಳೊಳಗೆ ಆಂಟಿಬಾಡಿಗಳು ಪ್ರತಿಕ್ರಿಯಿಸುವಂತೆ ಮಾಡುತ್ತದೆ. ಈ ನಿಗಾದ ಸಮಯದಲ್ಲಿ ಲಸಿಕೆಯ ದಕ್ಷತೆ ಮತ್ತು ಟಾಕ್ಸಿಸಿಟಿಯನ್ನು ಕೂಡ ವಿಶ್ಲೇಷಣೆ ಮಾಡುತ್ತೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+