ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪ್ರಕರಣ ಹೆಚ್ಚಳಕ್ಕೆ ರೂಪಾಂತರಿ ವೈರಸ್ ಕಾರಣವಲ್ಲ: ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ,ಫೆಬ್ರವರಿ 23: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದಕ್ಕೆ ರೂಪಾಂತರಿ ವೈರಸ್ ಕಾರಣವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೆಲ ರಾಜ್ಯಗಳಲ್ಲಿ ಕೊರೋನಾ ಸಕ್ರಿಯ ಪ್ರಕರಣಗಳ ಏರಿಕೆಗೆ ಕೋವಿಡ್ -19 ವೈರಸ್‌ನ ಯಾವುದೇ ಹೊಸ ರೂಪಾಂತರಿ ವೈರಾಣು ಕಾರಣವಲ್ಲ ಎಂದು ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ, ಇದುವರೆಗಿನ ವೈರಸ್ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ಮಾದರಿಯನ್ವಯ ಉಲ್ಲೇಖಿಸಿ ಈ ಸ್ಪಷ್ಟನೆ ನೀಡಲಾಗಿದೆ.

ಸಕ್ರಿಯ ಪ್ರಕರಣಗಳ ಏರಿಕೆ, ಹಲವಾರು ವಾರಗಳಲ್ಲಿ ದೀರ್ಘ ಮತ್ತು ತ್ವರಿತ ಕುಸಿತದ ನಂತರ, ಈ ಮಧ್ಯೆ ಕೇಂದ್ರದ ರೋಗ ಪ್ರತಿಕ್ರಿಯೆ ಯೋಜನೆಗೆ ಹೊಸ ಚಿಂತೆಗಳನ್ನು ಹುಟ್ಟುಹಾಕಿದೆ. ವಿವರಗಳ ಪ್ರಕಾರ, 75% ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಎರಡು ರಾಜ್ಯಗಳಿದ್ದು ಅವು ಕೇರಳ ಮತ್ತು ಮಹಾರಾಷ್ಟ್ರ.

ಕೊರೊನಾ ನೆಗೆಟಿವ್ ಇದ್ದರೂ ಕ್ವಾರಂಟೈನ್; ಕೋರ್ಟ್‌ ಮೊರೆ ಹೋದ ಕುಟುಂಬಕೊರೊನಾ ನೆಗೆಟಿವ್ ಇದ್ದರೂ ಕ್ವಾರಂಟೈನ್; ಕೋರ್ಟ್‌ ಮೊರೆ ಹೋದ ಕುಟುಂಬ

ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಕೇರಳದ 38% ಇದ್ದರೆ, ಮಹಾರಾಷ್ಟ್ರದ 37% ನಷ್ಟಿದೆ. ದೈನಂದಿನ ಕೋವಿಡ್ -19 ಪ್ರಕರಣಗಳಲ್ಲಿ ಮೇಲ್ಮುಖ ಪ್ರವೃತ್ತಿಯನ್ನು ತೋರಿಸುವ ಇತರ ರಾಜ್ಯಗಳಲ್ಲಿ ಪಂಜಾಬ್,ಛತ್ತೀಸ್ ಗಢ, ಮಧ್ಯಪ್ರದೇಶ ಸೇರಿವೆ.

ಕೋವಿಡ್ -19 ವ್ಯಾಕ್ಸಿನೇಷನ್‌ನ ಎರಡನೇ ಡೋಸ್‌ಗೆ ನಿಗದಿಯಾಗಿದ್ದ ಸುಮಾರು 62% ರಷ್ಟು ಆರೋಗ್ಯ ಕಾರ್ಯಕರ್ತರು ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

ಐದು ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ

ಐದು ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ

ಕಳೆದ ಹಲವಾರು ದಿನಗಳಿಂದ ಭಾರತದಲ್ಲಿ ಕನಿಷ್ಠ ಐದು ರಾಜ್ಯಗಳು ಸಕ್ರಿಯ ಕೋವಿಡ್ ಪ್ರಕರಣಗಳಲ್ಲಿ ಕ್ರಮೇಣವಾಗಿ ಏರಿಕೆ ದಾಖಲಿಸುತ್ತಿವೆ.ಈ ತಿಂಗಳ ಆರಂಭದಲ್ಲಿ 1.3 ಲಕ್ಷ ಪ್ರಕರಣಗಳನ್ನು ಮುಟ್ಟಿದ ನಂತರ ದೇಶದಲ್ಲಿ ಸಕ್ರಿಯವಾಗಿರುವ ಕೊರೋನಾ ಮತ್ತೆ 1.5 ಲಕ್ಷಕ್ಕೆ ತಲುಪಿದೆ.

ಕೊರೊನಾ ಸೋಂಕು ಹೆಚ್ಚಳಕ್ಕೆ ರೂಪಾಂತರಿ ಕಾರಣವಲ್ಲ

ಕೊರೊನಾ ಸೋಂಕು ಹೆಚ್ಚಳಕ್ಕೆ ರೂಪಾಂತರಿ ಕಾರಣವಲ್ಲ

ನಮಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ರೂಪಾಂತರಿಗಳು ಇದೆ ಆದರೆ ವೈಜ್ಞಾನಿಕ ಮಾಹಿತಿಯ ಆಧಾರದ ಮೇಲೆ, ಮಹಾರಾಷ್ಟ್ರ ಮತ್ತು ಕೇರಳದ ಕೆಲವು ಜಿಲ್ಲೆಗಳಲ್ಲಿ ಏಕಾಏಕಿ ಸಾಂಕ್ರಾಮಿಕದ ಹೆಚ್ಚಳಕೆ ಇದು ಕಾರಣವೆನ್ನಲು ಯಾವ ಆಧಾರಗಳಿಲ್ಲ."

ಯುಕೆ ರೂಪಾಂತರಿ ಸೋಂಕು ಎಷ್ಟಿದೆ

ಯುಕೆ ರೂಪಾಂತರಿ ಸೋಂಕು ಎಷ್ಟಿದೆ

ಡಿಸೆಂಬರ್‌ನಿಂದ ನಡೆಸಲಾದ 3,500-ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಳಲ್ಲಿ ಇದುವರೆಗೆ ಯುಕೆ ರೂಪಾಂತರಿಯ ಸುಮಾರು 200 ಪ್ರಕರಣಗಳು, ದಕ್ಷಿಣ ಆಫ್ರಿಕಾದ ಆರು ಪ್ರಕರಣಗಳು ಮತ್ತು SARS CoV 2 ಬ್ರೆಜಿಲಿಯನ್ ರೂಪಾಂತರಿಯ ಒಂದು ಪ್ರಕರಣಗಳು ಭಾರತದಲ್ಲಿ ಕಂಡುಬಂದಿವೆ ಎಂದು ಅವರು ಹೇಳಿದರು.

ಕೊರೊನಾ ಸೋಂಕು ಸಮುದಾಯಕ್ಕೆ ಹಬ್ಬಿಲ್ಲ

ಕೊರೊನಾ ಸೋಂಕು ಸಮುದಾಯಕ್ಕೆ ಹಬ್ಬಿಲ್ಲ

ಈ ಮೂರು ರೂಪಾಂತರಿಗಳು ಅಂತಾರಾರಾಷ್ಟ್ರೀಯ ಪ್ರಯಾಣಿಕರಲ್ಲಿ ಕಂಡುಬಂದಿದ್ದು ಇಲ್ಲಿಯವರೆಗೆ ಸಮುದಾಯಕ್ಕೆ ಹಬ್ಬಿಲ್ಲ. ಆದರೆ ಅವು ಅತಿ ವೇಗವಾಗಿ ಹರಡುತ್ತವೆ ಹಾಗೂ ಜನರಲ್ಲಿ ತೀವ್ರ ರೋಗವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿದುಬಂದಿದೆ. ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ನೇತೃತ್ವದ ಒಕ್ಕೂಟದಿಂದ ಬಿಡುಗಡೆಯಾಗಿರುವ ದತ್ತಾಂಶದಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರೀಯವಾಗಿ ವಿಶ್ಲೇಷಿಸಲಾಗಿದೆ, ವ್ಯಾಖ್ಯಾನಿಸಲಾಗಿದೆ ಮತ್ತು ತನಿಖೆ, ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಯೋಜನಾ ಪ್ರತಿಕ್ರಿಯೆ ತಂತ್ರಗಳಿಗಾಗಿ ರಾಜ್ಯಗಳು ಅಥವಾ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ.

English summary
The mutant strains circulating in India are not behind the sudden increase in covid-19 cases in some states especially Maharashtra, government clarified on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X