ಕೊರೊನಾ ಮೂರನೇ ಅಲೆ ಕೆಟ್ಟ ತಿರುವು ಪಡೆಯಬಹುದು; ತಜ್ಞರ ಎಚ್ಚರಿಕೆ

ನವದೆಹಲಿ, ಆಗಸ್ಟ್‌ 09: ದೇಶದಲ್ಲಿ ಆಗಸ್ಟ್‌ ತಿಂಗಳಾಂತ್ಯದಲ್ಲಿ ಕೊರೊನಾ ಮೂರನೇ ಅಲೆ ಆರಂಭವಾಗುವ ಸೂಚನೆಯನ್ನು ಈಗಾಗಲೇ ತಜ್ಞರು ನೀಡಿದ್ದಾರೆ. ಇದೀಗ ಕೊರೊನಾ ಅಲೆಯ ಮಾದರಿಯಲ್ಲಿ ಕಂಡುಬಂದಿರುವ ಗೊಂದಲದ ಪ್ರವೃತ್ತಿ ಕುರಿತು ಹೈದರಾಬಾದ್‌ ವಿಶ್ವವಿದ್ಯಾಲಯದ ಮಾಜಿ ವಿಸಿ ವಿಪಿನ್ ಶ್ರೀವಾತ್ಸವ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಸೋಂಕಿನಿಂದ ದೈನಂದಿನ ಸಾವಿನ ಪ್ರಕರಣಗಳು ಸಕಾರಾತ್ಮಕವಾಗಿ ಬದಲಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದ ಕೊರೊನಾ ಮೂರನೇ ಅಲೆ ಕೆಟ್ಟದಾಗಿ ತಿರುವು ಪಡೆಯಬಹುದು ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಜುಲೈ 4ರಿಂದ ದೈನಂದಿನ ಸಾವಿನ ಪ್ರಕರಣಗಳಲ್ಲಿ ಏರಿಳಿತ ಕಾಣಿಸಿಕೊಳ್ಳುತ್ತರುವುದು ಕಳವಳ ಮೂಡಿಸಿದೆ. ಪ್ರಸ್ತುತ ಚಿತ್ರಣದಲ್ಲಿ ಗೊಂದಲಕಾರಿಯಾಗಿದೆ. ಸಾವಿನ ಪ್ರಕರಣಗಳಲ್ಲಿ ಇದ್ದಕ್ಕಿದ್ದಂತೆ ಭಾರೀ ಇಳಿಕೆ ಕಂಡುಬರುವುದು ಅಥವಾ ಏಕಾಏಕಿ ಏರಿಕೆಯಾಗುವುದು ಆತಂಕ ತಂದಿದೆ ಎಂದು ಹೇಳಿದ್ದಾರೆ.

Covid 19 Third Wave Taking Turn For Worse Warns Physicist

ದೇಶದಲ್ಲಿ ದಿನನಿತ್ಯದ ಕೊರೊನಾ ಮರಣ ಪ್ರಮಾಣಲ್ಲಿನ ದೊಡ್ಡ ಮಟ್ಟದ ಏರಿಳಿತ ಈ ಮೊದಲಿಗಿಂತಲೂ ಹೆಚ್ಚಾಗಿದೆ. ಒಂದು ತಿಂಗಳ ನಂತರವೂ ಈ ಏರಿಳಿತದಲ್ಲಿ ಯಾವುದೇ ಬದಲಾವಣೆಯಾಗದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ ಎಂದಿದ್ದಾರೆ.

ಕೊರೊನಾ ಮೂರನೇ ಅಲೆ ಎಚ್ಚರಿಕೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಸಿಕೆಗಳು ಹಾಗೂ ಅವಶ್ಯಕ ಔಷಧಿಗಳ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ಇದರೊಂದಿಗೆ ಜನರು ಕೂಡ ಜಾಗರೂಕವಾಗಿರಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಭಾರತದಲ್ಲಿ ಸೋಮವಾರ 35,499 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 4,02,188 ಸಕ್ರಿಯ ಪ್ರಕರಣಗಳಿವೆ, ಶೇ.97.40ಯಷ್ಟು ಚೇತರಿಕೆ ಪ್ರಮಾಣವಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 52.40 ಕೋಟಿ ಡೋಸ್ ಕೊರೋನಾ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಇದರೊಂದಿಗೆ, ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಮಕ್ಕಳಲ್ಲಿ ಮಲ್ಟಿಸಿಸ್ಟಮ್ ಇನ್‌ಫ್ಲಮೇಟರಿ ಸಿಂಡ್ರೋಮ್( ಎಂಐಎಸ್‌-ಸಿ) ಸಮಸ್ಯೆ ಕಂಡುಬರುತ್ತಿದ್ದು, ಇದು ಬಾಲಕಿಯರಿಗಿಂತ ಬಾಲಕರಲ್ಲೇ ಹೆಚ್ಚು ಎಂದು ಹೇಳಲಾಗುತ್ತಿದೆ.

ಈ ಬೆಳವಣಿಗೆಗಳ ಬೆನ್ನಲ್ಲೇ ಕೇಂದ್ರ ಜನರಿಗೆ ಎಚ್ಚರಿಕೆ ರವಾನಿಸಿದೆ. ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ, ಕೊರೊನಾ ಹರಡುವಿಕೆ ತಡೆಗೆ ಸ್ಥಳೀಯ ಮಟ್ಟದಲ್ಲಿ ನಿರ್ಬಂಧಗಳನ್ನು ಹೇರುವಂತೆ ಹಾಗೂ ಹೆಚ್ಚು ಜನಸಂದಣಿ ಸೇರುವುದನ್ನು ನಿಷೇಧಿಸುವಂತೆ ಹೇಳಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಎಚ್ಚರಿಕೆ ನೀಡಿದೆ.

ಆಗಸ್ಟ್‌ ತಿಂಗಳಿನಿಂದ ಸಾಲು ಸಾಲು ಹಬ್ಬಗಳು ಆರಂಭಗೊಳ್ಳುತ್ತವೆ. ಮೊಹರಂ, ಓಣಂ, ಜನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾಪೂಜಾ ಹಬ್ಬಗಳು ನಡೆಯುತ್ತವೆ. ಈ ಹಬ್ಬಗಳಿಗಾಗಿ ಖರೀದಿಗೆ ಹಾಗೂ ಆಚರಣೆಗೆ ಹೆಚ್ಚಿನ ಜನರು ಒಂದೆಡೆ ಸೇರುವ ಸಾಧ್ಯತೆಯಿರುವುದರಿಂದ ರಾಜ್ಯಗಳು ಸ್ಥಳೀಯ ಮಟ್ಟದಲ್ಲಿ ನಿರ್ಬಂಧ ಹೇರುವುದು ಅವಶ್ಯಕ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

ದೇಶದಲ್ಲಿ ಸೋಂಕು ಹರಡುವ ವೇಗವನ್ನು ಸೂಚಿಸುವ ಪುನರುತ್ಪತ್ತಿ ದರ (Reproduction rate) 1ಕ್ಕಿಂತ ಹೆಚ್ಚಾಗಿದೆ. ಎಂಟು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕಿನ ಪ್ರಕರಣಗಳು ಕೂಡ ಏರಿಕೆಯಾಗುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ತಮಿಳುನಾಡು, ಮಿಜೋರಾಂ, ಕರ್ನಾಟಕ, ಪುದುಚೇರಿ ಹಾಗೂ ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರ ಕುರಿತು ಆತಂಕ ವ್ಯಕ್ತಪಡಿಸಿದೆ.

"ಕೊರೊನಾ ಮೂರನೇ ಅಲೆ ಎಚ್ಚರಿಕೆ ನಡುವೆ ಟೆಸ್ಟ್‌-ಟ್ರ್ಯಾಕ್-ಟ್ರಿಟ್- ವ್ಯಾಕ್ಸಿನೇಟ್-ಕೊರೊನಾ ನಿರ್ವಹಣೆ ಸೂಕ್ತ ನಡವಳಿಕೆ- ಈ ಐದು ತಂತ್ರವನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಸರ್ಕಾರಗಳು ಖಾತ್ರಿಪಡಿಸಿಕೊಳ್ಳಬೇಕು. ಇದರಲ್ಲಿ ಸಡಿಲತೆಯಾದರೆ ಸಾಂಕ್ರಾಮಿಕ ನಿರ್ವಹಣೆಯಲ್ಲಿ ನಮ್ಮ ದೇಶ ಇದುವರೆಗೆ ಕಾಯ್ದುಕೊಂಡಿದ್ದ ಜಾಗ್ರತೆಯನ್ನು ಕಳೆದುಕೊಳ್ಳಬಹುದು ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+