• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯರನ್ನು ತಾಯ್ನಾಡಿಗೆ ಕರೆತಂದ ಏರ್ ಇಂಡಿಯಾ ಶ್ಲಾಘಿಸಿದ ಮೋದಿ

|

ನವ ದೆಹಲಿ, ಮಾರ್ಚ್ 23: ಮಾರಣಾಂತಿಕ ಕೊರೊನಾ ವೈರಸ್ ಭೀತಿಯಿಂದ ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ತಾಯ್ನಾಡಿಗೆ ವಾಪಸ್ ಕರೆ ತಂದ ಏರ್ ಇಂಡಿಯಾವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

''ಏರ್ ಇಂಡಿಯಾ ತಂಡದ ಬಗ್ಗೆ ನನಗೆ ಅತ್ಯಂತ ಹೆಮ್ಮೆ ಇದೆ. ಮಾನವೀಯತೆಯ ಕರೆಗೆ ಓಗೊಟ್ಟು, ಈ ತಂಡ ಧೈರ್ಯ ತೋರಿಸಿದೆ. ಈ ತಂಡದ ಪ್ರಯತ್ನಕ್ಕೆ ಭಾರತದಾದ್ಯಂತ ಹಲವು ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ'' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

''ಕ್ಯಾಪ್ಟನ್ ಸ್ವಾತಿ ರಾವಲ್ ಮತ್ತು ಕ್ಯಾಪ್ಟನ್ ರಾಜಾ ಚೌಹಾಣ್ ನೇತೃತ್ವದ ಏರ್ ಇಂಡಿಯಾ ತಂಡ ಕರ್ತವ್ಯದ ಕರೆಗೆ ಓಗೊಟ್ಟು ರೋಮ್ ನಲ್ಲಿ ಸಿಲುಕಿದ್ದ 263 ಭಾರತೀಯರನ್ನು ವಾಪಸ್ ಕರೆತಂದಿದ್ದಾರೆ'' ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಈ ಹಿಂದೆ ಟ್ವೀಟ್ ಮಾಡಿದ್ದರು.

ಅಂದ್ಹಾಗೆ, ರೋಮ್ ನಲ್ಲಿ ಸಿಲುಕಿದ್ದ 263 ಮಂದಿ ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನ ಮಾರ್ಚ್ 22 ರಂದು (ಭಾನುವಾರ) ಭಾರತದಲ್ಲಿ ಲ್ಯಾಂಡ್ ಆಗಿತ್ತು.

English summary
Covid 19: PM Lauds Air India for evacuating Indians abroad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X