ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ 9 ತಿಂಗಳವರೆಗೂ ಸೇಫ್ ಎಂದ ಅಧ್ಯಯನ

ಲಂಡನ್, ಜುಲೈ 20: ಕೊರೊನಾ ಸೋಂಕು ತಗುಲಿದ ನಂತರ ದೇಹದಲ್ಲಿ ಉತ್ಪತ್ತಿಯಾಗುವ ನೈಸರ್ಗಿಕ ರೋಗನಿರೋಧಕ ಶಕ್ತಿ ಎಷ್ಟು ಅವಧಿ ಉಳಿಯಬಹುದು ಎಂಬ ಕುರಿತು ಲಂಡನ್‌ನ ಇಂಪೀರಿಯಲ್ ಕಾಲೇಜಿನ ಸಂಶೋಧಕರು ಹೊಸ ಅಧ್ಯಯನ ನಡೆಸಿದ್ದು, ಸೋಂಕು ತಗುಲಿ ಗುಣಮುಖರಾದ ನಂತರ ದೇಹದಲ್ಲಿ ಸುಮಾರು ಒಂಬತ್ತು ತಿಂಗಳವರೆಗೂ ರೋಗನಿರೋಧಕ ಶಕ್ತಿ ಅಧಿಕ ಪ್ರಮಾಣದಲ್ಲಿ ಇರುತ್ತದೆ ಎಂದು ತಿಳಿಸಿದ್ದಾರೆ.

ರೋಗದ ಗುಣಲಕ್ಷಣಗಳು ಏನೇ ಇರಲಿ, ಲಕ್ಷಣರಹಿತ ಸೋಂಕಾಗಿರಲಿ, ಲಕ್ಷಣಸಹಿತವಾಗಿರಲಿ, ಸೋಂಕಿನಿಂದ ಗುಣಮುಖರಾದ ನಂತರ ಅವರಲ್ಲಿ ನೈಸರ್ಗಿಕವಾಗಿ ಪ್ರತಿರೋಧಕ ಶಕ್ತಿ ಉತ್ಪತ್ತಿಯಾಗಿರುತ್ತದೆ. ಇದು ದೀರ್ಘಕಾಲ ದೇಹದಲ್ಲಿ ಉಳಿಯುತ್ತದೆ ಎಂದು ತಿಳಿಸಿದ್ದಾರೆ. ಈ ಅಧ್ಯಯನವನ್ನು ನೇಚರ್ ಕಮ್ಯುನಿಕೇಷನ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ. ಮುಂದೆ ಓದಿ...

 ಒಂಬತ್ತು ತಿಂಗಳ ನಂತರವೂ ಪ್ರತಿಕಾಯ ಇರುತ್ತದೆ

ಒಂಬತ್ತು ತಿಂಗಳ ನಂತರವೂ ಪ್ರತಿಕಾಯ ಇರುತ್ತದೆ

ಇಟಲಿಯಲ್ಲಿ ಕಳೆದ ಫೆಬ್ರವರಿ ಮಾರ್ಚ್‌ ತಿಂಗಳಿನಲ್ಲಿ ಸೋಂಕಿಗೆ ತುತ್ತಾದ ಸುಮಾರು ಮೂರು ಸಾವಿರ ಮಂದಿಯನ್ನು ಈ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ನಂತರ ಅವರ ದೇಹದಲ್ಲಿನ ರೋಗನಿರೋಧಕ ಪ್ರಮಾಣವನ್ನು ಮೇ ಹಾಗೂ ನವೆಂಬರ್ ತಿಂಗಳಿನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಫೆಬ್ರವರಿ/ ಮಾರ್ಚ್‌ ತಿಂಗಳಿನಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದ ಇವರ ಪೈಕಿ 98.8% ಮಂದಿಯ ದೇಹದಲ್ಲಿ ನವೆಂಬರ್‌ ತಿಂಗಳಿನಲ್ಲಿಯೂ ಸೋಂಕಿನ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳ ಮಟ್ಟ ಹೆಚ್ಚಿರುವುದು ಗೋಚರಿಸಿದೆ.

 assays ಮೂಲಕ ಪ್ರತಿಕಾಯ ಪರೀಕ್ಷೆ

assays ಮೂಲಕ ಪ್ರತಿಕಾಯ ಪರೀಕ್ಷೆ

ವೈರಸ್ ವಿರುದ್ಧ ಹೋರಾಡಬಲ್ಲ ಭಿನ್ನ ಬಗೆಯ ಪ್ರತಿಕಾಯಗಳನ್ನು ಗುರುತಿಸಲು ಅನುವಾಗುವ "ಅಸ್ಸೇಸ್-assays" ಮೂಲಕ ದೇಹದಲ್ಲಿನ ಪ್ರತಿಕಾಯ ಮಟ್ಟವನ್ನು ಪರೀಕ್ಷೆ ಮಾಡಲಾಗಿದೆ. ನವೆಂಬರ್‌ ನಂತರದಲ್ಲಿ ಪ್ರತಿಕಾಯ ಮಟ್ಟದಲ್ಲಿ ಕೊಂಚ ಇಳಿಕೆಯಾಗಿರುವುದು ಕಂಡುಬಂದಿದೆ. ಹೀಗಾಗಿ ಸುಮಾರು ಒಂಬತ್ತು ತಿಂಗಳವರೆಗೂ ಪ್ರತಿಕಾಯವಿರುತ್ತದೆ ಎನ್ನಲಾಗಿದೆ.

 ಜನರ ದೇಹ ಪ್ರಕೃತಿ ಮೇಲೆ ಅವಲಂಬಿತ

ಜನರ ದೇಹ ಪ್ರಕೃತಿ ಮೇಲೆ ಅವಲಂಬಿತ

ಕೆಲವು ಮಂದಿಯಲ್ಲಿ ಮಾತ್ರ ಅಧಿಕ ಮಟ್ಟದಲ್ಲೇ ರೋಗನಿರೋಧಕ ಶಕ್ತಿ ಕಂಡುಬಂದಿದೆ. ಆದರೆ ಇನ್ನಷ್ಟು ಮಂದಿಯಲ್ಲಿ ಕಡಿಮೆಯಾಗಿರುವುದೂ ಗೋಚರಿಸಿದೆ. ಹೀಗಾಗಿ ಇದು ವ್ಯಕ್ತಿಯ ದೈಹಿಕ ಪ್ರಕೃತಿ ಮೇಲೆ ಅವಲಂಬಿತವಾಗಿರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಲಸಿಕೆಯಿಂದ ತಪ್ಪಿಸಿಕೊಳ್ಳುವ ಯೋಚನೆ ಮಾಡಬೇಡಿ. ಇದು ಎಲ್ಲಾ ರೀತಿಯಿಂದಲೂ ದೇಹಕ್ಕೆ ಅವಶ್ಯಕ ಎಂದು ತಿಳಿಸಿದೆ. ಸೋಂಕು ಇನ್ನೂ ಅಂತ್ಯವಾಗಿಲ್ಲದ ಕಾರಣ ಲಸಿಕೆ ಪಡೆದುಕೊಳ್ಳುವುದು ಅವಶ್ಯಕ ಎಂದು ಸಂಶೋಧನೆ ಪ್ರತಿಪಾದಿಸಿದೆ.

 ರೂಪಾಂತರಗಳಿಂದ ತಪ್ಪಿಸಿಕೊಳ್ಳಲು ಲಸಿಕೆ ಅವಶ್ಯಕ

ರೂಪಾಂತರಗಳಿಂದ ತಪ್ಪಿಸಿಕೊಳ್ಳಲು ಲಸಿಕೆ ಅವಶ್ಯಕ

ಆದರೆ ಈ ಎಲ್ಲಾ ಅಧ್ಯಯನದ ಲೆಕ್ಕಾಚಾರವನ್ನು ಕೊರೊನಾ ರೂಪಾಂತರಗಳು ತಲೆಕೆಳಗೆ ಮಾಡುತ್ತಿವೆ. ಹೀಗಾಗಿ ಶೀಘ್ರವೇ ಕೊರೊನಾ ಲಸಿಕೆಗಳನ್ನು ಪಡೆದುಕೊಳ್ಳುವುದ ಸೂಕ್ತ ಎನ್ನಲಾಗಿದೆ. ಒಂಬತ್ತು ತಿಂಗಳುಗಳವರೆಗೆ ಪ್ರತಿಕಾಯವಿದ್ದರೂ ಬೇರೆ ಆಯ್ಕೆ ಯೋಚಿಸದೇ ಲಸಿಕೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+