ಡೆಲ್ಟಾ, ಬೀಟಾ ರೂಪಾಂತರಿಗಳಿಂದ ಕೋವಾಕ್ಸಿನ್ ಲಸಿಕೆ ರಕ್ಷಣೆ: ಅಧ್ಯಯನ ವರದಿ

ನವದೆಹಲಿ, ಜೂನ್ 9: ಕೊರೊನಾ ವಿರುದ್ಧ ಹೋರಾಡಲು ಭಾರತದಲ್ಲಿ ನೀಡುತ್ತಿರುವ ಲಸಿಕೆಗಳಲ್ಲಿ ಕೋವಾಕ್ಸಿನ್ ಕೂಡ ಒಂದು. ಭಾರತ್ ಬಯೋಟೆಕ್ ಉತ್ಪಾದಿಸುತ್ತಿರುವ ಈ ಲಸಿಕೆ ರೂಪಾಂತರಿ ವೈರಸ್‌ಗಳ ಮೇಲೂ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ವರದಿ ಬಹಿರಂಗಪಡಿಸಿದೆ. ಅದರಲ್ಲೂ ಸದ್ಯ ವಿಶ್ವದಲ್ಲಿ ಹೆಚ್ಚಿನ ಆತಂಕವನ್ನು ಸೃಷ್ಟಿಸಿರುವ ಡೆಲ್ಟಾ ಹಾಗೂ ಬೀಟಾ ರೂಪಾಂತರಿಗಳ ವಿರುದ್ಧ ಈ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಈ ಅಧ್ಯಯನ ತಿಳಿಸಿದೆ.

ಪುಣೆ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR)ಹಾಗೂ ಭಾರತ್ ಬಯೋಟೆಕ್‌ನ ಸಂಶೋಧಕರು ಜಂಟಿಯಾಗಿ ಈ ಅಧ್ಯಯನವನ್ನು ನಡೆಸಿದ್ದರು. ಇದರಲ್ಲಿ ಸಕಾರಾತ್ಮಕ ಅಂಶಗಳನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಆದರೆ ಅಧ್ಯಯನದ ವರದಿಯನ್ನು ತಜ್ಞರು ಪುನರ್‌ಪರಿಶೀಲನೆ ನಡೆಸಬೇಕಿದೆ.

ಇನ್ನು ಡೆಲ್ಟಾ ರೂಪಾಂತರಿ(B.1.617.2) ಮೊದಲಿಗೆ ಭಾರತದಲ್ಲಿ ಪತ್ತೆಯಾಗಿದ್ದು ಭಾರತದಲ್ಲಿ ಎರಡನೇ ಅಲೆಯಲ್ಲಿ ಹೆಚ್ಚಿನ ಹರಡುವಿಕೆಗೆ ಕಾರಣವಾಗಿದೆ. ಬೀಟಾ (B.1.351)ರೂಪಾಂತರಿ ವೈರಸ್ ಮೊದಲಿಗೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದೆ.

Covaxin protects against COVID-19 Delta and Beta varients: study

ಈ ಅಧ್ಯಯನಕ್ಕೆ 20 ಕೊರೊನಾವೈರಸ್‌ನಿಂದ ಚೇತರಿಸಿಕೊಂಡವರನ್ನು ಹಾಗೂ 17 ಮಂದಿ 17 ಮಂದಿ ಎರಡು ಡೋಸ್ ಕೋವಾಕ್ಸಿನ್ ಲಸಿಕೆಯನ್ನು ಪಡೆದವರನ್ನು ಬಳಸಿ ಅಧ್ಯಯನ ಮಾಡಲಾಗಿದೆ. ಕೊರೊನಾವೈರಸ್‌ನ ಮೂಲ ಡಿ614ಜಿ ಜೊತೆಗೆ ಹೋಲಿಕೆ ಮಾಡಲಾಗಿದೆ. ಈ ಅಧ್ಯಯನದಲ್ಲಿ ಕೋವಾಕ್ಸಿನ್ ಲಸಿಕೆ ಆತಂಕವನ್ನು ಉಂಟುಮಾಡಿರುವ ಎರಡು ರೂಪಾಂತರಿ ವೈರಸ್‌ಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಪ್ರದರ್ಶಿಸಿದೆ ಎಂದು ತಿಳಿಸಿದೆ.

ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಲಭ್ಯವಿರುವ ಲಸಿಕೆಗಳು ಎಷ್ಟು ಪರಿಣಾಮಕಾರಿಯಾಗಿದೆ ಎಂಬುದು ಅರಿತುಕೊಳ್ಳುವುದು ಕಡ್ಡಾಯ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದರು. ಹೀಗಾಗಿ ಈ ವಿಚಾರದಲ್ಲಿ ಸಂಶೋಧನೆಯನ್ನು ನಡೆಸಲಾಗಿದೆ. ಇದರಲ್ಲಿ ಕೋವಾಕ್ಸಿನ್ ಲಸಿಕೆ ರೂಪಾಂತರಿಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಪೂರಕವಾಗಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+