2ಜಿ ಸ್ಪೆಕ್ಟ್ರಂ ಹಗರಣ: ವಿಶೇಷ ಕೋರ್ಟ್ ನಿಂದ ಇಂದು ತೀರ್ಪು
ನವದೆಹಲಿ, ಡಿಸೆಂಬರ್ 21: ಯುಪಿಎ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದ ಬಹುಕೋಟಿ ಹಗರಣಗಳಲ್ಲೊಂದಾದ 2 ಜಿ ಸ್ಪೆಕ್ಟ್ರಂ ಹಗರಣದ ತೀರ್ಪನ್ನು ದೆಹಲಿಯ ವಿಶೇಷ ನ್ಯಾಯಾಲಯ ಇಂದು(ಡಿ.21) ಹೊರಹಾಕಲಿದೆ.
2008 ರಲ್ಲಿ ಆಗಿನ ದೂರಸಂಪರ್ಕ ಸಚಿವರಾಗಿದ್ದ ಎ.ರಾಜಾ ಅವರ ಅಧಿಕಾರಾವಧಿಯಲ್ಲಿ ನಡೆದ ಈ ಹಗರಣದ ತೀರ್ಪು ಹೊರಬೀಳುತ್ತಿದ್ದಂತೆಯೇ ಮಾಜಿ ಸಚಿವ ಎ.ರಾಜಾ ಮತ್ತು ಡಿಎಂಕೆ ಸಂಸದೆ ಕನ್ನಿಮೋಳಿ ಅವರ ಹಣೆಬರಹ ನಿರ್ಧಾರವಾಗಲಿದೆ!

ಸರ್ಕಾರದ ಬೊಕ್ಕಸಕ್ಕೆ ಸುಮಾರು 1.76 ಲಕ್ಷ ಕೋಟಿ ರೂ. ನಷ್ಟವನ್ನುಂಟುಮಾಡಿದ ಈ ಹಗರಣದ ತೀರ್ಪು ತಮಿಳುನಾಡಿನಲ್ಲಿ ಆರ್ ಕೆ ನಗರ ಕ್ಷೇತ್ರದ ಉಪಚುನಾವಣೆಯ ದಿನದಂದೇ ಹೊರಬೀಳುತ್ತಿರುವುದು ಮತ್ತೊಮದು ಅಚ್ಚರಿಯ ವಿಷಯ!












Click it and Unblock the Notifications