ಮುಸ್ಲಿಮರು ನಾಲ್ಕು ಮದುವೆ ಆಗುವುದಕ್ಕೆ ಅವಕಾಶ ಇದೆ ಎಂದ ಕೋರ್ಟ್!
ಮುಸ್ಲಿಂ ಸಮುದಾಯದಲ್ಲಿ ಪಾಲಿಸುವ ಹಾಗೂ ಮುಸ್ಲಿಂ ಸಂಪ್ರದಾಯ ಆಚರಣೆಗಳ ಬಗ್ಗೆ ಪದೇ ಪದೇ ಚರ್ಚೆಯಾಗುತ್ತಲ್ಲೇ ಇರುತ್ತದೆ. ಇದೀಗ ಮುಸ್ಲಿಂ ಸಮುದಾಯದಲ್ಲಿ ಇರುವವರ ಮದುವೆಯ ಬಗ್ಗೆ ಭಾರೀ ಚರ್ಚೆಯೊಂದು ದೇಶದಲ್ಲಿ ಆಗುತ್ತಿದೆ. ಮುಸ್ಲಿಮರು ನಾಲ್ಕು ಮದುವೆಯಾಗುವುದಕ್ಕೆ ಅವಕಾಶ ಇದೆ ಎನ್ನುವುದನ್ನು ಇದೀಗ ಕೋರ್ಟ್ ಹೇಳಿದೆ. ಇದಕ್ಕೆ ಸಂಬಂಧಿಸಿದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.
ಕೆಲವು ಮುಸ್ಲಿಮರು ಒಂದಕ್ಕಿಂತ ಹೆಚ್ಚು ಮದುವೆಯಾಗ್ತಾರೆ. ಇದಕ್ಕೆ ಮುಸ್ಲಿಮರ ವೈಯಕ್ತಿಕ ಕಾನೂನುಗಳಲ್ಲಿ ಅವಕಾಶ ನೀಡಲಾಗಿದೆ. ಇದೀಗ ಪ್ರಕರಣವೊಂದರಲ್ಲಿ ಕೋರ್ಟ್ ಮಹತ್ವದ ಆದೇಶ ನೀಡಿದೆ. ಮುಸ್ಲಿಂ ಪುರುಷರು ಒಂದಕ್ಕಿಂತ ಹೆಚ್ಚು ಮದುವೆಯಾಗುವುದಕ್ಕೆ ಅವಕಾಶ ಇದೆ. ಅಲ್ಲದೇ ವಿವಾಹ ನೋಂದಣಿಯನ್ನೂ ಮಾಡಿಸಿಕೊಳ್ಳಬಹುದು. ಅದಕ್ಕೆ ಅವರ ವೈಯಕ್ತಿಕ ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಮೂರನೇಯ ವಿವಾಹವನ್ನು ನೋಂದಣಿ ಮಾಡಲು ಮುಂದಾಗಿದ್ದ ಪುರುಷರೊಬ್ಬರ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಸ್ಲಿಂ ಪುರುಷರೊಬ್ಬರು ಮಹಾರಾಷ್ಟ್ರದಲ್ಲಿ ವಿದೇಶಿ ಮಹಿಳೆಯನ್ನು ಮದುವೆಯಾಗಿದ್ದಾರೆ ಎನ್ನಲಾಗಿದೆ. ಈ ವಿವಾಹದ ನೋಂದಣಿಯನ್ನು ಮಾಡುವಂತೆ ಅವರು ಇಲ್ಲಿನ ಉಪ ವಿವಾಹ ನೋಂದಣಿ ಅರ್ಜಿ ಸಲ್ಲಿಸಿದ್ದರು ಎಂದು ಹೇಳಲಾಗಿದೆ.
ಅರ್ಜಿ ತಿರಸ್ಕರಿಸಲಾಗಿತ್ತು: ಮುಸ್ಲಿಂ ಪುರುಷನೊಬ್ಬ ಮೂರನೇಯ ವಿವಾಹವಾಗಿದ್ದಾನೆ. ಈ ವಿವಾಹವನ್ನು ನೋಂದಣಿ ಮಾಡಲು ಈ ಮುಸ್ಲಿಂ ದಂಪತಿ ಮುಂದಾಗಿದ್ದಾರೆ. ಆದರೆ, ಈ ವಿವಾಹ ನೋಂದಣಿಯನ್ನು ಮೂರನೇ ವಿವಾಹ ಎಂದು ಹೇಳಿ ಅರ್ಜಿಯನ್ನು ತಿರಸ್ಕಾರ ಮಾಡಲಾಗಿದೆ. ಇದೀಗ ಕೋರ್ಟ್ ವಿವಾಹ ನೋಂದಣಿ ಪತ್ರವನ್ನು ನೀಡುವಂತೆ ಸೂಚನೆ ನೀಡಿದೆ.
ಮಹಾರಾಷ್ಟ್ರದಲ್ಲಿ ಈ ಅರ್ಜಿಯನ್ನು ತಿರಸ್ಕಾರ ಮಾಡಲಾಗಿತ್ತು. ಇದಕ್ಕೆ ಅವರು ನೀಡಿದ್ದ ಕಾರಣ, ವೈಯಕ್ತಿಕ ಸಂಸ್ಥೆಗಳ ನಿಯಂತ್ರಣ ಮತ್ತು ವಿವಾಹ ನೋಂದಣಿ ಕಾಯ್ದೆಯ ಅನ್ವಯ ಇದಕ್ಕೆ ಅವಕಾಶ ಇಲ್ಲ. ಈ ಕಾಯ್ದೆಯ ಪ್ರಕಾರ ಮದುವೆ ಎನ್ನುವುದ ಒಮ್ಮೆ ಮಾತ್ರ ಆಗುವತಹದ್ದು, ಹಲವು ಬಾರಿ ಅಲ್ಲ ಎಂದು ಅಧಿಕಾರಿಗಳು ವಾದಿಸಿದ್ದರು. ಇದನ್ನು ಪ್ರಶ್ನೆ ಮಾಡಿ ಮುಸ್ಲಿಂ ದಂಪತಿಗಳು ಕೋರ್ಟ್ ಮೊರೆ ಹೋಗಿದ್ದರು.
ಇದೀಗ ಈ ಪ್ರಕರಣದಲ್ಲಿ ಕೋರ್ಟ್ ಸ್ಪಷ್ಟವಾದ ತೀರ್ಪು ನೀಡಿದೆ. ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ಮುಸ್ಲಿಂ ಪುರುಷರಿಗೆ ಒಮ್ಮೆಗೆ ನಾಲ್ಕು ಪತ್ನಿಯರನ್ನು ಹೊಂದುವುದಕ್ಕೆ ಅವಕಾಶ ಇದೆ ಎಂದು ಬಾಂಬೆ ಹೈಕೋರ್ಟ್ ಹೇಳಿರುವುದು ವರದಿಯಾಗಿದೆ.
ಏಕರೂಪ ನಾಗರಿಕ ಸಂಹಿತೆ: ಇನ್ನು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುವುದಾಗಿ ಈ ಹಿಂದೆ ಬಿಜೆಪಿ ಘೋಷಿಸಿತ್ತು. ಬಿಜೆಪಿ ದೇಶದ ಜನರಿಗೆ ನೀಡಿರುವ ಪ್ರಮುಖ ಭರವಸೆಗಳಲ್ಲಿ ಇದು ಸಹ ಒಂದಾಗಿದೆ. ಏಕರೂಪ ನಾಗರಿಕ ಸಂಹಿತೆ ಎಂದರೆ, ಇದರ ಹೆಸರೇ ಹೇಳುವಂತೆ ಭಾರತದ ಎಲ್ಲಾ ನಾಗರಿಕರಿಗೂ ಒಂದೇ ಕಾನೂನು ಎನ್ನುವ ಅರ್ಥವಿದೆ.
ಸದ್ಯ ದೇಶದಲ್ಲಿ ಮದುವೆ, ವಿಚ್ಛೇದನ ಹಾಗೂ ಉತ್ತರಾಧಿಕಾರ ಸೇರಿದಂತೆ ಹಲವು ವಿಚಾರಗಳಲ್ಲಿ ಭಿನ್ನವಾಗಿವೆ. ವಿವಿಧ ವಿಷಯಗಳು ಧರ್ಮ ಆಧಾರಿತ ವೈಯಕ್ತಿಕ ಕಾನೂನುಗಳ ಮೇಲೆ ನಿರ್ಧಾರವಾಗುತ್ತಿವೆ. ಆದರೆ, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ, ಎಲ್ಲಾ ಧರ್ಮದವರಿಗೂ ಒಂದೇ ಕಾನೂನು ಅನ್ವಯ ಆಗಲಿದೆ. ಇದೇ ಕಾರಣಕ್ಕೆ ಏಕರೂಪ ನಾಗರಿಕ ಸಂಹಿತೆಗೆ ಕೆಲವು ವಿರೋಧಗಳು ಸಹ ಇವೆ.












Click it and Unblock the Notifications