ದೇಶದ ಮೊದಲ ಬುಲೆಟ್ ರೈಲಿಗಾಗಿ ಮೊದಲ ಪರ್ವತ ಸುರಂಗ ಪೂರ್ಣ, ವಿವರ
ಮುಂಬೈ, ಅಕ್ಟೋಬರ್ 06: ಮುಂಬೈ ಮತ್ತು ಅಹಮದಾಬಾದ್ ನಡುವೆ ಭಾರತದ ಮೊದಲ ಬುಲೆಟ್ ರೈಲು ಕಾರಿಡಾರ್ ಅನ್ನು ನಿರ್ಮಿಸುತ್ತಿರುವ ನಿಗಮವು ಗುಜರಾತ್‌ನ ವಲ್ಸಾದ್ ಜಿಲ್ಲೆಯ ಜರೋಲಿ ಗ್ರಾಮದ ಬಳಿ ತನ್ನ ಮೊದಲ 350-ಮೀಟರ್ ಉದ್ದದ ಪರ್ವತ ಸುರಂಗವನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದೆ.
ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ಸುರಂಗದ ಪ್ರವೇಶದ್ವಾರದ ಹತ್ತಿರವಿರುವ ಬಂಡೆಯನ್ನು ಸ್ಫೋಟಿಸಿ ರೈಲು ಮಾರ್ಗ ಕಾರ್ಯವನ್ನು ಮುಗಿಸಿತು. ಬುಲೆಟ್ ರೈಲು ಗಂಟೆಗೆ 350 ಕಿಮೀ ವೇಗದಲ್ಲಿ ಚಲಿಸುತ್ತದೆ.

ಸಣ್ಣ ಜೋಡಣೆ ದೋಷವು ಬರದಂತೆ ಸುರಂಗದ ಜೋಡಣೆಯನ್ನು ಸಂಪೂರ್ಣವಾಗಿ ನೇರವಾಗಿ ಇಡುವುದು ನಮಗೆ ದೊಡ್ಡ ಸವಾಲಾಗಿತ್ತು. ಆದ್ದರಿಂದ, ಪ್ರತಿಯೊಂದು ಕಾರ್ಯವನ್ನು ನಿಖರವಾಗಿ ಮಾಡಬೇಕಿದೆ. ನೀವು ಒಂದೇ ಒಂದು ಮಿಲಿಮೀಟರ್‌ನಷ್ಟು ದೋಷವನ್ನು ಕಂಡು ಬರುವುದಿಲ್ಲ ಎಂದು ವಲ್ಸಾದ್ ವಿಭಾಗದ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ ಎಸ್‌ಪಿ ಮಿತ್ತಲ್ ತಿಳಿಸಿದ್ದಾರೆ.
ನಾವು ಸಂಪೂರ್ಣ ಸುರಂಗದ ಒಳಭಾಗದ ರಚನೆಯನ್ನು ಅಗೆದಿದ್ದೇವೆ. ಅದನ್ನು ಪೂರ್ಣಗೊಳಿಸುವ ಕೆಲಸ ಈಗ ಪ್ರಾರಂಭವಾಗಲಿದೆ. ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಲು ಒಂದು ವರ್ಷಕ್ಕೂ ಹೆಚ್ಚು ಅವಧಿಯಲ್ಲಿ ಸಾವಿರಾರು ಕಾರ್ಮಿಕರು ಶ್ರಮವಹಿಸಿ ಕೆಲಸ ಮಾಡಿದ್ದರಿಂದ ಈಗ ಕೆಲಸ ಪೂರ್ಣಗೊಂಡಿದೆ ಎಂದು ಅವರು ಹೇಳಿದರು.
ನಮ್ಮ ನೇರ ಮೇಲ್ವಿಚಾರಣೆಯಲ್ಲಿ ಕೊರೆದ ಮೊದಲ ಪರ್ವತ ಸುರಂಗವಾಗಿದೆ. ಮುಂಬೈ ಮತ್ತು ಅಹಮದಾಬಾದ್ ನಡುವಿನ ಸಂಪೂರ್ಣ 508 ಕಿಮೀ ಮಾರ್ಗದಲ್ಲಿ ಒಟ್ಟು ಏಳು ಸುರಂಗಗಳನ್ನು ಮಾಡಲು ಉದ್ದೇಶಿಸಲಾಗಿದೆ. ನಂತರ ಈಗ ಎರಡನೇ ಸುರಂಗದ ಕೆಲಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.
ಎನ್‌ಎಚ್‌ಎಸ್‌ಆರ್‌ಸಿಎಲ್ ಗುತ್ತಿಗೆಯನ್ನು ಎಲ್&ಟಿಗೆ ನೀಡಲಾಗಿದೆ. ಸುರಂಗವನ್ನು ಮಾಡಲು ಬಳಸಲಾದ ತಂತ್ರವು ಸುಸ್ಥಾಪಿತವಾದ ಹೊಸ ಆಸ್ಟ್ರಿಯನ್ ಸುರಂಗ ವಿಧಾನವಾಗಿದೆ (ಎನ್‌ಎಟಿಎಂ). ಇದನ್ನು ಈಗಾಗಲೇ ಭಾರತದಲ್ಲಿ ಹಲವಾರು ಪರ್ವತ ಪ್ರದೇಶಗಳಲ್ಲಿ ರೈಲು ಮತ್ತು ರಸ್ತೆ ಯೋಜನೆಗಳಿಗಾಗಿ ಬಳಸಲಾಗಿದೆ.
350 ಕಿ.ಮೀ ವೇಗದಲ್ಲಿ ರೈಲು ಹಾದುಹೋಗುವ ಭಾರತದ ಮೊದಲ ಸುರಂಗ ಇದಾಗಿದೆ. ಇಡೀ ಸುರಂಗ ನಿರ್ಮಾಣ ಅವಧಿಯಲ್ಲಿ ತಮ್ಮ ತಂಡವು ಒಂದೇ ಒಂದು ಅಹಿತಕರ ಘಟನೆಯನ್ನು ಎದುರಿಸಲಿಲ್ಲ. ಸುರಂಗಗಳಿಗೆ ಸ್ಫೋಟಕಗಳನ್ನು ಸ್ಪೋಟಿಸಿದಾಗ ಕಾರ್ಮಿಕರು ಮತ್ತು ಸುತ್ತಮುತ್ತಲಿನ ಜನರ ಸುರಕ್ಷತೆಯು ಅತಿಮುಖ್ಯವಾಗಿದೆ ಎಂದರು.
ಸುರಂಗ ಮಾರ್ಗದ ಸಮೀಪದ ಪ್ರದೇಶದಲ್ಲಿ ಕಲ್ಲುಗಳು, ಬಂಡೆಗಳು ಅಥವಾ ಅಂತಹ ಯಾವುದೇ ವಸ್ತುಗಳು ಬೀಳದಂತೆ ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ. ಇದಕ್ಕಾಗಿ ನಮ್ಮ ಕಾರ್ಮಿಕರಿಂದ ಸಾಕಷ್ಟು ಕೆಲಸ ಮಾಡಿಸಿದ್ದೇವೆ ಎಂದು ತಿಳಿಸಿದರು.
2016 ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಎನ್‌ಎಚ್‌ಎಸ್‌ಆರ್‌ಸಿಎಲ್ ಬುಲೆಟ್ ರೈಲು ಯೋಜನೆಗೆ 2017 ರಲ್ಲಿ ಅಡಿಪಾಯ ಹಾಕಿತು. ಡಿಸೆಂಬರ್ 2023 ರ ವೇಳೆಗೆ ಅದನ್ನು ಸಿದ್ಧಪಡಿಸಲು ಪ್ರಸ್ತಾವನೆ ಸಲ್ಲಿಸಲಾಯಿತು. ಆದಾಗ್ಯೂ, ಭೂಸ್ವಾಧೀನ ಸಮಸ್ಯೆಗಳು ಮಹತ್ವಾಕಾಂಕ್ಷೆಯ ಯೋಜನೆಯನ್ನು ವಿಳಂಬಗೊಳಿಸಿತು.
ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದರೂ ಯೋಜನೆ ಕಾರ್ಯಗತಗೊಳಿಸುವ ಗಡುವನ್ನು ಇನ್ನೂ ತಿಳಿಸಲಾಗಿಲ್ಲ. ಈ ಬುಲೆಟ್ ರೈಲು ಬಳಸುವ ಪ್ರಯಾಣಿಕರು 508 ಕಿಮೀ ಪ್ರಯಾಣವನ್ನು 2 ಗಂಟೆ 7 ನಿಮಿಷಗಳಲ್ಲಿ ಮುಗಿಸಬಹುದು. ಪ್ರಸ್ತುತ, ರೈಲು ಪ್ರಯಾಣವು ಸುಮಾರು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ' ಎಂದು ಎನ್‌ಎಚ್‌ಎಸ್‌ಆರ್‌ಸಿಎಲ್‌ನ ವಕ್ತಾರರು ತಿಳಿಸಿದ್ದಾರೆ.












Click it and Unblock the Notifications