India Vs Pakistan: ಪಾಕಿಸ್ತಾನದ ವಿರುದ್ಧ ಯುದ್ಧ ಶುರುವಾದರೆ ಭಾರತವನ್ನ ಬೆಂಬಲಿಸುವ ದೇಶಗಳು...
ಭಾರತ & ಪಾಪಿ ಪಾಕಿಸ್ತಾನದ ನಡುವೆ ಯುದ್ಧ ನಡೆಯುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಪಾಪಿ ಉಗ್ರರು ಪಾಪಿ ಪಾಕಿಸ್ತಾನದ ಮೂಲಕ ಬಂದು, ಭಾರತದ ಕಿರೀಟದಂತೆ ಇರುವ ನಮ್ಮ ಕಾಶ್ಮೀರದ ಮೇಲೆ ದಾಳಿಯನ್ನ ಮಾಡಿದ್ದರು. ಈ ಘಟನೆ ಭಾರತವನ್ನ ಕೆರಳಿಸಿದ್ದು, ಇದೀಗ ಯುದ್ಧ ಗ್ಯಾರಂಟಿ ಆಗಿದೆ. ಹಾಗಿದ್ರೆ ಪಾಕಿಸ್ತಾನದ ವಿರುದ್ಧ ಯುದ್ಧ ಶುರುವಾದರೆ ಭಾರತವನ್ನ ಬೆಂಬಲಿಸುವ ದೇಶಗಳು ಯಾವುವು?
ಜಮ್ಮು & ಕಾಶ್ಮೀರ ಬಿಟ್ಟು ಭಾರತವನ್ನ ಕಲ್ಪಿಸಿಕೊಳ್ಳುವುದಕ್ಕೂ ಅಸಾಧ್ಯ, ಹೀಗಿದ್ದಾಗಲೇ ಪಾಪಿ ಪಾಕಿಸ್ತಾನ ಸೇರಿ ಭಾರತದ ಶತ್ರು ದೇಶಗಳು ಜಮ್ಮು & ಕಾಶ್ಮೀರದ ಮೇಲೆ ಕಣ್ಣು ಹಾಕಿ ಕೂತಿವೆ. ಇಷ್ಟೆಲ್ಲಾ ಇದ್ದರೂ ಭಾರತ ಮಾತ್ರ ಕಣಿವೆ ರಾಜ್ಯವನ್ನು ರಕ್ಷಣೆ ಮಾಡಿಕೊಂಡು ಬಂದಿದ್ದು, ಎಲ್ಲವೂ ಸರಿ ಇದ್ದಾಗಲೇ ಪಾಪಿ ಉಗ್ರರು ಕಾಶ್ಮೀರಕ್ಕೆ ಬಂದು ದಾಳಿ ಮಾಡಿದ್ದಾರೆ. ಇದು ಇಡೀ ಭಾರತೀಯರನ್ನ ಆಕ್ರೋಶ ಹೊರ ಹಾಕುವಂತೆ ಮಾಡುತ್ತಿದೆ.

ಈ ಕಾರಣಕ್ಕೆ ಜಮ್ಮು & ಕಾಶ್ಮೀರ ಭಾಗದಲ್ಲಿ ಉಗ್ರರಿಗೆ ಕೂಡ ಪ್ರಚೋದನೆ ನೀಡ್ತಿರುವ ಆರೋಪ ಪಾಪಿ ಪಾಕಿಸ್ತಾನ ಮೇಲೆ ಇದೆ. ಹಲವು ವರ್ಷಗಳಿಂದಲೂ ಇಲ್ಲಿ ನೆಮ್ಮದಿಯೇ ಇಲ್ಲ ಹೀಗಿದ್ದರೂ ಕಳೆದ ಕೆಲ ವರ್ಷಗಳಿಂದ ಉಗ್ರರ ಹಾವಳಿಯು ಒಂದಷ್ಟು ಕಡಿಮೆ ಆಗಿತ್ತು. ಆದರೆ ಇದೀಗ ಮತ್ತೆ ಬಾಲ ಬಿಚ್ಚಿರುವ ಉಗ್ರರು ಜಮ್ಮು & ಕಾಶ್ಮೀರದಲ್ಲಿ ರಕ್ತಪಾತ ನಡೆಸಿದ್ದಾರೆ. ಈ ದುರ್ಘಟನೆಯು 2019ರ ಪುಲ್ವಾಮಾ ದಾಳಿ ನಂತರದ ಅತ್ಯಂತ ಘೋರ & ಭೀಕರ ದಾಳಿ ಆಗಿದೆ. ಹೀಗಾಗಿ ಯುದ್ಧ ನಡೆಯುವ ಸಾಧ್ಯತೆ ದಟ್ಟವಾಗಿದ್ದು, ಭಾರತದ ಬೆಂಬಲಕ್ಕೆ ಯಾವೆಲ್ಲಾ ದೇಶಗಳು ನಿಲ್ಲುತ್ತವೆ ಗೊತ್ತಾ?
ರಷ್ಯಾ, ಅಮೆರಿಕ, ಯುರೋಪ್ ಬೆಂಬಲ ಯಾರಿಗೆ?
ಭಾರತೀಯರ ರಕ್ತ ಕೊತ ಕೊತ ಕುದಿಯುತ್ತಿದೆ.. ಭಾರತ ಮಾತೆಯ ಕಿರೀಟದಂತೆ ಇರುವ ನಮ್ಮ ಜಮ್ಮು & ಕಾಶ್ಮೀರದಲ್ಲಿ 26 ಭಾರತೀಯರ ಹತ್ಯೆ ದೊಡ್ಡ ಕಿಚ್ಚು ಹೊತ್ತಿಸಿದೆ. ಜಗತ್ತಿನಾದ್ಯಂತ ಜಮ್ಮು & ಕಾಶ್ಮೀರದ ಉಗ್ರರ ಅಟ್ಯಾಕ್ ಬಗ್ಗೆ ಆಕ್ರೋಶದ ಕಹಳೆಯೇ ಮೊಳಗಿದೆ. ಹೀಗಿದ್ದಾಗಲೇ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಭಾರತ ಯುದ್ಧಕ್ಕೆ ನಿಂತರೆ ನಮಗೆ ಬೆಂಬಲ ನೀಡೋದಕ್ಕೆ ಮುಂದೆ ಬರುವ ಮೊದಲ ದೇಶ ರಷ್ಯಾ ಎನ್ನಬಹುದು.
ಹಾಗೇ ಯುರೋಪ್ ದೇಶಗಳ ಬೆಂಬಲ ಕೂಡ ಭಾರತಕ್ಕೆ ಸಿಗುವ ನಿರೀಕ್ಷೆ ಇದೆ, ಆದರೆ ಅಮೆರಿಕ ಮಾತ್ರ ಈ ವಿಚಾರದಲ್ಲಿ ಮತ್ತೊಮ್ಮೆ ನಾಟಕ ಆಡುತ್ತಿದೆ. ಪಾಕಿಸ್ತಾನದ ಪರವಾಗಿ ಈಗಲೂ ಅಮೆರಿಕ ಮೃದು ದೋರಣೆ ಹೊಂದಿದ ಹಿನ್ನೆಲೆ, ಯುದ್ಧದಲ್ಲಿ ಭಾರತಕ್ಕೆ ಬೆಂಬಲ ನೀಡುವುದು ಕಷ್ಟ ಎನ್ನಲಾಗುತ್ತಿದೆ. ಹಾಗಾದ್ರೆ ಆಸ್ಟ್ರೇಲಿಯಾ & ಇಸ್ರೇಲ್ ನಿರ್ಧಾರ ಏನು ಆಗಬಹುದು?
ಇಸ್ರೇಲ್ ಕೂಡ ಬೆಂಬಲ ನೀಡಲಿದೆ!
ಮತ್ತೊಂದು ಕಡೆ ಇಸ್ರೇಲ್ ಕೂಡ ಭಾರತವನ್ನ ಬೆಂಬಲಿಸಲಿದೆ. ಹಾಗೇ ಆಸ್ಟ್ರೇಲಿಯಾ ಕೂಡ ಈ ವಿಚಾರದಲ್ಲಿ ಭಾರತದ ಬೆನ್ನಿಗೆ ನಿಲ್ಲುವ ನಿರೀಕ್ಷೆ ಇದ್ದು, ಆಫ್ರಿಕಾದ ದೇಶಗಳು ಭಾರತ ಗೆಲ್ಲಲಿ ಎಂದು ಬೆಂಬಲ ನೀಡಲಿವೆ. ಆದರೆ ಪಾಕಿಸ್ತಾನಕ್ಕೆ ಮಧ್ಯಪ್ರಾಚ್ಯ ದೇಶಗಳಿಂದ ಭಾರಿ ಬೆಂಬಲ ಸಿಗುವ ಸಾಧ್ಯತೆ ಇದೆ, ಯಾಕಂದ್ರೆ ಈ ದೇಶಗಳು ಪದೇ ಪದೇ ಪಾಕಿಸ್ತಾನ ಪರವಾಗಿ ಮಾತನಾಡುತ್ತಿವೆ.












Click it and Unblock the Notifications