ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕ್ ಗೆ ಇರುವ ಕ್ರೇಜ್ ಹೆಲ್ಮೆಟ್ ಗೆ ಯಾಕಿಲ್ಲ? ಐಪಿಎಸ್ ಅಧಿಕಾರಿ ಪ್ರಶ್ನೆ!

|
Google Oneindia Kannada News

ಚೀನಾದಲ್ಲಿ ಮಹಾ ಮಾರಿಯಾಗಿ ಕಾಡುತ್ತಿರುವ ಕೊರೊನಾ ವೈರಸ್ ಇದೀಗ ಭಾರತಕ್ಕೂ ವಕ್ಕರಿಸಿದೆ. ಇದರಿಂದ ಭಾರತೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಡೆಡ್ಲಿ ಕೊರೊನಾ ಸೋಂಕು ಹರಡದಿರಲು ಭಾರತ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಇತ್ತ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಹಲವು ಮಂದಿ ಮಾಸ್ಕ್ ಗೆ ಮೊರೆ ಹೋಗಿದ್ದಾರೆ. ಕೊರೊನಾ ವೈರಸ್ ಹರಡುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಮಾಸ್ಕ್ ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಬೇಡಿಕೆಗೆ ತಕ್ಕ ಹಾಗೆ ಮಾಸ್ಕ್ ಗಳ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಮಾಸ್ಕ್ ಗಳಿಗಾಗಿ ಹಾಹಾಕಾರ ಶುರುವಾಗಿದೆ.

Coronavirus Scare: People Are Crazy For Masks Not For Helmets Tweets IPS Pankaj Nain

ಕೊರೊನಾ ಭೀತಿ: ಆಸ್ಪತ್ರೆಯಲ್ಲಿದ್ದ 2000 ಮಾಸ್ಕ್ ಕಳ್ಳತನಕೊರೊನಾ ಭೀತಿ: ಆಸ್ಪತ್ರೆಯಲ್ಲಿದ್ದ 2000 ಮಾಸ್ಕ್ ಕಳ್ಳತನ

ಇದನ್ನ ಗಮನಿಸಿದ ಐಪಿಎಸ್ ಆಫೀಸರ್ ಪಂಕಜ್ ನೈನ್ ''ಭಾರತದಲ್ಲಿ ಕೇವಲ ಒಂದು ಕೊರೊನಾ ವೈರಸ್ ಕೇಸ್ ನಿಂದಾಗಿ ಮಾಸ್ಕ್ ಗಳಿಗೆ ಕ್ರೇಜ್ ಶುರುವಾಗಿದೆ. ಆದ್ರೆ, ಪ್ರತಿ ದಿನ ರಸ್ತೆ ಅಪಘಾತದಲ್ಲಿ 400 ಮಂದಿ ಸಾವನ್ನಪ್ಪುತ್ತಾರೆ. ಆದರೂ, ಹೆಲ್ಮೆಟ್ ಗಳಿಗೆ ಕ್ರೇಜ್ ಇಲ್ಲ'' ಎಂದು ಟ್ವೀಟ್ ಮಾಡಿದ್ದಾರೆ.

'ಮಾಸ್ಕ್ ಮಾತ್ರವಲ್ಲ, ಹೆಲ್ಮೆಟ್ ಧರಿಸಿಬೇಕು'- ಡಿಜಿಪಿ ಟ್ವೀಟ್'ಮಾಸ್ಕ್ ಮಾತ್ರವಲ್ಲ, ಹೆಲ್ಮೆಟ್ ಧರಿಸಿಬೇಕು'- ಡಿಜಿಪಿ ಟ್ವೀಟ್

ಜೊತೆಗೆ ರಸ್ತೆ ಬದಿಯ ತಿಂಡಿ ಮಾರುವ ವ್ಯಾಪಾರಿಯೊಬ್ಬ ಕಲುಷಿತ ನೀರಿನಲ್ಲಿ ಪಾತ್ರೆ ತೊಳೆಯುತ್ತಿರುವ ವಿಡಿಯೋವನ್ನೂ ಪಂಕಜ್ ನೈನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದೊಂದಿಗೆ, ''ಇದಕ್ಕಿಂತಲೂ ಕೊರೊನಾ ವೈರಸ್ ಹೆಚ್ಚು ಅಪಾಯಕಾರಿಯೇ.?'' ಎಂದು ಪ್ರಶ್ನಿಸಿದ್ದಾರೆ.

English summary
Coronavirus scare: People are crazy for masks not for Helmets tweets IPS Pankaj Nain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X