ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ನಿಂದ ಭಾರತೀಯರನ್ನು ರಕ್ಷಿಸಲು ಚೀನಾ ಅಸ್ತ್ರ

|
Google Oneindia Kannada News

ನವದೆಹಲಿ, ಏಪ್ರಿಲ್.16: ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಲ್ಲಿಯೇ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್ ನ್ನು ರಕ್ಷಿಸಲು ಚೀನಾದಿಂದ ಸುರಕ್ಷತಾ ಕಿಟ್ ಗಳನ್ನು ಆಮದು ಮಾಡಿಕೊಳ್ಳಲಾಗಿದೆ.

ಗುರುವಾರ ಚೀನಾದಿಂದ ಭಾರತಕ್ಕೆ 3 ಲಕ್ಷ ಆಂಟಿಬಾಡಿ ಟೆಸ್ಟಿಂಗ್ ಕಿಟ್ ಸೇರಿದಂತೆ 6.5 ಲಕ್ಷ ವೈದ್ಯಕೀಯ ಕಿಟ್ ಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

2022ರವರೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಮತ್ತೆ ಆಪತ್ತು2022ರವರೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಮತ್ತೆ ಆಪತ್ತು

ಕೊರೊನಾ ವೈರಸ್ ವಿರುದ್ಧ ಹೋರಾಡುವುದಕ್ಕಾಗಿ ಅಗತ್ಯವಿರುವ ವೈದ್ಯಕೀಯ ಸರಕುಗಳನ್ನು ಆಮದು ಮಾಡಿಕೊಳ್ಳುದಕ್ಕೆ ಸಂಬಂಧಿಸಿದಂತೆ ವಿದೇಶಿ ಕಂಪನಿಗಳ ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿರಂತರ ಸಂಪರ್ಕದಲ್ಲಿದೆ.

6.5 ಲಕ್ಷ ವೈದ್ಯಕೀಯ ಕಿಟ್ ಆಮದು ಮಾಡಿಕೊಂಡ ಭಾರತ

6.5 ಲಕ್ಷ ವೈದ್ಯಕೀಯ ಕಿಟ್ ಆಮದು ಮಾಡಿಕೊಂಡ ಭಾರತ

ಚೀನಾದಲ್ಲಿ ಮೂರು ಹಂತಗಳಲ್ಲಿ ವೈದ್ಯಕೀಯ ಕಿಟ್ ಗಳನ್ನು ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಪೈಕಿ ಗುರುವಾರ ಮೊದಲ ಹಂತದಲ್ಲಿ 6.5 ಲಕ್ಷ ವೈದ್ಯಕೀಯ ಕಿಟ್ ಗಳನ್ನು ತರಿಸಿಕೊಳ್ಳಲಾಗಿದೆ. ಚೀನಾದ ಗ್ವಾಂಗಜೌ ವೊಂಡ್ಫೊದಿಂದ 3 ಲಕ್ಷ ಆಂಟಿಬಾಡಿ ಟೆಸ್ಟಿಂಗ್ ಕಿಟ್ ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಝುಹೈ ಲಿವ್ಜೋನ್ ನಿಂದ 2.5 ಲಕ್ಷ ಹಾಗೂ ಎಂಜಿಐ ಶೆಂಜೇನ್ ನಿಂದ ಒಂದು ಲಕ್ಷ RNA ಎಕ್ಸ್ ಟ್ರ್ಯಾಕ್ಷನ್ ಕಿಟ್ ಗಳನ್ನು ತರಿಸಿಕೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಮುಂದಿನ 15 ದಿನಗಳಲ್ಲಿ 20 ಲಕ್ಷ ಕಿಟ್ ರವಾನೆ

ಮುಂದಿನ 15 ದಿನಗಳಲ್ಲಿ 20 ಲಕ್ಷ ಕಿಟ್ ರವಾನೆ

ಚೀನಾದಿಂದ ಗುರುವಾರ 6.5 ಲಕ್ಷ ವೈದ್ಯಕೀಯ ಕಿಟ್ ಗಳು ಬಂದಿದ್ದು ಎರಡು ರಾಷ್ಟ್ರಗಳ ನಡುವೆ ಚೀನಾದಲ್ಲಿ ಇರುವ ಭಾರತ ರಾಯಭಾರಿ ವಿಕ್ರಮ್ ಮಿಸ್ರಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತಕ್ಕೆ ಕಳುಹಿಸಲೆಂದೇ 20 ಲಕ್ಷ ವೈದ್ಯಕೀಯ ಕಿಟ್ ಗಳನ್ನು ಸಿದ್ಧಪಡಿಸಲಾಗಿದ್ದು, ಮುಂದಿನ 15 ದಿನಗಳಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ವಿಕ್ರಮ್ ಮಿಸ್ರಿ ಟ್ವೀಟ್ ಮಾಡಿದ್ದಾರೆ.

ಕೊರೊನಾ ವೈದ್ಯಕೀಯ ತಪಾಸಣೆ ವಿಳಂಬ ಹಿನ್ನೆಲೆಯಲ್ಲಿ ಕ್ರಮ

ಕೊರೊನಾ ವೈದ್ಯಕೀಯ ತಪಾಸಣೆ ವಿಳಂಬ ಹಿನ್ನೆಲೆಯಲ್ಲಿ ಕ್ರಮ

ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯ ಪರೀಕ್ಷೆಗೆ ಅಗತ್ಯವಿರುವ ಆಂಟಿಬಾಡಿ ಟೆಸ್ಟಿಂಗ್ ಕಿಟ್ ಸಂಗ್ರಹದಲ್ಲಿ ಕೊರತೆಯಿದ್ದ ಹಿನ್ನೆಲೆ ತಪಾಸಣಾ ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಈ ಹಿನ್ನೆಲೆ ವಿಳಂಬವಾಗದಂತೆ ಎಚ್ಚರಿಕೆ ವಹಿಸಲು ಆಂಟಿಬಾಡಿ ಟೆಸ್ಟಿಂಗ್ ಕಿಟ್ ತರಿಸಿಕೊಳ್ಳಲಾಗುತ್ತಿದೆ. ಆಂಟಿಬಾಡಿ ಟೆಸ್ಟಿಂಗ್ ಕಿಟ್ ಬಳಸಿಕೊಂಡು ದೇಶದಲ್ಲಿ ಗುರುತಿಸಿರುವ ವಲಯಗಳಲ್ಲಿ ವೈದ್ಯಕೀಯ ತಪಾಸಣೆಯನ್ನು ಕ್ಷಿಪ್ರಗತಿಯಲ್ಲಿ ನಡೆಸಲು ಸೂಚನೆ ನೀಡಲಾಗಿದೆ.

ಚೀನಾ ವೈದ್ಯಕೀಯ ಕಿಟ್ ಗಳ ಗುಣಮಟ್ಟ ಕಡಿಮೆ

ಚೀನಾ ವೈದ್ಯಕೀಯ ಕಿಟ್ ಗಳ ಗುಣಮಟ್ಟ ಕಡಿಮೆ

ಈ ಮೊದಲು ಗುಣಮಟ್ಟ ಪರೀಕ್ಷೆಯಲ್ಲಿ ವಿಫಗೊಂಡಿದ್ದ ಚೀನಾ ಕಿಟ್ ಗಳನ್ನು ರವಾನೆ ಮಾಡದಂತೆ ಬೀಜಿಂಗ್ ನಲ್ಲಿ ತಡೆ ಹಿಡಿಯಲಾಗಿತ್ತು. ಇದೇ ಸಂದರ್ಭದಲ್ಲಿ ದಕ್ಷಿಣ ಕೊರಿಯಾ, ಸಿಂಗಾಪೂರ್ ಮತ್ತು ಚೀನಾದಿಂದ ವೈದ್ಯಕೀಯ ಕಿಟ್ ರವಾನಿಸುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

English summary
Coronavirus: India Import 6.5 Lakh Medical Testing Kit From China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X