• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೃತ್ಯುಭಯ ಹುಟ್ಟಿಸಿರುವ ರಾಕ್ಷಸ ಕೊರೊನಾ ವೈರಸ್ ನ ಅಸಲಿ ಚಿತ್ರ ಹೀಗಿದೆ

|

ಪುಣೆ, ಮಾರ್ಚ್ 28: ವಿಶ್ವದಾದ್ಯಂತ ಭಯ ಭೀತಿ ಹುಟ್ಟಿಸಿರುವ ಮಾರಣಾಂತಿಕ ಕೊರೊನಾ ವೈರಸ್ ನ ಅಸಲಿ ಚಿತ್ರ ಇದೀಗ ಬಹಿರಂಗವಾಗಿದೆ. ಇಲ್ಲಿಯವರೆಗೂ 906 ಮಂದಿ ಭಾರತೀಯರನ್ನು ಕಾಡಿಸಿರುವ ಕೊರೊನಾ ವೈರಸ್ ನ ನಿಜವಾದ ಚಿತ್ರಗಳು ಬಿಡುಗಡೆಯಾಗಿವೆ.

   2 people disobeying home quarentine in Chitradurga | Oneindia Kannada

   ಕೊರೊನಾ ವೈರಸ್ ಚಿತ್ರಗಳನ್ನು ಪುಣೆಯ ಐಸಿಎಂಆರ್-ಎನ್ಐವಿ ವಿಜ್ಞಾನಿಗಳ ತಂಡ ಸೆರೆಹಿಡಿದಿದೆ. ಟ್ರಾನ್ಸ್ ಮಿಷನ್ ಎಲೆಕ್ಟ್ರಾನಿಕ್ ಮೈಕ್ರೋಸ್ಕೋಪ್ ಬಳಸಿ ಕೊರೊನಾ ವೈರಸ್ ಚಿತ್ರಗಳನ್ನು ಸೆರೆಹಿಡಿಯಲಾಗಿದ್ದು, ಈ ಚಿತ್ರಗಳು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ನಲ್ಲಿ ಪ್ರಕಟಗೊಂಡಿದೆ. ಇದು ಭಾರತದಲ್ಲಿ ದೃಢಪಟ್ಟ ಮೊದಲ ಕೋವಿಡ್-19 ಪಾಸಿಟೀವ್ ರೋಗಿಯಲ್ಲಿದ್ದ ವೈರಾಣುವಿನ ಚಿತ್ರಗಳು.

   ಕೊರೊನಾ ಕರಿನೆರಳು: ಸೋಂಕಿತರ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಅಮೇರಿಕಾ!

   ಜನವರಿ 30 ರಂದು ಭಾರತದಲ್ಲಿ ಮೊದಲ ಕೋವಿಡ್-19 ಪಾಸಿಟಿವ್ ಪ್ರಕರಣ ದಾಖಲಾಗಿತ್ತು. ವಿದ್ಯಾಭ್ಯಾಸಕ್ಕೆಂದು ಚೀನಾದ ವುಹಾನ್ ಗೆ ಹೋಗಿ, ಅಲ್ಲಿಂದ ಭಾರತಕ್ಕೆ ಹಿಂದಿರುಗಿದ್ದ ಕೇರಳದ ವಿದ್ಯಾರ್ಥಿಗೆ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯಿಂದ ಪಡೆದ ಗಂಟಲು ದ್ರವವನ್ನು ಪರೀಕ್ಷೆಗಾಗಿ ಪುಣೆಯ ಲ್ಯಾಬ್ ಗೆ ಕಳುಹಿಸಿಕೊಡಲಾಗಿತ್ತು.

   ಸಂಶೋಧನೆ ವೇಳೆ ದ್ರವ ಮಾದರಿಯಲ್ಲಿ ಪತ್ತೆಯಾದ ವೈರಸ್ ಗಳು ವುಹಾನ್ ನ ವೈರಸ್ ಮಾದರಿಗಳೊಂದಿಗೆ 99.98% ತಾಳೆ ಆಗಿರುವುದು ಕಂಡುಬಂದಿದೆ. ಪ್ರಯೋಗದ ವೇಳೆ ಕೋವಿಡ್-19 ರೋಗಕ್ಕೆ ಕಾರಣವಾಗುವ SARS-Cov-2 ವೈರಸ್ ಗಳು ದುಂಡಗಿನ ರೂಪದಲ್ಲಿದ್ದು, ಮೈ ಮೇಲೆ ಹೊರಚಾಚಿದ ಕಾಂಡದ ರೀತಿಯ ಮುಳ್ಳುಗಳನ್ನು ಹೊಂದಿರುವುದು ಗೋಚರವಾಗಿದೆ.

   ಇನ್ನು, ಇದೇ ಲ್ಯಾಬ್ ನಲ್ಲಿ ಅಧ್ಯಯನದ ಸಲುವಾಗಿ ಕೊರೊನಾ ವೈರಸ್ ನ ಮೂಲ ತಳಿಯ ವಿಶಿಷ್ಟ ಲಕ್ಷಣಗಳಿಗೆ ಹೋಲಿಕೆಯಾಗುವ ಒಂದು ನಿರ್ದಿಷ್ಟ ವೈರಾಣು ಕಣವೊಂದನ್ನು ಸಂರಕ್ಷಿಸಿ ಇಡಲಾಗಿದೆ.

   English summary
   Coronavirus: First Electron Microscope Image of Covid-19 Virus from India released.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X