• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾರು ತಯಾರಿಕೆ ಬಿಟ್ಟು ವೆಂಟಿಲೇಟರ್ಸ್ ತಯಾರಿಕೆಗೆ ಮುಂದಾದ ಮಹೀಂದ್ರಾ

|

ನವದೆಹಲಿ, ಮಾರ್ಚ್ 23: ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾರು ತಯಾರಿಕೆ ಬಿಟ್ಟು ವೆಂಟಿಲೇರ್ಸ್ ತಯಾರಿಸಲು ಮಹೀಂದ್ರಾ ಸಂಸ್ಥೆ ಮುಂದಾಗಿದೆ.

ಮಹಾರಾಷ್ಟ್ರದ ಪುಣೆಯಲ್ಲಿ ಹೆಚ್ಚಿನ ಕಾರು ತಯಾರಿಕಾ ಕಂಪನಿಗಳನ್ನು ಹೊಂದಿದ್ದು , ಮಾರ್ಚ್ 31ರವರೆಗೂ ಕಾರ್ಯಾಚರಣೆ ನಿಲ್ಲಿಸಲು ನಿರ್ಧರಿಸಿವೆ. ಹಾಗೆಯೇ ತನ್ನ ರೆಸಾರ್ಟ್‌ ಒಂದನ್ನು ಸೋಂಕಿತರ ಚಿಕಿತ್ಸೆಗಾಗಿ ನೀಡಲು ನಿರ್ಧರಿಸಿರುವುದಾಗಿ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.

ಕೊರೊನಾ ವೈರಸ್‌ನಿಂದ ಗುಣಮುಖರಾದ ಮೇಲೆ ಉಸಿರು ನಿಲ್ಲಿಸಿದ ರೋಗಿ

ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ, ಮಹೀಂದ್ರಾ , ಬಜಾಜ್ ಆಟೋ, ಮರ್ಸಿಡಿಸ್ ಬೆಂಜ್, ಫಿಯೆಟ್ ಕ್ಲಿಸ್ಟರ್ ಆಟೋ ಮೊಬೈಲ್ಸ್‌ ಹಾಗೂ ಹ್ಯೂಂಡೈ ಮೋಟಾರ್ ಕಂಪನಿಗಳು ಕೊರೊನಾ ವೈರಸ್ ಸೋಂಕು ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವನ್ನು ವಹಿಸುತ್ತಿವೆ.

ಈ ಸಂದರ್ಭದಲ್ಲಿ ಉದ್ಯೋಗ ಕಡಿತಗೊಳಿಸುವುದಿಲ್ಲ ಹಾಗೂ ಎಲ್ಲಾ ನೌಕರರಿಗೆ ವೇತನ ಮುಂದುವರೆಸುವುದಾಗಿ ಫಿಯೆಟ್ ಹೇಳಿದೆ. ಹೀರೋ ಮೋಟೊ ಕಾರ್ಪ್ ಲಿಮಿಟೆಡ್ ಸಹ ಭಾರತ, ಬಾಂಗ್ಲಾದೇಶ ಹಾಗೂ ಕೊಲಂಬಿಯಾದಲ್ಲಿನ ಬೈಕ್ ತಯಾರಿಕಾ ಘಟಕಗಳಲ್ಲಿ ಕಾರ್ಯಾಚರಣೆ ನಿಲ್ಲಿಸಿವೆ.

ಕೊರೊನಾ ಹತೋಟಿಗೆ ತರೋದು ಹೇಗೆ: ಆನಂದ್ ಮಹಿಂದ್ರಾ ಟಿಪ್ಸ್ ಇಲ್ಲಿದೆ

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಮುಂದಿನ ಕೆಲವು ವಾರ ಲಾಕ್‌ಡೌನ್ ಮಾಡುವ ಕ್ರಮದಿಂದ ಸೋಂಕು ಹರಡುವಿಕೆಯನ್ನು ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

English summary
Anand Mahindra has announced a series of measures, including production of ventilators at Mahindra's factories, to help India fight coronavirus outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X