ಭಾರತದಲ್ಲಿ 9 ಸಾವಿರಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ಬೆಂಗಳೂರು, ಏಪ್ರಿಲ್ 13: ಕೊರೊನಾ ಸೋಂಕಿತರ ಸಂಖ್ಯೆ ಭಾರತದಲ್ಲಿ 9 ಸಾವಿರದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 35 ಮಂದಿ ಮೃತಪಟ್ಟಿದ್ದಾರೆ. ಇದುವರೆಗೂ ದೇಶದಲ್ಲಿ ಕೊರೊನಾ ವೈರಸ್‌ಗೆ 308 ಮಂದಿ ಬಲಿಯಾಗಿದ್ದಾರೆ.

ನಾವೆಲ್ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 9152ಕ್ಕೆ ಏರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಇಂದಿನಿಂದ ತಮ್ಮ ಕಚೇರಿ ತೆರೆದು ಮತ್ತೆ ಕೆಲಸ ಆರಂಭಿಸಲಿದ್ದಾರೆ.

ಏಪ್ರಿಲ್ 30ರವರೆಗೆ ದೇಶದಲ್ಲಿ ಲಾಕ್‌ಡೌನ್ ವಿಸ್ತರಿಸಲಾಗಿದ್ದು ಒಂದೊಂದು ಜಿಲ್ಲೆಗಳಿಗೆ ಒಂದೊಂದು ಕಲರ್ ಕೋಡ್ ನೀಡಲಾಗಿದೆ.

Coronavirus Cases Rises In India To 9 Thousand

15ಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳಿದ್ದಲ್ಲಿ ಕೆಂಪು, ಅದಕ್ಕಿಂತ ಕಡಿಮೆ ಪ್ರಕರಣಗಳಿದ್ದರೆ ಕೇಸರಿ, ಅದಕ್ಕಿಂತಲೂ ಕಡಿಮೆ ಪ್ರಕರಣಗಳಿದ್ದರೆ ಹಸಿರು ಬಣ್ಣದ ಕೋಡ್ ನೀಡಲಾಗಿದೆ.

ದೇಶದ 364 ಜಿಲ್ಲೆಗಳಲ್ಲಿ ಕೊರೊನಾ ಹರಡಿದೆ. ಮಾರ್ಚ್ 29ರಂದು ಅದರ ಸಂಖ್ಯೆ 160 ಇತ್ತು, ಏಪ್ರಿಲ್ 6ರಷ್ಟೊತ್ತಿಗೆ 284ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 1985, ದೆಹಲಿ1154, ತಮಿಳುನಾಡು 1075, ಮಧ್ಯಪ್ರದೇಶ 532 ಹಾಗೂ ಗುಜರಾತಿನಲ್ಲಿ 516 ಮಂದಿ ಕೊರೊನಾ ಸೋಂಕಿತರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+