ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಮೂರನೇ ಅಲೆ ದೇಶಕ್ಕೆ ಅಪಾಯ ತರುವುದು ನಿಶ್ಚಿತ ಎನಿಸುತ್ತಿದೆ; ವರದಿ

|
Google Oneindia Kannada News

ಮುಂಬೈ, ಜುಲೈ 15: ದೇಶದಲ್ಲಿ ಕೊರೊನಾ ಎರಡನೇ ಅಲೆ ಪ್ರಭಾವ ತಗ್ಗುತ್ತಿದೆ. ಇದರ ಜೊತೆಜೊತೆಗೇ ಮೂರನೇ ಅಲೆ ಕುರಿತು ಎಚ್ಚರಿಕೆ ಗಂಟೆ ಬಾರಿಸಲಾಗುತ್ತಿದೆ. ಅಪಾಯಕಾರಿ ಡೆಲ್ಟಾ ರೂಪಾಂತರ ಪ್ರಕರಣಗಳ ಉಪಸ್ಥಿತಿ ಹಾಗೂ ಅವುಗಳಿಂದ ಇನ್ನಷ್ಟು ರೂಪಾಂತರಗಳ ಸೃಷ್ಟಿಯಾಗುತ್ತಿರುವುದು ದೇಶಕ್ಕೆ ನಿಜವಾದ ಅಪಾಯದ ಸೂಚನೆಯಾಗಿದೆ ಎಂದು ವಿದೇಶಿ ಸಂಸ್ಥೆಯೊಂದು ಎಚ್ಚರಿಕೆ ರವಾನಿಸಿದೆ.

ದೇಶದಲ್ಲಿ ಲಸಿಕಾ ಅಭಿಯಾನದ ವೇಗ ತಗ್ಗಿರುವುದು ಕೊರೊನಾ ಮೂರನೇ ಅಲೆಗೆ ದಾರಿ ಮಾಡಿಕೊಡಬಹುದಾಗಿದೆ. ಪ್ರತಿದಿನ 3.4 ಮಿಲಿಯನ್ ಡೋಸ್‌ ಲಸಿಕೆ ನೀಡಲಾಗುತ್ತಿದ್ದು, ದಿನನಿತ್ಯ ಶೇ 45ರಷ್ಟು ಸೋಂಕಿನ ಪ್ರಕರಣಗಳು ಗ್ರಾಮೀಣ ಪ್ರದೇಶಗಳಿಂದ ವರದಿಯಾಗುತ್ತಿವೆ. ಇದು ಅಪಾಯದ ಮುನ್ಸೂಚನೆ ಎಂದು ಯುಬಿಎಸ್‌ ಸೆಕ್ಯುರಿಟೀಸ್ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞ ತನ್ವೀ ಗುಪ್ತಾ ಜೈನ್ ಅವರು ಎಚ್ಚರಿಕೆ ನೀಡಿದ್ದಾರೆ. ಮುಂದೆ ಓದಿ...

 ನಾವು ಕೊರೊನಾ 3ನೇ ಅಲೆಯ ಆರಂಭಿಕ ಹಂತದಲ್ಲಿದ್ದೇವೆ: WHO ನಾವು ಕೊರೊನಾ 3ನೇ ಅಲೆಯ ಆರಂಭಿಕ ಹಂತದಲ್ಲಿದ್ದೇವೆ: WHO

"ಡೆಲ್ಟಾ ಅಪಾಯವನ್ನು ತಳ್ಳಿಹಾಕುವಂತಿಲ್ಲ"

"ಕೊರೊನಾ ಎರಡನೇ ಅಲೆ ಪ್ರಭಾವ ತಗ್ಗಿ, ಹಲವು ರಾಜ್ಯಗಳಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಸತತ ಏಳು ವಾರಗಳ ನಂತರ ಆರ್ಥಿಕ ಚಟುವಟಿಕೆಗಳು ಸುಧಾರಿಸುತ್ತಿವೆ. ಎರಡನೇ ಅಲೆ ಕೊನೆಗಾಣುವಂತೆ ಕಾಣುತ್ತಿರುವ ಈ ಸಂದರ್ಭದಲ್ಲಿ ಮೂರನೇ ಅಲೆ ಅಪಾಯ ಹೆಚ್ಚಾಗಿದೆ. ಅತಿವೇಗಿ ಎಂದು ಪರಿಗಣಿಸಲಾಗಿರುವ ಡೆಲ್ಟಾ ರೂಪಾಂತರ ತರುವ ಈ ಅಪಾಯದ ಗಂಭೀರತೆಯನ್ನು ತಳ್ಳಿಹಾಕುವಂತಿಲ್ಲ" ಎಂದು ತನ್ವೀ ಹೇಳಿದ್ದಾರೆ.

 ಮೂರನೇ ಅಲೆ ಸ್ಥಾಪಿತವಾಗುವ ಎಲ್ಲಾ ಸಾಧ್ಯತೆ

ಮೂರನೇ ಅಲೆ ಸ್ಥಾಪಿತವಾಗುವ ಎಲ್ಲಾ ಸಾಧ್ಯತೆ

ಹೆಚ್ಚು ಆತಂಕಕಾರಿ ಸಂಗತಿಯೆಂದರೆ, ಕಳೆದ ತಿಂಗಳು ಕೇವಲ 5% ಇದ್ದ ಪ್ರಕರಣಗಳು ಈಗ ಕೆಲವು ಜಿಲ್ಲೆಗಳಲ್ಲಿ 20% ಮೀರುತ್ತಿದೆ. ಈ ಮೂಲಕ ಎರಡನೇ ಅಲೆ ಕೊನೆಗೊಂಡಿದ್ದ ಜಿಲ್ಲೆಗಳಲ್ಲಿ ಮೂರನೇ ಅಲೆ ಸ್ಥಾಪಿತವಾಗುವ ಎಲ್ಲಾ ಸಾಧ್ಯತೆ, ಸೂಚನೆಗಳು ದೊರೆತಿವೆ. ಇಂಥ ಸೂಕ್ಷ್ಮ ಸಂದರ್ಭದಲ್ಲಿ ಜನರು ಕೊರೊನಾ ನಿಯಮಗಳನ್ನು ಪಾಲಿಸದೇ ಇದ್ದರೆ ಮುಂದಿನ ಅಪಾಯಕ್ಕೆ ಕಾರಣವಾಗಬಹುದಾಗಿದೆ" ಎಂದು ಎಚ್ಚರಿಸಿದ್ದಾರೆ.

ಕೇರಳ ಕೋವಿಡ್‌ ಹೆಚ್ಚಳ 3 ನೇ ಅಲೆಯ ಸೂಚನೆಯೇ, ಅಧ್ಯಯನ ವರದಿ ಹೇಳಿದ್ದೇನು?ಕೇರಳ ಕೋವಿಡ್‌ ಹೆಚ್ಚಳ 3 ನೇ ಅಲೆಯ ಸೂಚನೆಯೇ, ಅಧ್ಯಯನ ವರದಿ ಹೇಳಿದ್ದೇನು?

 ಸೋಂಕು ನಿಯಂತ್ರಣ ಕಷ್ಟಸಾಧ್ಯವಾಗಬಹುದು

ಸೋಂಕು ನಿಯಂತ್ರಣ ಕಷ್ಟಸಾಧ್ಯವಾಗಬಹುದು

ಮತ್ತೊಂದು ಚಿಂತೆಗೀಡು ಮಾಡುತ್ತಿರುವ ಸಂಗತಿಯೆಂದರೆ, ಲಸಿಕಾ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿರುವುದು. ಕೊರೊನಾ ಲಸಿಕೆ ಪೂರೈಕೆಯಲ್ಲಿ ಅಡಚಣೆ ಹಾಗೂ ಲಸಿಕೆ ತೆಗೆದುಕೊಳ್ಳಲು ಹಿಂಜರಿಕೆ ದೈನಂದಿನ ಸೋಂಕಿನ ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಜೂನ್‌ನಲ್ಲಿ ಪ್ರತಿದಿನ 4 ಮಿಲಿಯನ್ ಡೋಸ್‌ನಷ್ಟು ಲಸಿಕೆ ನೀಡಲಾಗುತ್ತಿತ್ತು. ಇದೀಗ ಅದರ ಸಂಖ್ಯೆ 3.4 ಮಿಲಿಯನ್ ಆಗಿದೆ. ಮೇ ತಿಂಗಳಿನಲ್ಲಿ ಈ ದರ ಎರಡು ಮಿಲಿಯನ್ ಇತ್ತು. ಹೀಗಾದರೆ ಸೋಂಕು ನಿಯಂತ್ರಣ ಕಷ್ಟಸಾಧ್ಯವಲ್ಲವೇ ಎಂದು ಪ್ರಶ್ನಿಸಿದ್ದಾರೆ.

"ಕೊರೊನಾ ಮೂರನೇ ಅಲೆಯ ಆರಂಭಿಕ ಹಂತದಲ್ಲಿದ್ದೇವೆ "

ವಿಶ್ವಾದ್ಯಂತ ಡೆಲ್ಟಾ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾವು ಕೊರೊನಾ ಸೋಂಕಿನ ಮೂರನೇ ಅಲೆಯ ಆರಂಭಿಕ ಹಂತದಲ್ಲಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧಾನಮ್ ತಿಳಿಸಿದ್ದಾರೆ. ಒಂದೆಡೆ ಡೆಲ್ಟಾ ರೂಪಾಂತರಿ ಸಂಖ್ಯೆ ಹೆಚ್ಚುತ್ತಿದೆ, ಇನ್ನೊಂದೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕೋವಿಡ್ ನಿಯಮಗಳನ್ನು ಮರೆಯುತ್ತಿದ್ದಾರೆ ಇದು ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದಿದ್ದಾರೆ. ಇದರ ಮಧ್ಯೆ ಡೆಲ್ಟಾ ರೂಪಾಂತರವು 111ಕ್ಕೂ ಹೆಚ್ಚು ದೇಶಗಳಲ್ಲಿದೆ. ಇದು ಈಗಾಗಲೇ ವಿಶ್ವಾದ್ಯಂತ ಹರಡಲು ಆರಂಭವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

English summary
Even second wave has ebbed, the increased presence of the Delta variant and the subsequent mutations of the coronavirus makes the third wave a real risk for the country, warns a foreign brokerage,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X