ದೇಶದಲ್ಲಿ ಮತ್ತೆ ಕೊರೊನಾ: 5 ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ

ಇತ್ತೀಚಿಗೆ ದೇಶದಲ್ಲಿ ಮತ್ತೆ ಕೊರೊನಾ ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಐದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ. ಕೋವಿಡ್ ಪ್ರಕರಣಗಳ ಉಲ್ಬಣವನ್ನು ದಾಖಲಿಸುತ್ತಿರುವ 5 ರಾಜ್ಯಗಳಾದ ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.

ಕೋವಿಡ್ -19 ಪ್ರಕರಣಗಳ ಹೆಚ್ಚಳವನ್ನು ವರದಿ ಮಾಡಿ ಸೋಂಕುಗಳ ಹರಡುವಿಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಆಯಾ ಸಂದರ್ಭಗಳಿಗೆ ಅನುಗುಣವಾಗಿ ತ್ವರಿತ ಕ್ರಮಗಳನ್ನು ಕೈಗೊಳ್ಳಲು; ವಿಶೇಷವಾಗಿ ಹೊಸ ಕ್ಲಸ್ಟರ್‌ಗಳನ್ನು ಟ್ರ್ಯಾಕ್ ಮಾಡಲು ಐದು ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

ಭಾರತದ ದೈನಂದಿನ ಕೋವಿಡ್ -19 ಸಂಖ್ಯೆಯು ಸುಮಾರು ಮೂರು ತಿಂಗಳ ನಂತರ ಶುಕ್ರವಾರ 4,000 ಸಂಖ್ಯೆಯನ್ನು ಮೀರಿದೆ. ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 4,041 ಹೊಸ ಪ್ರಕರಣಗಳು ಮತ್ತು 10 ಸಾವುಗಳು ದಾಖಲಾಗಿವೆ.

ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

ಪತ್ರದಲ್ಲಿ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, " ಭಾರತದ ಪ್ರಕರಣಗಳನ್ನು ಗಮನಿಸಿದರೆ ಸೋಂಕು ಸ್ಥಳೀಯವಾಗಿ ಮತ್ತೆ ಹರಡುವಿಕೆಯನ್ನು ಸೂಚಿಸುತ್ತಿದೆ" ಎಂದು ಹೇಳಿದ್ದಾರೆ. ಹೀಗಾಗಿ ಪರೀಕ್ಷಾ-ಟ್ರ್ಯಾಕ್-ಟ್ರೀಟ್‌ ಮತ್ತು ಲಸಿಕೆ ಹಾಗೂ ಕೋವಿಡ್-ಸೂಕ್ತ ಅನುಸರಣೆ ಮೂಲಕ ಕೊರೊನಾ ತಡೆಗಟ್ಟುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಲಹೆ ನೀಡಿದರು.

"ಮಾರ್ಗಸೂಚಿಗಳ ಪ್ರಕಾರ ಸಾಕಷ್ಟು ಪರೀಕ್ಷೆ ಮತ್ತು ಹೆಚ್ಚಿನ ಪ್ರಕರಣದ ಧನಾತ್ಮಕತೆಯನ್ನು ವರದಿ ಮಾಡುವ ಪ್ರದೇಶಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು, ಸೋಂಕು ಹರಡುವಿಕೆಯ ಮುಂಚೆ ಎಚ್ಚರಿಕೆಯ ಕ್ರಮಗಳನ್ನು ನಿಯಮಿತವಾಗಿ ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಮೇಲ್ವಿಚಾರಣೆ ಮಾಡುವುದು, ಅಂತರರಾಷ್ಟ್ರೀಯ ಪ್ರಯಾಣಿಕರ ನಿಗದಿತ ಮಾದರಿಗಳಿಗೆ ಜೀನೋಮಿಕ್ ಅನುಕ್ರಮ, ಸೆಂಟಿನೆಲ್ ಸೈಟ್‌ಗಳಿಂದ ಮಾದರಿಗಳ ಸಂಗ್ರಹ (ಗುರುತಿಸಲಾದ ಆರೋಗ್ಯ ಸೌಲಭ್ಯಗಳು), ಮತ್ತು ಎಲ್ಲಾ ಅರ್ಹರಿಗೆ ಲಸಿಕೆ ಹಾಕುವ ಕ್ರಮಗಳನ್ನು ಕೈಗೊಳ್ಳುವಂತೆ" ಪತ್ರದಲ್ಲಿ ತಿಳಿಸಲಾಗಿದೆ. "ವೈರಸ್ ಹರಡುವಿಕೆ ಮತ್ತು ವಿಕಸನವನ್ನು ಪತ್ತೆಹಚ್ಚಲು ಪರೀಕ್ಷೆ ಮತ್ತು ಕಣ್ಗಾವಲು ಇನ್ನೂ ಮುಖ್ಯವಾಗಿದೆ" ಎಂದು ಅವರು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಕಡ್ಡಾಯ

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಕಡ್ಡಾಯ

ಮಹಾರಾಷ್ಟ್ರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಸಾರ್ವಜನಿಕ ಆರೋಗ್ಯ) ಪ್ರದೀಪ್ ವ್ಯಾಸ್ ಭೂಷಣ್ ಅವರು ಕಳೆದ ಒಂದು ವಾರದಲ್ಲಿ ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ಮೇ 27 ಕ್ಕೆ ಕೊನೆಗೊಂಡ ವಾರದಲ್ಲಿ 15,708 ಪ್ರಕರಣಗಳು ವರದಿಯಾಗಿವೆ, ಜೂನ್ 3 ಕ್ಕೆ ಕೊನೆಗೊಂಡ ವಾರದಲ್ಲಿ 21,055 ಪ್ರಕರಣಗಳು ವರದಿಯಾಗಿವೆ. ಅಲ್ಲದೆ ಸಾಪ್ತಾಹಿಕ ಧನಾತ್ಮಕತೆಯು ಮೇ 27 ಕ್ಕೆ ಕೊನೆಗೊಳ್ಳುವ ವಾರದಲ್ಲಿ 0.52% ರಿಂದ ಜೂನ್ 3 ಕ್ಕೆ ಕೊನೆಗೊಂಡ ವಾರದಲ್ಲಿ 0.73% ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದ ಆರು ಜಿಲ್ಲೆಗಳು ಮುಂಬೈ ಉಪನಗರ, ಥಾಣೆ, ಪುಣೆ, ರಾಯಗಢ ಮತ್ತು ಪಾಲ್ಘರ್- ನಿರ್ದಿಷ್ಟವಾಗಿ ಸಾಪ್ತಾಹಿಕ ಪ್ರಕರಣಗಳು ಮತ್ತು ಸಕಾರಾತ್ಮಕತೆಯ ಹೆಚ್ಚಳವನ್ನು ದಾಖಲಿಸಿವೆ. ಇದಕ್ಕೆ ರಾಜ್ಯ ಆಡಳಿತದಿಂದ ಕೇಂದ್ರೀಕೃತ ಮಧ್ಯಸ್ಥಿಕೆ ಅಗತ್ಯವಿರುತ್ತದೆ ಎಂದಿದ್ದಾರೆ.

"ಆದ್ದರಿಂದ, ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಇದುವರೆಗೆ ಗಳಿಸಿದ ಲಾಭಗಳನ್ನು ಕಳೆದುಕೊಳ್ಳದೆ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಗಳ ಮೇಲೆ ಅಪಾಯದ ಮೌಲ್ಯಮಾಪನ ಆಧಾರಿತ ವಿಧಾನವನ್ನು ಅನುಸರಿಸುವ ಅವಶ್ಯಕತೆಯಿದೆ" ಎಂದು ಭೂಷಣ್ ಪತ್ರದಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚು ಕೇಸ್

ಬೆಂಗಳೂರಿನಲ್ಲಿ ಹೆಚ್ಚು ಕೇಸ್

ಕರ್ನಾಟಕದಲ್ಲಿ ಮೇ 27ಕ್ಕೆ ಕೊನೆಗೊಂಡ ವಾರದಲ್ಲಿ 15,708 ಪ್ರಕರಣಗಳು ವರದಿಯಾಗಿವೆ ಮತ್ತು ಜೂನ್ 3ಕ್ಕೆ ಕೊನೆಗೊಂಡ ವಾರದಲ್ಲಿ 21,055 ಪ್ರಕರಣಗಳು ವರದಿಯಾಗಿವೆ. ಅಲ್ಲದೆ, ಅನುಗುಣವಾದ ಅವಧಿಯಲ್ಲಿ ಸಾಪ್ತಾಹಿಕ ಧನಾತ್ಮಕತೆಯು 0.52% ರಿಂದ 0.73% ಕ್ಕೆ ಪ್ರಕರಣಗಳು ಏರಿಕೆಯಾಗಿದೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ, ಬೆಂಗಳೂರು ನಗರವು ಸಾಪ್ತಾಹಿಕ ಪ್ರಕರಣಗಳು ಮತ್ತು ಧನಾತ್ಮಕತೆಯ ಹೆಚ್ಚಳದೊಂದಿಗೆ ಹೆಚ್ಚು ಪೀಡಿತ ಜಿಲ್ಲೆಯಾಗಿದೆ.

ತಮಿಳುನಾಡಿನಲ್ಲೂ ಕೊರೊನಾ ಕಾಟ

ತಮಿಳುನಾಡಿನಲ್ಲೂ ಕೊರೊನಾ ಕಾಟ

ತೆಲಂಗಾಣವು ಮೇ 27ಕ್ಕೆ ಕೊನೆಗೊಂಡ ವಾರದಲ್ಲಿ 287 ಹೊಸ ಪ್ರಕರಣಗಳಿಂದ ಜೂನ್ 3ಕ್ಕೆ ಕೊನೆಗೊಂಡ ವಾರದಲ್ಲಿ 375 ಹೊಸ ಪ್ರಕರಣಗಳನ್ನು ದಾಖಲಿಸಿದೆ. ಕಳೆದ ವಾರದಲ್ಲಿ ರಾಜ್ಯವು 0.4% ರಿಂದ 0.5% ಕ್ಕೆ ಧನಾತ್ಮಕತೆಯ ಹೆಚ್ಚಳವನ್ನು ಕಂಡಿದೆ.


ತಮಿಳುನಾಡಿನ ಚೆನ್ನೈ ಮತ್ತು ಚೆಂಗಲ್ಪಟ್ಟು ಎರಡು ಜಿಲ್ಲೆಗಳಲ್ಲಿ ಕೊರೊನಾ ಹೆಚ್ಚು ಪರಿಣಾಮ ಬೀರಿದೆ. ಮೇ 27ಕ್ಕೆ ಕೊನೆಗೊಂಡ ವಾರದಲ್ಲಿ 335 ಪ್ರಕರಣಗಳಿಂದ ಜೂನ್ 3ಕ್ಕೆ ಕೊನೆಗೊಂಡ ವಾರದಲ್ಲಿ 659 ಹೊಸ ಪ್ರಕರಣಗಳಿಗೆ ರಾಜ್ಯವು ಒಟ್ಟಾರೆ ಸಾಪ್ತಾಹಿಕ ಹೊಸ ಪ್ರಕರಣಗಳಲ್ಲಿ ಹೆಚ್ಚಳವನ್ನು ವರದಿ ಮಾಡಿದೆ. ಕಳೆದ ವಾರದಲ್ಲಿ ರಾಜ್ಯವು 0.4% ರಿಂದ 0.8% ಕ್ಕೆ ಧನಾತ್ಮಕತೆಯ ಹೆಚ್ಚಳವನ್ನು ಕಂಡಿದೆ.

11 ಜಿಲ್ಲೆಗಳಲ್ಲಿ ಕೊರೊನಾ ಪರಿಣಾಮ

11 ಜಿಲ್ಲೆಗಳಲ್ಲಿ ಕೊರೊನಾ ಪರಿಣಾಮ

ಕೇರಳದಲ್ಲಿ ಎರ್ನಾಕುಲಂ, ತಿರುವನಂತಪುರಂ, ಕೊಟ್ಟಾಯಂ, ಕೋಝಿಕ್ಕೋಡ್, ಪತ್ತನಂತಿಟ್ಟ, ಇಡುಕ್ಕಿ, ಅಲಪ್ಪುಳ, ಕೊಲ್ಲಂ, ಕಣ್ಣೂರು, ಮಲಪ್ಪುರಂ, ಮತ್ತು ವಯನಾಡ್ 11 ಜಿಲ್ಲೆಗಳಲ್ಲಿ ಕೊರೊನಾ ಪರಿಣಾಮ ಬೀರಿದೆ.

14 ಜಿಲ್ಲೆಗಳಲ್ಲಿ 11 ಜಿಲ್ಲೆಗಳಲ್ಲಿ ಪ್ರಕರಣಗಳು ಮತ್ತು ಸಕಾರಾತ್ಮಕತೆಯ ಹೆಚ್ಚಳವನ್ನು ವರದಿ ಮಾಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಹೀಗಾಗಿ "ರಾಜ್ಯ ಕಟ್ಟುನಿಟ್ಟಾದ ನಿಗಾ ವಹಿಸುವುದು ಮತ್ತು ಪೂರ್ವಭಾವಿಯಾಗಿ ತೆಗೆದುಕೊಳ್ಳುವುದು ಅತ್ಯಗತ್ಯ" ಎಂದು ಭೂಷಣ್ ಹೇಳಿದರು.

ಪ್ರಕರಣಗಳನ್ನು ಮೊದಲೇ ಪತ್ತೆ ಹಚ್ಚಲು, ಅವುಗಳನ್ನು ಪ್ರತ್ಯೇಕಿಸಲು ಮತ್ತು ಅಗತ್ಯವಿದ್ದಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಪರೀಕ್ಷೆಯನ್ನು ಹೆಚ್ಚಿಸಬೇಕು ಎಂದು ತಜ್ಞರು ಸೂಚಿಸುತ್ತರೆ. "ಸ್ವಲ್ಪ ಉಲ್ಬಣವನ್ನು ಸಹ ವರದಿ ಮಾಡುವ ರಾಜ್ಯಗಳು ರೋಗದ ಹರಡುವಿಕೆಯನ್ನು ಪರಿಶೀಲಿಸಲು ಕೋವಿಡ್ ಪರೀಕ್ಷೆಯನ್ನು ಅಳೆಯುವ ಅಗತ್ಯವಿದೆ. ಪರೀಕ್ಷೆ, ಟ್ರ್ಯಾಕಿಂಗ್, ಚಿಕಿತ್ಸೆ ಇನ್ನೂ ಪ್ರಮುಖವಾಗಿದೆ ಮತ್ತು ಅದನ್ನು ಮುಂದುವರಿಸಬೇಕು "ಎಂದು ವೆಲ್ಲೂರಿನ (ತಮಿಳುನಾಡು) ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ವೈರಾಲಜಿ ವಿಭಾಗದ ಮಾಜಿ ಮುಖ್ಯಸ್ಥ ಜಾಕೋಬ್ ಜಾನ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+