ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಪೊಲೀಸ್ ಅಧಿಕಾರಿ ಬಲಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಜಮ್ಮು ಮತ್ತು ಕಾಶ್ಮೀರ, ಜೂನ್ 15: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ನಲ್ಲಿ ಉಗ್ರರ ಗುಂಡಿಗೆ ಪೊಲೀಸ್ ಅಧಿಕಾರಿ ಬಲಿಯಾಗಿದ್ದಾರೆ.

ಸಾವಿಗೀಡಾದ ಅಧಿಕಾರಿಯನ್ನು ಶಬೀರ್ ಅಹ್ಮದ್ ಎಂದು ಗುರುತಿಸಲಾಗಿದೆ. ತೀರಾ ಸಮೀಪದಿಂದ ಶಬೀರ್ ಗೆ ಗುಂಡಿಕ್ಕಲಾಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತಾದರೂ ದಾರಿ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.

 Cop martyred in Kashmir after terrorists shoot him at point blank range

ಶಬೀರ್ ಡ್ಯೂಟಿ ಮುಗಿಸಿ ಮನೆಯಲ್ಲಿದ್ದರು. ಈ ವೇಳೆ ಉಗ್ರರು ಬಂದು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇದೀಗ ಪೊಲೀಸರು ಗುಂಡಿಕ್ಕಿದ ಉಗ್ರರಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

ಹಿಜ್ಬುಲ್ಲಾ ಮುಜಾಹಿದ್ದೀನ್ ಪೊಲೀಸರ ಮೇಲೆ ದಾಳಿ ನಡೆಸುವಂತೆ ಈ ಹಿಂದೆ ಕರೆ ನೀಡಿತ್ತು. ಇದಾದ ಬೆನ್ನಿಗೆ ಇದೀಗ ಪೊಲೀಸರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.

 Cop martyred in Kashmir after terrorists shoot him at point blank range

ಕಾಶ್ಮೀರಿಗರು ಯಾವುದೇ ಕಾರಣಕ್ಕೂ ಸರಕಾರದ ಸೇವೆ ಮಾಡಬಾರದು ಎಂದು ಹಿಜ್ಬುಲ್ಲಾ ಮುಜಾಹಿದ್ದೀನ್ ಹೇಳಿತ್ತು. ಇದೀಗ ಸರಕಾರಿ ಸೇವೆಯಲ್ಲಿದ್ದವರ ಮೇಲೆ ಹಿಜ್ಬುಲ್ಲಾ ಮುಜಾಹಿದ್ದೀನ್ ಉಗ್ರರು ಮುಗಿಬಿದ್ದಂತೆ ಕಾಣಿಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A policeman in Jammu and Kashmir was martyred after he was shot at point blank range by terrorists. The police personnel, Shabir Ahmed was at his home in Kulgam when the incident occurred.
Please Wait while comments are loading...