ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಜನತೆಗೆ ಯುವರಾಜ ರಾಹುಲ್ ಗಾಂಧಿ ನೀಡಿದ ಆಶ್ವಾಸನೆ

ಕಾಂಗ್ರೆಸ್ಸಿಗೆ ಮತ್ತೆ ಅಧಿಕಾರ ನೀಡಿದರೆ ಕೇವಲ ಆರು ತಿಂಗಳಲ್ಲಿ ದೇಶದ ಸಮಸ್ಯೆಗಳನ್ನು ಪರಿಹರಿಸುತ್ತೇವೆ, ರಾಹುಲ್ ಗಾಂಧಿ. ಪ್ರಧಾನಿ ಮೋದಿ ಮಾತನಾಡುವುದನ್ನು ಕಮ್ಮಿ ಮಾಡಿ ದೇಶದ ಅಭಿವೃದ್ದಿ ಕಡೆ ಗಮನ ಹರಿಸಲಿ ಎಂದು ರಾಹುಲ್ ಸಲಹೆ ನೀಡಿದ್ದಾರೆ.

|
Google Oneindia Kannada News

Recommended Video

Rahul Gandhi's strategy towards Karnataka Assembly Elections 2018 | Oneindia Kannada

ಅಮೇಥಿ, ಅ 5: ತಮ್ಮ ರಾಜಕೀಯ ಕರ್ಮಭೂಮಿ ಅಮೇಥಿಯಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ದೇಶದ ಜನತೆಗೆ ಆಶ್ವಾಸನೆಯ ಮಹಾಪೂರವನ್ನೇ ಹರಿಸಿದ್ದಾರೆ.

ಕಾಂಗ್ರೆಸ್ಸಿಗೆ ಮತ್ತೆ ಅಧಿಕಾರ ನೀಡಿದರೆ ಕೇವಲ ಆರು ತಿಂಗಳಲ್ಲಿ ದೇಶದ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದಿರುವ ರಾಹುಲ್, ಪ್ರಧಾನಿ ಮೋದಿ ಮಾತನಾಡುವುದನ್ನು ಕಮ್ಮಿ ಮಾಡಿ ದೇಶದ ಅಭಿವೃದ್ದಿ ಕಡೆ ಗಮನ ಹರಿಸಲಿ ಎಂದು ಸಲಹೆ ನೀಡಿದ್ದಾರೆ.

Congress will solve country promblem in 6 months, Rahul Gandhi

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಎರಡು ಕೋಟಿ ಉದ್ಯೋಗವನ್ನು ಸೃಷ್ಟಿಸುತ್ತೇವೆ. ಬರೀ ಪೊಳ್ಳು ಆಶ್ವಾಸನೆ ನೀಡುತ್ತಿರುವ ಪ್ರಧಾನಿ ಅಧಿಕಾರವನ್ನು ನಮಗೆ ಹಸ್ತಾಂತರಿಸಿದರೆ ಆರು ತಿಂಗಳಲ್ಲಿ ಎಲ್ಲಾ ಸಮಸ್ಯೆಗೆ ಇತಿಶ್ರೀ ಹಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಅಪನಗದೀಕರಣ, ಜಿಎಸ್ಟಿ ಮುಂತಾದ ಕಾರಣಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿಯುತ್ತಿದೆ, ಇದರ ದುಷ್ಪರಿಣಾಮವನ್ನು ಮೋದಿ ಸರಕಾರಕ್ಕೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ನಿರುದ್ಯೋಗದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ರಾಹುಲ್, ಮೋದಿ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಅಮೇಥಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, ಅಧಿಕಾರಕ್ಕೆ ಬರಬೇಕು ಎನ್ನುವ ಏಕಮೇವ ಕಾರಣದಿಂದ ಮೋದಿ ಸುಳ್ಳು ಆಶ್ವಾಸನೆಯನ್ನು ದೇಶದ ಜನತೆಗೆ ನೀಡಿದರು. ಅವರು ನೀಡಿದ ಆಶ್ವಾಸನೆಗಳಲ್ಲಿ ಯಾವುದೂ ಈಡೇರಿಲ್ಲ ಎಂದು ರಾಹುಲ್, ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ.

ಉತ್ತರಪ್ರದೇಶ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ನಂತರ, ಸ್ವಕ್ಷೇತ್ರಕ್ಕೆ ರಾಹುಲ್ ಗಾಂಧಿ ಭೇಟಿ ನೀಡುತ್ತಿರುವುದು ಇದೇ ಮೊದಲು. ರಾಹುಲ್ ಮೂರು ದಿನದ ಪ್ರವಾಸ, ಬುಧವಾರದಿಂದ ಆರಂಭವಾಗಿದೆ.

English summary
AICC Vice Preisdent Rahul Gandhi is in 3-days tour in his parliamentary constituency Amethi in Uttar Pradesh. If we comes to power, wlll resolve countries problem in 6 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X