ಪೌರತ್ವ ಮಸೂದೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಕಾಂಗ್ರೆಸ್
ನವದೆಹಲಿ, ಡಿಸೆಂಬರ್ 13: ಪೌರತ್ವ ಮಸೂದೆಯಲ್ಲಿ ಲೋಕಸಭೆಯ ಎರಡೂ ಸಧನದಲ್ಲಿ ತೀವ್ರವಾಗಿ ವಿರೋಧಿಸಿದ್ದ ಕಾಂಗ್ರೆಸ್, ಮಸೂದೆಯ ವಿರುದ್ಧ ಸುಪ್ರೀಂಕೋರ್ಟ್‌ಗೆ ಹೋಗಲು ಸನ್ನದ್ಧವಾಗಿದೆ.
ಪೌರತ್ವ ಮಸೂದೆಯ ವಿರುದ್ಧ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್, ತನ್ನ ಹೋರಾಟಕ್ಕೆ ಕಾನೂನಾತ್ಮಕ ರೂಪ ಕೊಟ್ಟು ನ್ಯಾಯಾಲಯದಲ್ಲಿ ಮಸೂದೆಯನ್ನು ಪ್ರಶ್ನೆ ಮಾಡಲಿದೆ.
ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದು, ಕಾಯ್ದೆಯಾಗಿ ಬದಲಾದ ನಂತರ ಕಾಂಗ್ರೆಸ್ ಪಕ್ಷವು ಕಾಯ್ದೆಯ ವಿರುದ್ಧ ಸುಪ್ರೀಂಕೋರ್ಟ್ ಬಾಗಿಲು ತಟ್ಟಲಿದೆ.

ಪೌರತ್ವ ಮಸೂದೆ ಪೂರ್ಣವಾಗಿ ಅಸಾಂವಿಧಾನಿಕ ಎಂದು ಟೀಕಿಸಿರುವ ಕಾಂಗ್ರೆಸ್, ನ್ಯಾಯಾಲಯದಲ್ಲಿ ಮಸೂದೆಯ ಔಚಿತ್ಯ, ಮಸೂದೆ ಒಳಗೊಂಡಿರುವ ಧರ್ಮ ತಾರತಮ್ಯದ ಕುರಿತಾಗಿ ಪ್ರಶ್ನೆ ಮಾಡಲಿದೆ.
ಈ ಬಗ್ಗೆ ಖಚಿತ ಮಾಹಿತಿ ನೀಡಿರುವ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, 'ಮಸೂದೆಗೆ ರಾಷ್ಟ್ರಪತಿ ಅಂಕಿತ ಬಿದ್ದ ನಂತರ ನಾವು ನ್ಯಾಯಾಲಯದಲ್ಲಿ ಮಸೂದೆಯನ್ನು ಪ್ರಶ್ನೆ ಮಾಡುತ್ತೇವೆ' ಎಂದಿದ್ದಾರೆ.
'ಈಶಾನ್ಯ ರಾಜ್ಯಗಳ ಹಲವು ಸಂಘಟನೆಗಳು ನಮ್ಮನ್ನು ಸಂಪರ್ಕಿಸಿದ್ದು, ಕಾನೂನು ಸಲಹೆಗೆ ಸಹ ಮನವಿ ಮಾಡಿವೆ ಮತ್ತು ಮಸೂದೆ ಕುರಿತು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ಮಾಡುವಂತೆ ಒತ್ತಾಯಿಸಿವೆ' ಎಂದು ಹೇಳಿದ್ದಾರೆ.












Click it and Unblock the Notifications