ಮಹಿಳಾ ಮೀಸಲಾತಿ ಮಸೂದೆ: ಕಾಂಗ್ರೆಸ್‌ನಿಂದ 21 ನಗರದಲ್ಲಿ 21 ಸುದ್ದಿಗೋಷ್ಠಿ
ನವದೆಹಲಿ, ಸೆಪ್ಟಂಬರ್ 24: ಮಹಿಳಾ ಮೀಸಲಾತಿಯ ನಾರಿಶಕ್ತಿ ವಂದನಾ ಮಸೂದೆಗೆ ಸಂಬಂಧಿಸಿದಂತೆ ವಿಪಕ್ಷ ಕಾಂಗ್ರೆಸ್ ಇಂದು ಸೋಮವಾರ (ಸೆ.25) ದೇಶದ 21 ನಗರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಲಿದೆ. ವಿಶೇಷವೆಂದರೆ 21 ಮಹಿಳಾ ನಾಯಕಿಯರು ಈ ಪಾಲ್ಗೊಂಡು ಈ ಮಸೂದೆ ಮತ್ತು ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಬಹಿರಂಗಪಡಿಸಲಿದ್ದಾರೆ ಎಂದು ವರದಿ ಆಗಿದೆ.
ಕೇಂದ್ರ ಬಿಜೆಪಿ ಸರ್ಕಾರವು ಕಳೆದ ಐದು ದಿನಗಳ ವಿಶೇಷ ಸಂಸತ್ತು ಅಧಿವೇಶನದಲ್ಲಿ ಲೋಕಸಭೆ ಮತ್ತು ವಿಧಾನಸಭೆಯ ಚನಾವಣೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡುವ ನಾರಿಶಕ್ತಿ ವಂದನಾ ಮಸೂದೆ ಅನುಮೋದನೆ ಪಡೆದು ಅಂಗೀಕರಿಸಿತು.

ಈ ಮಸೂದೆಯನ್ನು ಬೆಂಬಲಿಸಿರುವ ಕಾಂಗ್ರೆಸ್ ವಿಳಂಬ ಧೋರಣೆ, ಚುನಾವಣೆ ತಂತ್ರ ಸೇರಿದಂತೆ ಕೆಲವು ವಿಚಾರಗಳ ಕುರಿತು ಕೇಂದ್ರದ ವಿರುದ್ಧ ವಾಗ್ದಾಳೀ ನಡೆಸಿತ್ತು. ಅದರ ಭಾಗವಾಗೇ ಇಂದು 21 ನಗರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಲಿದೆ.
ಸಂಸದೆ ರಜನಿ ಪಾಟೀಲ್ ಅಹಮದಾಬಾದ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರೆ, ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ನೆಟ್ಟಾ ಡಿಸೋಜಾ ಹೈದರಾಬಾದ್‌ನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದಾರೆ.
ಇನ್ನೂ ಜೈಪುರದಲ್ಲಿ ಅಲ್ಕಾ ಲಂಬಾ, ಭುವನೇಶ್ವರದಲ್ಲಿ ರಂಜೀತ್ ರಂಜನ್,ಮುಂಬೈನಲ್ಲಿ ಅಮೀ ಯಾಗ್ನಿಕ್, ರಾಂಚಿಯಲ್ಲಿ ರಾಗಿಣಿ ನಾಯಕ್ ಹಾಗೂ ಶ್ರೀನಗರದಲ್ಲಿ ಶಾಮಾ ಮೊಹಮದ್ ಸೇರಿದಂತೆ ಇನ್ನಿತರ ನಗರಗಳಲ್ಲಿ ಅಲ್ಲಿನ ಕಾಂಗ್ರೆಸ್ ಪ್ರಮುಖ ಮುಖಂಡರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು 21 ನಗರಗಳಲ್ಲಿ 21 ಮಹಿಳಾ ನಾಯಕರಿಂದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಮಸೂದೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಜೆಂಡಾ, ಮಹಿಳಾ ಮೀಸಲಾತಿ ಹೆಸರಿನಲ್ಲಿ ಕೇಂದ್ರದ ವಿಶ್ವಾಸ ಘಾತುಕತನವನ್ನು ಬಹಿರಂಗಪಡಿಸಲಾಗುವುದು ಎಂದು ಕಾಂಗ್ರೆಸ್ ತಿಳಿಸಿದೆ.












Click it and Unblock the Notifications