ಕಾಂಗ್ರೆಸ್ಸಿಗೆ ಹೊಸ ಬಾಸ್, ಆದರೆ ಅವರಲ್ಲ ರಾಹುಲ್!

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಏಪ್ರಿಲ್ 19 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ನಾಯಕತ್ವದ ಬಗ್ಗೆ ಕಾಂಗ್ರೆಸ್ ಆರಾಧಕರಿರಲಿ, ಅವರ ಪಕ್ಷವೇ ನಂಬಿಕೆ ಕಳೆದುಕೊಂಡಿದೆಯೆ? ಅಥವಾ ಮುಂಬರುವ ಲೋಕಸಭೆ ಚುನಾವಣೆಯ ತಂತ್ರಗಾರಿಕೆಯ ಒಂದು ಭಾಗವೆ?

ವಿಶ್ವಸನೀಯ ಮೂಲಗಳ ಪ್ರಕಾರ ತಿಳಿದುಬಂದಿರುವುದೇನೆಂದರೆ, ಡಿಸೆಂಬರ್ 31ರ ಹೊತ್ತಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸ್ಥಾನಕ್ಕೆ ಹೊಸ ಅಧ್ಯಕ್ಷರು ದೊರೆಯಲಿದ್ದು, ರಾಹುಲ್ ಗಾಂಧಿ ಅವರು ಉಪಾಧ್ಯಕ್ಷರಾಗಿಯೇ ಮುಂದುವರಿಯಲಿದ್ದಾರೆ.

ಹೀಗಾಗಿ, ರಾಹುಲ್ ಗಾಂಧಿ ಅವರು ಅಧ್ಯಕ್ಷರಾಗಬೇಕು ಎಂಬ ಪಕ್ಷದ ಹಿರಿಯ ನಾಯಕರ ಒಕ್ಕೊರಲ ಕೂಗಿಗೆ ಸದ್ಯಕ್ಕೆ ಪುರಸ್ಕಾರ ದೊರೆಯುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಅಲ್ಲದೆ, ರಾಹುಲ್ ಅವರೇ ಅಧ್ಯಕ್ಷರಾಗಬೇಕೆಂದು ಸೋನಿಯಾ ಕೂಡ ಪ್ರಸ್ತಾವಿಸುವ ಸಂಭವವೂ ಕ್ಷೀಣಿಸುತ್ತಿದೆ.[ಅವಧಿಗೆ ಮುನ್ನ ಕರ್ನಾಟಕದಲ್ಲಿ ಚುನಾವಣೆ : ಕಾಂಗ್ರೆಸ್ ಮಾಸ್ಟರ್ ಪ್ಲಾನ್]

ಗುಜರಾತ್ ವಿಧಾನಸಭೆ ಚುನಾವಣೆ ಡಿಸೆಂಬರ್ ತಿಂಗಳಲ್ಲಿಯೇ ನಡೆಯುತ್ತಿರುವ ಸಂದರ್ಭದಲ್ಲಿ ರಾಹುಲ್ ಅವರನ್ನು ಅಧ್ಯಕ್ಷ ಪದವಿಗೇರಿಸದಿರುವ ಕುರಿತು ನಡೆಯುತ್ತಿರುವ ಮಾತುಗಳು ಕುತೂಹಲ ಕೆರಳಿಸಿವೆ. ರಾಹುಲ್ ಅವರ ಸಾಮರ್ಥ್ಯ ಚುನಾವಣೆಯಲ್ಲಿ ಸಾಬೀತಾಗುವವರೆಗೆ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡದಿರುವ ನಿರ್ಣಯಕ್ಕೆ ಕಾಂಗ್ರೆಸ್ ಬಂದಂತಿದೆ. [ತಾವೂ ಮುಳುಗಿ ಎಸ್ಪಿಯನ್ನೂ ಮುಳುಗಿಸಿದ ರಾಹುಲ್!]

ಕಾಂಗ್ರೆಸ್ ಸೋತಿದ್ದಕ್ಕೆ ರಾಹುಲ್ ಕಾರಣರಲ್ಲ

ಕಾಂಗ್ರೆಸ್ ಸೋತಿದ್ದಕ್ಕೆ ರಾಹುಲ್ ಕಾರಣರಲ್ಲ

ಇತ್ತೀಚಿನ ಹಲವಾರು ಚುನಾವಣೆಗಳಲ್ಲಿ ಕಾಂಗ್ರೆಸ್ ಅತ್ಯಂತ ಹೀನಾಯವಾಗಿ ಸೋತಿದ್ದಕ್ಕೆ ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಏರಿಸದಿರುವುದೇ ಪ್ರಮುಖ ಕಾರಣ ಎಂಬುದು ಕೆಲವರ ಅಭಿಪ್ರಾಯ. ಎಕೆ ಆ್ಯಂಟನಿ, ದಿಗ್ವಿಜಯ್ ಸಿಂಗ್ ಅವರು ಈ ಮಾತಿಗೆ ದನಿಗೂಡಿಸುತ್ತಿದ್ದಾರೆ. ರಾಹುಲ್ ಅವರು ಅಧ್ಯಕ್ಷ ಸ್ಥಾನಕ್ಕೇರಬೇಕೆಂದು ಅಪೇಕ್ಷಿಸುತ್ತಿದ್ದಾರೆ.

ಹೀನಾಯ ಸೋಲಿಗೆ ರಾಹುಲ್ ಅವರೇ ಕಾರಣ

ಹೀನಾಯ ಸೋಲಿಗೆ ರಾಹುಲ್ ಅವರೇ ಕಾರಣ

ಈ ಮಾತಿಗೆ ಪಕ್ಷದ ಒಳವಲಯದಲ್ಲಿಯೇ ಆಕ್ಷೇಪ ವ್ಯಕ್ತವಾಗುತ್ತಿದೆ. ಒಂದರ ಹಿಂದೊಂದರಂತೆ ಚುನಾವಣೆ ಸೋಲುತ್ತಿರುವ ರಾಹುಲ್ ಗಾಂಧಿ ಅವರು ಈ ಸಮಯದಲ್ಲಿ ಅಧ್ಯಕ್ಷ ಹುದ್ದೆಗೇರಲು ಸನ್ನದ್ಧರಾಗಿಲ್ಲ ಅಥವಾ ಸಮರ್ಥರಾಗಿಲ್ಲ ಎಂದು ಪ್ರತ್ಯಕ್ಷವಾಗಿಯಲ್ಲದಿದ್ದರೂ ಪರೋಕ್ಷವಾಗಿಯಾದರೂ ಅಭಿಪ್ರಾಯ ಮಂಡಿಸುತ್ತಿದ್ದಾರೆ. ಅವರನ್ನು ಅಧ್ಯಕ್ಷಗಿರಿಗೇರಿಸುವ ಪ್ರಕ್ರಿಯೆಗೆ ತಡೆಹಿಡಿಯಬೇಕೆಂದು ಕಾಂಗ್ರೆಸ್ ಬಲಪಡಿಸಲು ಮತ್ತೆ ಅಖಾಡಕ್ಕೆ ಇಳಿದರು ಸೋನಿಯಾ ಗಾಂಧಿಕೋರಲಾಗಿದೆ. [ರಾಹುಲ್ ಬಿಟ್ಟರೆ ಕಾಂಗ್ರೆಸ್ ಮುನ್ನಡೆಸುವ ತಾಕತ್ತು ಯಾರಿಗಿದೆ?]

 ಸೋನಿಯಾ ಅವರೇ ಪಕ್ಷದ ಭಾರ ಹೊರಲಿ

ಸೋನಿಯಾ ಅವರೇ ಪಕ್ಷದ ಭಾರ ಹೊರಲಿ

ಇನ್ನು ಕೆಲವರ ಪ್ರಕಾರ, ರಾಹುಲ್ ಅಥವಾ ಅವರಿವರು ಅಧ್ಯಕ್ಷರಾಗುವ ಬದಲು, ಅನಾರೋಗ್ಯದಿಂದ ಬಳಲುತ್ತಿದ್ದರೂ ಸೋನಿಯಾ ಗಾಂಧಿ ಅವರೇ ಅಧ್ಯಕ್ಷರಾಗಿ ಉಳಿಯಲಿ. ರಾಹುಲ್ ಅವರ ಸುತ್ತ ಸಮರ್ಥ ತಂಡ ಕಟ್ಟಿ ಅವರು ವೈಯಕ್ತಿಕವಾಗಿ ಇನ್ನಷ್ಟು ಪ್ರಬಲರಾಗುವವರೆಗೆ ಸೋನಿಯಾ ಅವರೇ ಪಕ್ಷದ ಭಾರ ಹೊತ್ತುಕೊಳ್ಳಲಿ ಎಂಬ ಮಾತು ಕೂಡ ಬಲವಾಗಿ ಕೇಳಿಬಂದಿದೆ. [ರಾಹುಲ್ ಗಾಂಧಿ ಬ್ರಾಂಡ್ ಇಮೇಜ್ ಮರುಕಟ್ಟುವ ಕಸರತ್ತು]

ಉತ್ತರಪ್ರದೇಶದಲ್ಲಿ ನಡೆಯಲಿಲ್ಲ ರಾಹುಲ್ ಕರಾಮತ್ತು

ಉತ್ತರಪ್ರದೇಶದಲ್ಲಿ ನಡೆಯಲಿಲ್ಲ ರಾಹುಲ್ ಕರಾಮತ್ತು

ಇಂಥ ಮಾತುಗಳು ಕೇಳಬರಲು ಮೂಲ ಕಾರಣ ಇತ್ತೀಚಿನ ಉತ್ತರಪ್ರದೇಶ ಚುನಾವಣೆ. ರಾಹುಲ್ ಗಾಂಧಿ ಅವರು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಜೊತೆ ದೋಸ್ತಿ ಮಾಡಿಕೊಂಡರೂ ಸೋಲಲು ಪ್ರಮುಖ ಕಾರಣಕರ್ತರಾಗಿದ್ದಾರೆ. ರಾಹುಲ್ ಅವರು ಯಾವ ಮಾತುಗಳೂ, ಯಾವ ತಂತ್ರಗಾರಿಕೆಗಳೂ ಕೆಲಸ ಮಾಡುತ್ತಿಲ್ಲ ಎಂಬುದು ವೇದ್ಯವಾಗಿದೆ. [ಒಳ್ಳೆ ಕಾಮಿಡಿ ಕಣ್ರಿ; ರಾಹುಲ್ ಬಂದಿಲ್ವಂತೆ, ಅದ್ಕೆ ಕೈಗೆ ಜೈ ಅಂದ್ರಂತೆ]

ದಿಗ್ವಿಜಯ್ ಕುರಿತು ಪಕ್ಷದಲ್ಲಿ ಅಪಸ್ವರ

ದಿಗ್ವಿಜಯ್ ಕುರಿತು ಪಕ್ಷದಲ್ಲಿ ಅಪಸ್ವರ

ಈ ನಡುವೆ, ಗೋವಾದಲ್ಲಿ ಹೆಚ್ಚು ಸ್ಥಾನ ದಕ್ಕಿದ್ದರೂ ಸರಕಾರ ರಚಿಸಲು ವಿಫಲರಾದ ದಿಗ್ವಿಜಯ್ ಸಿಂಗ್ ಅವರನ್ನು ಮುಲಾಜಿಲ್ಲದೆ ಬದಿಗೆ ಸರಿಸಿ ಯುವಪಡೆಗೆ ನೇತೃತ್ವ ನೀಡಬೇಕೆಂಬ ಕೂಗು ಎದ್ದಿದೆ. ಗೋವಾಗೆ ಕೇವಲ ಹಾಲಿಡೇ ಮಾಡಲು ಬಂದಿದ್ದಾರೆ ಎಂಬ ಆರೋಪ ಹೊತ್ತ ದಿಗ್ವಿಜಯ್ ಅವರ ದೌರ್ಬಲ್ಯವನ್ನು ಸರಿಯಾಗಿ ಬಳಸಿಕೊಂಡ ಬಿಜೆಪಿ ಮನೋಹರ್ ಪರಿಕ್ಕರ್ ಅವರ ನೇತೃತ್ವದಲ್ಲಿ ಸರಕಾರ ರಚಿಸಿತು. [ಮೂರನೇ ಬಾರಿಗೆ ಗೋವಾ ಸಿಎಂ ಆಗಿ ಪರಿಕ್ಕರ್ ಪ್ರಮಾಣ ವಚನ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Congress has to elect a new president by December 31 and it is unlikely to be Rahul Gandhi. A request which has come from the first family of the Congress to elevate Rahul as the chief, replacing his mother, Sonia Gandhi is in doubt.
Please Wait while comments are loading...