ತ್ರಿವಳಿ ತಲಾಖ್ ಮಸೂದೆಗೆ ಕಾಂಗ್ರೆಸ್ಸಿನಿಂದ ಷರತ್ತುಬದ್ಧ ಒಪ್ಪಿಗೆ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 28: ತ್ರಿವಳಿ ತಲಾಖ್ ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವ ಮಸೂದೆಗೆ ಷರತ್ತುಬದ್ಧ ಒಪ್ಪಿಗೆ ನೀಡಲು ಸಿದ್ಧ ಎಂದು ಕಾಂಗ್ರೆಸ್ ಹೇಳಿದೆ.

ಏನಿದು ತ್ರಿವಳಿ ತಲಾಖ್? ಏಕೆ ಇದರ ಬಗ್ಗೆ ಚರ್ಚೆ?

ತ್ರಿವಳಿ ತಲಾಖ್ ಗೆ ಕಾನೂನು ಬಾಹಿರ, ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ ಸಿ) ಸ್ವಾಗತಿಸಿದ ಮೊದಲ ರಾಜಕೀಯ ಪಕ್ಷವಾಗಿದೆ.

ತ್ರಿವಳಿ ತಲಾಕ್ : ಮುಸ್ಲಿಂ ಮಹಿಳೆ ರಕ್ಷಣಾ ಮಸೂದೆಯಲ್ಲೇನಿದೆ?

ಮಹಿಳಾ ಹಕ್ಕು ಹಾಗೂ ಸಂರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಇದು ಪ್ರಬಲ ಅಸ್ತ್ರವಾಗಿದ್ದು, ತ್ವರಿತಗತಿಯಲ್ಲಿ ತ್ರಿವಳಿ ತಲಾಖ್ ನೀಡುವುದಕ್ಕೆ ನಿರ್ಬಂಧ ಹೇರಿರುವುದನ್ನು ಪಕ್ಷ ಸ್ವಾಗತಿಸುತ್ತದೆ. ಆದರೆ, ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಕಾನೂನು ಇನ್ನಷ್ಟು ಬಾಲಗೊಳಿಸಲು ನಮ್ಮ ಕೆಲವು ಸಲಹೆಗಳು ಪಾಲಿಸಿದರೆ ಒಳ್ಳೆಯದು' ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಹೇಳಿದ್ದಾರೆ.

Congress supports Triple Talaq Bill, but conditionally

ಕಾಯ್ದೆಯ ಸೆಕ್ಷನ್ 5ರಂತೆ ಮುಸ್ಲಿಮ್ ಮಹಿಳೆಯರಿಗೆ ಭತ್ಯೆ ನೀಡುವ ಬಗ್ಗೆ ಪ್ರಸ್ತಾಪ ಇದೆ. ಆದರೆ, ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಪರಿತ್ಯಕ್ತ ಗಂಡನಿಂದ ಶೇಕಡಾವಾರು ಎಷ್ಟು ಮೊತ್ತ ಸಿಗಬೇಕಿದೆ ಎಂಬುದರ ಬಗ್ಗೆ ಏನು ಹೇಳಿಲ್ಲ.

ತ್ರಿವಳಿ ತಲಾಖ್ ಬಗ್ಗೆ ಸುಪ್ರೀಂ ತೀರ್ಪಿನ 9 ಪ್ರಮುಖ ಅಂಶಗಳು

ಮುಸ್ಲಿಮ್ ಮಹಿಳಾ ಹಕ್ಕುಗಳ ಕುರಿತಾದ 1986ರ ಕಾಯ್ದೆಯ ಸೆಕ್ಷನ್ 3 ಹಾಗೂ 4ರಲ್ಲಿ ಈಗಾಗಲೇ ಜೀವನಾಂಶದ ಬಗ್ಗೆ ಸಮರ್ಪಕ ಮಾಹಿತಿಯಿದೆ. ಆದರೆ, ಹೊಸ ಮಸೂದೆಯಲ್ಲಿ ಯಾವುದೇ ಮಾಹಿತಿ ಇಲ್ಲ ಎಂದರು.ಕೇಂದ್ರ ಸರ್ಕಾರ ಮಂಡಿಸಿರುವ ಈ ಮುಸ್ಲಿಮ್ ಮಹಿಳಾ ಮಸೂದೆ ಅಥವಾ ತ್ರಿವಳಿ ತಲಾಖ್ ಮಸೂದೆಗೆ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಯಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಈ ಮಸೂದೆ ದುರ್ಬಳಕೆಯಾದರೆ ಎಷ್ಟು ಕುಟುಂಬಗಳು ನಾಶವಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಮಂಡಳಿ ಎಚ್ಚರಿಸಿದೆ.

ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕೂಡಾ ಮಸೂದೆಯನ್ನು ವಿರೋಧಿಸಿದ್ದು, ಮೂಲಭೂತ ಹಕ್ಕಿನ ವಿರೋಧಿ ಹಾಗೂ ಕಾನೂನಿನ ಬಲವಿಲ್ಲದ ಮಸೂದೆ ಇದು ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Congress on Thursday(December 28) said it supports the Triple Talaq Bill, but suggested that there is a need to strengthen it legally.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ