ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಪ್ತ್ 'ಪ್ರಶಸ್ತಿ' ಪಡೆದ ಮೋದಿಜೀಗೆ ಅಭಿನಂದನೆ, ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಜನವರಿ 15: 'ವಿಶ್ವವಿಖ್ಯಾತ ಕೊಟ್ಲರ್ ಪ್ರೆಸಿಡೆನ್ಷಿಯಲ್ ಪ್ರಶಸ್ತಿ'ಗೆ ಭಾಜನರಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷದ ಇತರ ನಾಯಕರು ಅಭಿನಂದಿಸಿದ್ದಾರೆ. ಇದೇ ಸಂದರ್ಭದಲ್ಲಿ ಚೆನ್ನಾಗಿ ಕಾಲೆಳೆದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನಮ್ಮ ಪ್ರಧಾನಿಗಳಿಗೆ ಅಭಿನಂದನೆ ಸಲ್ಲಿಸಲು ಇಚ್ಛಿಸುತ್ತೇನೆ. ವಿಶ್ವ ವಿಖ್ಯಾತ 'ಕೊಟ್ಲರ್ ಪ್ರೆಸಿಡೆನ್ಷಿಯಲ್ ಪ್ರಶಸ್ತಿ' ಪಡೆದಿದ್ದಾರೆ! ಇದು ಎಷ್ಟು ಖ್ಯಾತವಾದದ್ದು ಅಂದರೆ, ಈ ಪ್ರಶಸ್ತಿಗೆ ತೀರ್ಪುಗಾರರು ಅಂತಲೇ ಇಲ್ಲ. ಅಷ್ಟೇ ಅಲ್ಲ, ಈ ಹಿಂದೆ ಯಾರಿಗೂ ನೀಡಿಲ್ಲ. ಅದಕ್ಕೆ ಬೆಂಬಲವಾಗಿರುವುದು ಹೆಸರೇ ಕೇಳಿರದ ಆಲಿಗಢದ ಕಂಪನಿ. ಕಾರ್ಯಕ್ರಮದ ಸಹಯೋಜಕರು ಪತಂಜಲಿ ಹಾಗೂ ರಿಪಬ್ಲಿಕ್ ಟಿ.ವಿ. ಎಂದಿದ್ದಾರೆ.

ಇನ್ನು ರಾಹುಲ್ ಗಾಂಧಿ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿರುವ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್, ಕೋಟಿ-ಕೋಟಿ ಬದಾಯಿ (ಅಭಿನಂದನೆ) ಎಂದಿದ್ದು, ಸಾಟಿಯಿಲ್ಲದ, ಅಸಾಮಾನ್ಯ ಹಾಗೂ ಅದ್ಭುತ ಪ್ರಶಸ್ತಿ ಎಂದು ಕಾಲೆಳೆದಿದ್ದಾರೆ.

Congress president Rahul Gandhi congratulates PM Modi for award So famous it has no jury

ಆ ನಂತರ ಎಡಪಕ್ಷದ ನಾಯಕ ಸೀತಾರಾಮ್ ಯೆಚೂರಿ, ವಿಶ್ವದ ಮೊಟ್ಟ ಮೊದಲ ಬಹಳ ಗುಪ್ತವಾದ ಪ್ರಶಸ್ತಿ ಗೆದ್ದ ನರೇಂದ್ರ ಮೋದಿ ಅವರಿಗೆ ನನ್ನ ವೈಯಕ್ತಿಕ ಅಭಿನಂದನೆ. ಈ ಪ್ರಶಸ್ತಿಯನ್ನು ಈವರೆಗೆ ಯಾರೂ ಪಡೆದಿಲ್ಲ ಎಂದಿದ್ದಾರೆ.

ಮಾರ್ಕೆಟಿಂಗ್ ಹಾಗೂ ಮ್ಯಾನೇಜ್ ಮೆಂಟ್ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಇದನ್ನು ಮೊಟ್ಟಮೊದಲ ಬಾರಿಗೆ ಪಡೆದ ಮೋದಿಯವರಿಗೆ ಅಭಿನಂದನೆ ಎಂದು ಬಿಜೆಪಿಯ ಹಲವು ಮುಖಂಡರು ಟ್ವೀಟ್ ಮಾಡಿದ್ದಾರೆ.

ಇನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಅಣಕಕ್ಕೆ ತಿರುಗೇಟು ನೀಡಿದ್ದು, ತನ್ನದೇ ಕುಟುಂಬಕ್ಕೆ ಭಾರತ ರತ್ನ ಘೋಷಿಸಿಕೊಳ್ಳಲು ನಿರ್ಧರಿಸಿದ ಕುಟುಂಬದಿಂದ ಬಂದ ಶ್ರೀಮಂತ ವ್ಯಕ್ತಿ ಎಂದು ಹೇಳಿದ್ದಾರೆ.

English summary
"I want to congratulate our PM, on winning the world famous "Kotler Presidential Award"! In fact it's so famous it has no jury, has never been given out before and is backed by an unheard of Aligarh company," Congress president Rahul Gandhi tweeted about recently award honored to PM Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X