ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರವಿಲ್ಲದಿದ್ದರೂ ಆದಾಯ ಗಳಿಕೆಯಲ್ಲಿ ಕಾಂಗ್ರೆಸ್ ಮುಂದೆ!

By Mahesh
|
Google Oneindia Kannada News

ನವದೆಹಲಿ, ಮಾರ್ಚ್ 14: ದೇಶದಲ್ಲಿ ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಮಾತ್ರ ಅಧಿಕಾರ ಹೊಂದಿದ್ದರೂ ಅತ್ಯಂತ ಪುರಾತನ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್ ಸಿ) ಆದಾಯ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನೀಡಿದ ವರದಿಯಂತೆ ಕಾಂಗ್ರೆಸ್ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಬಿಜೆಪಿ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ.

ರಾಜಕೀಯ ಪಕ್ಷಗಳು ತಮ್ಮ ಆದಾಯದ ಪಟ್ಟಿಯನ್ನು ನೋಡಿದರೆ, ಕಾಂಗ್ರೆಸ್ ಬಳಿ 1,687.12 ಕೋಟಿ ರು. ಆದಾಯವಿದ್ದು, ದೇಶದ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷ ಎನಿಸಿಕೊಂಡು ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

2010-11 ರಿಂದ 2013-14ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಒಟ್ಟು ಆದಾಯ 1,687. 12 ಕೋಟಿ ರು ಆಗಿದೆ ಎಂದು ಸರ್ಕಾರೇತರ ಸ್ವಯಂಸೇವಾ ಸಂಘಟನೆಯೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ವರದಿಯಲ್ಲಿ ತಿಳಿಸಿದೆ.

Congress party's income the highest at Rs.1,687cr, BJP a close second at Rs.1,475 cr

ಬಿಜೆಪಿಗೆ ದೇಣಿಗೆಯೇ ಆಧಾರ: ಬಿಜೆಪಿಯ ಒಟ್ಟು ಆದಾಯ 1,475.44 ಕೋಟಿ ರೂ. ಆಗಿದ್ದು, ಬಿಜೆಪಿಗೆ ದೇಣಿಗೆ ಮೂಲಕ ರು. 1,297.37 ರೂ. ಕೋಟಿ (ಶೇ. 87.93) ಸಿಕ್ಕಿದರೆ, ಕಾಂಗ್ರೆಸ್ಸಿಗೆ 184.408 ಕೋಟಿ ರೂ. (ಶೇ.10.93) ಸಿಕ್ಕಿದೆ. ಕಾಂಗ್ರೆಸ್ ಗಳಿಕೆ ದೇಣಿಗೆ ನೆರವಿಲ್ಲದೆ ಮೇಲ್ಮುಖವಾಗಿ ಸಾಗಿದೆ.

2014-15ರಲ್ಲಿ ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯ (ಬಿಜೆಪಿ, ಐಎಎನ್ ಸಿ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಹೊರತು ಪಡಿಸಿ) ಮತ್ತು 2010-11 ರಿಂದ 2014 -15 ) ರ ಈ ಐದು ವರುಷಗಳ ಒಟ್ಟು ಆದಾಯ 4, 261. 32 ಕೋಟಿ ರು. ಆಗಿದೆ. ಸಿಪಿಎಂ 552.30 ಕೋಟಿ, ಬಿಎಸ್ ಪಿ 391. 21 ಕೋಟಿ. ಸಿಪಿಐ 9.02 ಕೋಟಿ ರು. ಆದಾಯ ಹೊಂದಿದೆ.

ರಾಜಕೀಯ ಪಕ್ಷಗಳು ಆದಾಯ ತೆರಿಗೆ ಇಲಾಖೆ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಬ್ಯಾಂಕ್ ಸ್ಟೇಟ್ ಮೆಮ್ಟ್ ಗಳನ್ನು ಆಧಾರಿಸಿ ಈ ವರದಿ ತಯಾರಿಸಲಾಗಿದೆ ಎಂದು ಎಡಿಆರ್ ತಿಳಿಸಿದೆ.

ರಾಷ್ಟ್ರೀಯ ಮತ್ತು ಸ್ಥಳೀಯ ರಾಜಕೀಯ ಪಕ್ಷಗಳು ಮಾಹಿತಿ ಹಕ್ಕಿನ ಅಡಿಯಲ್ಲಿ ಎಲ್ಲ ಮಾಹಿತಿಗಳನ್ನು ನೀಡಬೇಕು ಎಂದು ಎಡಿಆರ್ ಶಿಫಾರಸು ಮಾಡಿದೆ.

ಲೋಕಸಭೆ ಚುನಾವಣೆ ನಂತರದ ಆದಾಯ ಪಟ್ಟಿಯ ವಿವರ ಇನ್ನೂ ಹೊರಬರಬೇಕಾಗಿದೆ. ಅಧಿಕಾರದಲ್ಲಿರುವ ಎನ್ ಡಿಎ ಆದಾಯ ಗಳಿಕೆ ಅಂಕಿ ಅಂಶ ಇನ್ನೂ ಹೆಚ್ಚಾಗಲಿದೆ ಎಂದು ಮಾಹಿತಿ ಸಿಕ್ಕಿದೆ. (ಪಿಟಿಐ)

English summary
The Indian National Congress topped the chart of political parties in India by declaring the highest total income at Rs 1,687.12 crore, followed by the BJP, for the period 2010-11 to 2013-14, according to a report by the Association for Democratic Reforms (ADR).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X