ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಶಾಸಕ ಮನೋಜ್ ಚಾವ್ಲಾರಿಂದ ಗೊಬ್ಬರ ಲೂಟಿ ಆರೋಪ: ಪ್ರಕರಣ ದಾಖಲು

|
Google Oneindia Kannada News

ಹೈದರಾಬಾದ್‌, ನವೆಂಬರ್‌ 11: ಅಲೋಟ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಮನೋಜ್ ಚಾವ್ಲಾ ಮತ್ತು ಅವರ ಸಹಚರರ ವಿರುದ್ಧ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ರಸಗೊಬ್ಬರ ಲೂಟಿ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಗುರುವಾರ ರತ್ಲಾಮ್ ಜಿಲ್ಲೆಯ ಅಲೋಟ್ ಪಟ್ಟಣದ ಸರ್ಕಾರಿ ಗೋದಾಮಿನಲ್ಲಿ ಈ ಘಟನೆ ಸಂಭವಿಸಿದೆ. ಗೋದಾಮಿನ ವ್ಯವಸ್ಥಾಪಕರ ದೂರಿನ ನಂತರ ಕ್ರಮ ಕೈಗೊಳ್ಳಲಾಗಿದೆ. ''ಶಾಸಕ ಚ್ವಾಲಾ ಹಾಗೂ ಸಹಚರರು ಗೋದಾಮಿನ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಗೋದಾಮಿನ ಶಟರ್ ತೆರೆದು ರಸಗೊಬ್ಬರ ಲೂಟಿ ಮಾಡಿದ್ದಾರೆ'' ಎಂದು ರತ್ಲಾಮ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಭಿಷೇಕ್ ತಿವಾರಿ ಹೇಳಿದ್ದಾರೆ.

ಶೇ.20 ರಷ್ಟು ತೆಲಂಗಾಣ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯವೇ ಇಲ್ಲ: ವರದಿಶೇ.20 ರಷ್ಟು ತೆಲಂಗಾಣ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯವೇ ಇಲ್ಲ: ವರದಿ

ಘಟನೆಯ ನಂತರ ಒಟ್ಟು 21 ಚೀಲ ರಸಗೊಬ್ಬರಗಳು ಮತ್ತು ಆರು ಚೀಲ ಇತರ ಪದಾರ್ಥಗಳು ಕಾಣೆಯಾಗಿವೆ. ಶಾಸಕ ಚಾವ್ಲಾ ಮತ್ತು ಅವರ ಸಹಚರರಲ್ಲಿ ಒಬ್ಬರಾದ ಯೋಗೇಂದ್ರ ಸಿಂಗ್ ಜಾಡೋನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಉಳಿದ ವ್ಯಕ್ತಿಗಳನ್ನು ವಿಡಿಯೋ ಆಧಾರದ ಮೇಲೆ ಗುರುತಿಸಲಾಗುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿವಾರಿ ತಿಳಿಸಿದ್ದಾರೆ.

Congress MLA Manoj Chawla Alleged Fertilizer Looting: Case Filed

ನಾವು ಗೋದಾಮಿನ ಸ್ಥಳ ಪರಿಶೀಲನೆ ನಡೆಸಿದ್ದು, ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ ಎಂದು ಕಂಡುಬಂದಿದೆ. ವಾಸ್ತವವಾಗಿ ಘಟನೆಯ ಮೊದಲು ಅಲೋಟ್ ಕೇಂದ್ರದಿಂದ ಸುಮಾರು 29 ಮೆಟ್ರಿಕ್ ಟನ್ ಯೂರಿಯಾ ಮತ್ತು ಸುಮಾರು 890 ಮೆಟ್ರಿಕ್ ಟನ್ ಯೂರಿಯಾವನ್ನು ಇಡೀ ಜಿಲ್ಲೆಗೆ ವಿತರಿಸಲಾಗಿದೆ. ಅಲ್ಲದೆ, ಆನ್‌ಲೈನ್ ಪ್ರಕ್ರಿಯೆಯಲ್ಲಿ ಯಾವುದೇ ದೋಷ ಕಂಡುಬಂದರೆ ಅದನ್ನು ಆಫ್‌ಲೈನ್ ಮೋಡ್ ಮೂಲಕ ವಿತರಿಸಲಾಗುತ್ತದೆ ಎಂದರು.

ಆಂಬುಲೆನ್ಸ್ ಇಲ್ಲದೇ ಬೈಕ್‌ನಲ್ಲಿ 3 ವರ್ಷದ ಮಗುವಿನ ಮೃತದೇಹ ಹೊತ್ತೊಯ್ದ ದಂಪತಿ!ಆಂಬುಲೆನ್ಸ್ ಇಲ್ಲದೇ ಬೈಕ್‌ನಲ್ಲಿ 3 ವರ್ಷದ ಮಗುವಿನ ಮೃತದೇಹ ಹೊತ್ತೊಯ್ದ ದಂಪತಿ!

ಆದರೆ ಶಾಸಕ ಮನೋಜ್‌ ಚ್ವಾಲಾ ಮಾತನಾಡಿ, ''ರಸಗೊಬ್ಬರ ಕೊರತೆ ಬಗ್ಗೆ ಕಳೆದ ಎರಡು ದಿನಗಳಿಂದ ನಿರಂತರವಾಗಿ ರೈತರಿಂದ ದೂರು ಸ್ವೀಕರಿಸುತ್ತಿದ್ದೇನೆ. ರೈತರು ಸರತಿ ಸಾಲಿನಲ್ಲಿ ನಿಂತರೂ ರಸಗೊಬ್ಬರ ಸಿಕ್ಕಿಲ್ಲ. ದೂರಿನ ಮೇರೆಗೆ ಗೋದಾಮಿಗೆ ತೆರಳಿ ಪರಿಶೀಲನೆ ನಡೆಸಿದಾಗ ರಸಗೊಬ್ಬರಗಳ ಕಾಳಸಂತೆ ನಡೆಯುತ್ತಿದೆ ಎಂದು ರೈತರು ದೂರಿದ್ದಾರೆ. ಆದರೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ಮತ್ತು ಅಧಿಕಾರಿಗಳು ರೈತರ ಪರವಾಗಿ ನನ್ನ ನಿಲುವನ್ನು ಇಷ್ಟಪಡಲಿಲ್ಲ ಮತ್ತು ನನ್ನ ವಿರುದ್ಧ ನಕಲಿ ಎಫ್‌ಐಆರ್ ದಾಖಲಿಸಲಾಗಿದೆ. ಅವರು ಎಷ್ಟು ಸಾಧ್ಯವೋ ಅಷ್ಟು ದೂರುಗಳನ್ನು ಸಲ್ಲಿಸಬಹುದು. ಆದರೆ ನಾನು ರೈತರಿಗಾಗಿ ಹೋರಾಟ ಮಾಡುತ್ತೇನೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ'' ಎಂದು ಅವರು ಹೇಳಿದರು.

ಈ ಬಗ್ಗೆ ರತ್ಲಾಂ ಜಿಲ್ಲಾಧಿಕಾರಿ ನರೇಂದ್ರ ಸೂರ್ಯವಂಶಿ ಮಾತನಾಡಿ, ''ಇದೊಂದು ದುರದೃಷ್ಟಕರ ಘಟನೆ. ಜಿಲ್ಲೆಯಲ್ಲಿ ಯೂರಿಯಾ ಕೊರತೆ ಇಲ್ಲ. ಸರ್ವರ್‌ನಲ್ಲಿ ದೋಷವಿದ್ದರೂ ಆಫ್‌ಲೈನ್‌ನಲ್ಲಿ ಸುಮಾರು 150 ರೈತರಿಗೆ ರಸಗೊಬ್ಬರ ವಿತರಿಸಲಾಗಿದೆ'' ಎಂದು ತಿಳಿಸಿದ್ದಾರೆ.

English summary
A case has been registered against Congress MLA from Allot constituency Manoj Chawla and his associates on charges of looting fertilizer and obstructing government work in Madhya Pradesh's Ratlam district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X