ಸದನದಲ್ಲಿ ಅಶ್ಲೀಲ ವಿಡಿಯೋ ನೋಡಿ ಸಿಕ್ಕಿ ಬಿದ್ದ ಕಾಂಗ್ರೆಸ್ ಶಾಸಕ

ಭುವನೇಶ್ವರ, ಡಿ. 15: ಕರ್ನಾಟಕದ ಬ್ಲೂ ಬಾಯ್ಸ್ ನೆನಪಿಸುವಂಥ ಘಟನೆಗೆ ಒಡಿಶಾದ ವಿಧಾನಸಭೆ ಆಧಿವೇಶನ ಕೂಡಾ ಸಾಕ್ಷಿಯಾಗಿದೆ. ಕಾಂಗ್ರೆಸ್ ಶಾಸಕರೊಬ್ಬರು ಮೊಬೈಲ್ ಫೋನಿನಲ್ಲಿ ನೋಡಬಾರದ್ದು ನೋಡಿ ಸಿಕ್ಕಿ ಬಿದ್ದಿದ್ದಾರೆ.

ಒಡಿಶಾದ ಹಿರಿಯ ಕಾಂಗ್ರೆಸ್ ನಾಯಕ ನಬಾ ಕಿಶೋರ್ ದಾಸ್ ಅವರ ಮೇಲೆ ಅಸೆಂಬ್ಲಿಯಲ್ಲಿ ಪ್ರಶ್ನೋತ್ತರ ವೇಳೆ ನಡೆಯುವಾಗ ಅಶ್ಲೀಲ ವಿಡಿಯೋ ನೋಡಿದ ಆರೋಪ ಹೊರೆಸಲಾಗಿದೆ.[ಚಿಟ್ ಫಂಡ್ ವಂಚನೆ, ಸಿಬಿಐ ವಶಕ್ಕೆ ರೂಪದರ್ಶಿ]

ಕಾಂಗ್ರೆಸ್ ಶಾಸಕರ ಈ ಕೃತ್ಯದಿಂದ ನಾವೆಲ್ಲ ತಲೆತಗ್ಗಿಸುವಂತಾಗಿದೆ. ಸದನದ ಮರ್ಯಾದೆ ಮಣ್ಣುಪಾಲಾಗಿದೆ. ತಕ್ಷಣವೇ ಶಾಸಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬಿಜೆಡಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಪ್ರಮೀಳಾ ಮಲ್ಲಿಕ್ ಅವರು ಆಗ್ರಹಿಸಿದ್ದಾರೆ. ಅದರೆ, ಆರೋಪವನ್ನು ಅಲ್ಲಗೆಳೆದಿರುವ ಕಾಂಗ್ರೆಸ್ ನಾಯಕ, ನಾನು ಇದಕ್ಕೆ ಸದನದಲ್ಲೇ ಉತ್ತರಿಸುತ್ತೇನೆ ಎಂದಿದ್ದಾರೆ.

Congress MLA Caught Watching Porn in Odisha Assembly

ಝಾರುಗುಡದ ಶಾಸಕ ಕಿಶೋರ್ ಅವರು ಸದನದಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿರುವ ದೃಶ್ಯಾವಳಿಗಳನ್ನು ಸ್ಥಳೀಯ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿತ್ತು.

'ನನ್ನ ಮೊಬೈಲ್ ನಲ್ಲಿ ವಿಡಿಯೋ ಆಟೋ ಪ್ಲೇ ಆಯಿತು. ಏನು ಎಂದು ನೋಡುತ್ತಿದ್ದೆ ಅಷ್ಟೇ. ಇಂಟರ್ನೆಟ್ ಆನ್ ಮಾಡಿದ ತಕ್ಷಣ ಈ ರೀತಿ ಆಗಿದ್ದು, ತಕ್ಷಣ ಆಫ್ ಮಾಡಿದೆ. ನಾನು ಅಡಲ್ಟ್ ವಿಡಿಯೋ ನೋಡೇ ಇಲ್ಲ' ಎಂದು ದಾಸ್ ಅವರು ಪ್ರತಿಕ್ರಿಯಿಸಿದ್ದಾರೆ. ದಾಸ್ ಅವರ ಹೇಳಿಕೆಗೆ ಕಾಂಗ್ರೆಸ್ ಶಾಸಕ ಪ್ರಫುಲ ಮಾಂಝಿ ಸೇರಿದಂತೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

2012ರ ಫೆಬ್ರವರಿ 7ರಂದು ಕರ್ನಾಟಕದಲ್ಲಿ ವಿಧಾನಸಭಾ ಕಲಾಪ ನಡೆಯುತ್ತಿರುವಾಗ ಕೃಷ್ಣ ಪಾಲೇಮಾರ್ ಮತ್ತು ಸಿ.ಸಿ.ಪಾಟೀಲ್ ಹಾಗೂ ಲಕ್ಷ್ಮಣ್ ಸವದಿ ಅವರು ಅಶ್ಲೀಲ ವಿಡಿಯೋ ನೋಡಿ ಸುದ್ದಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+