ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶ

By Mahesh
|
Google Oneindia Kannada News

ನವದೆಹಲಿ, ಮಾ.26: ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣಾ ಪ್ರಣಾಳಿಕೆಯನ್ನು ಬುಧವಾರ ಪ್ರಕಟಿಸಿದೆ. 'ನಿಮ್ಮ ಧ್ವನಿ, ನಮ್ಮ ಸಂಕಲ್ಪ' ಎಂಬ ಹೆಸರಿನ ಈ ಪ್ರಣಾಳಿಕೆಯ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಉಪಸ್ಥಿತರಿದ್ದರು. ಮಹಿಳಾ ಸಬಲೀಕರಣ, ಆಹಾರ ಕಾಯ್ದೆ, ಹಿಂದುಳಿದ ವರ್ಗದವರಿಗೆ ಉದ್ಯೋಗ, 10 ಕೋಟಿಗೂ ಅಧಿಕ ಉದ್ಯೋಗ ಅವಕಾಶ ಸೃಷ್ಟಿ ಮುಂತಾದ ವಿಷಯಗಳು ಪ್ರಣಾಳಿಕೆಯ ಪ್ರಮುಖಾಂಶಗಳಾಗಿವೆ.

ಕಾಂಗ್ರೆಸ್ ಪಕ್ಷವು ಸಾಮೂಹಿಕ ನಾಯಕತ್ವದಲ್ಲಿ 16ನೆ ಲೋಕಸಭೆ ಚುನಾವಣೆಯನ್ನು ಎದುರಿಸುತ್ತಿದ್ದು, ಚುನಾವಣೆ ನಂತರ ಪಕ್ಷದ ಸಂಸದರು ಪ್ರಧಾನಿಯನ್ನು ಆಯ್ಕೆ ಮಾಡುವರು ಎಂಬ ಪ್ರಜಾತಾಂತ್ರಿಕ ರೀತಿಯನ್ನು ಅಳವಡಿಸಿಕೊಂಡಿದೆ.ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್, ಪ್ರಣಾಳಿಕೆ ಸಮಿತಿ ಅಧ್ಯಕ್ಷರೂ ಆಗಿರುವ ರಕ್ಷಣಾ ಸಚಿವ ಎ.ಕೆ.ಆಂಟನಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ‌ಗಾಂಧಿ, ಮುಖಂಡರಾದ ಅಜಯ್ ಮಕೇನ್, ಜನಾರ್ದನ್ ದ್ವಿವೇದಿ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ಹತ್ತು ವರ್ಷಗಳ ಯುಪಿಎ ಸರ್ಕಾರದ ಸಾಧನೆಯನ್ನು ರಾಹುಲ್ ಗಾಂಧಿ ಹೊಗಳುತ್ತಾ ಈ ಪ್ರಣಾಳಿಕೆ ಸಿದ್ಧಗೊಳಿಸಲು ಸುಮಾರು 5 ತಿಂಗಳು ತೆಗೆದುಕೊಳ್ಳಲಾಗಿದೆ.2009ರ ಪ್ರಣಾಳಿಕೆಯಲ್ಲಿ ಶೇ.90ರಷ್ಟು ಭರವಸೆ ಈಡೇರಿಕೆ ಮಾಡಿರುವುದು ದೊಡ್ಡ ಸಾಧನೆ ಎಂದರು.ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶ ಇಂತಿದೆ: [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Congress manifesto for 2014 polls promises inclusive growth

* 2020ರಷ್ಟರಲ್ಲಿ 10 ಕೋಟಿ ಹೊಸ ಉದ್ಯೋಗ ಅವಕಾಶ ಸೃಷ್ಟಿ.
* ದೇಶದ 14 ಕೋಟಿ ಜನ ಬಡತನದಿಂದ ಮುಕ್ತ
* ಮೂರು ವರ್ಷಗಳಲ್ಲಿ ಶೇ.8 ಪ್ರಗತಿ ದರ
* ಖಾಸಗಿ ಕ್ಷೇತ್ರಗಳಲ್ಲಿ ಮೀಸಲಾತಿ ಸೌಲಭ್ಯ
* ಎಸ್ ಸಿ, ಎಸ್ ​​ಟಿ ವರ್ಗಕ್ಕೆ ಮೀಸಲು ಸೌಲಭ್ಯ
* ಆರೋಗ್ಯ ಹಕ್ಕು ಜಾರಿಗೆ ನಿರ್ಧಾರ; ಎಲ್ಲರಿಗೂ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೌಲಭ್ಯ.
* ಸಾಮಾಜಿಕ ಭದ್ರತೆಯ ಹಕ್ಕು
* ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಆರ್ಥಿಕ ಭದ್ರತೆ
* ವೃದ್ಧರು ಮತ್ತು ಅಂಗವಿಕಲರಿಗೆ ಫಿಕ್ಸೆಡ್ ಪೆನ್ಷನ್ ಯೋಜನೆ
* ಎಲ್ಲಾ ರಫ್ತು ತೆರಿಗೆ ರದ್ದು
* ಉತ್ಪಾದನೆ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ನೀಡುವ ಮೂಲಕ ಹೆಚ್ಚಿನ ಆರ್ಥಿಕ ಪ್ರಗತಿಯ ಗುರಿ
* ಬಾಕಿ ಇರುವ ಭ್ರಷ್ಟಾಚಾರ ವಿರೋಧಿ ಮಸೂದೆಗಳ ಜಾರಿಗೆ ಒತ್ತು
* ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದವರಿಗೆ ಉದ್ಯೋಗ
* ಸೂರಿನ ಹಕ್ಕು: ದೇಶದ ಪ್ರತಿಯೊಬ್ಬರಿಗೂ ವಸತಿ ಸೌಲಭ್ಯ.
* ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಒತ್ತು
* ರಾಜಕೀಯದಲ್ಲಿ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಬರುವಂಥ ವಾತಾವರಣ ನಿರ್ಮಾಣ
* ದೇಶಾದ್ಯಂತ ಇನ್ನಷ್ಟು ಮಹಿಳಾ ಪೊಲೀಸ್ ಠಾಣೆಗಳ ನಿರ್ಮಾಣ
* ವಿದೇಶಗಳಲ್ಲಿ ಅಡಗಿರುವ ಕಪ್ಪುಹಣವನ್ನ ವಶಪಡಿಸಿಕೊಳ್ಳಲು ಕ್ರಮ.
* ನೂರು ಮಿಲಿಯನ್ ಉದ್ಯೋಗ ಸೃಷ್ಟಿ, ಆರೋಗ್ಯ ವಲಯದಲ್ಲಿ 60 ಲಕ್ಷ ಉದ್ಯೋಗ. ಪ್ರಣಾಳಿಕೆಯ ಪೂರ್ಣ ಪಾಠ ಓದಲು ಇಲ್ಲಿ ಕ್ಲಿಕ್ ಮಾಡಿ

English summary
The Congress Party's election manifesto was all about Rahul Gandhi speaking of achievements like Women's Bill, food bill, all inclusive growth and upliftment of the downtrodden. The Manifesto truly reflects the voice of the people and maintained that the party has delivered on 90 percent of the promises made in the previous election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X