ಸತ್ಯಕ್ಕೆ ಸಿಕ್ಕ ಜಯ : ರಾಹುಲ್ ವಿರುದ್ಧದ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ ಕೊಟ್ಟ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ

ಮೋದಿ ಉಪನಾಮದ ಕುರಿತಾದ 2019ರ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯವರಿಗೆ ಸೂರತ್ ನ್ಯಾಯಾಲಯ ವಿಧಿಸಿರುವ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಕಾಂಗ್ರೆಸ್ ಇದು ಸತ್ಯಕ್ಕೆ ಸಿಕ್ಕ ಜಯ ಎಂದು ಸಂತೋಷ ವ್ಯಕ್ತಪಡಿಸಿದೆ.

ಇದು ದ್ವೇಷದ ವಿರುದ್ಧ ಪ್ರೀತಿಯ ಗೆಲುವು, ಸತ್ಯಮೇವ ಜಯತೆ - ಜೈಹಿಂದ್ ಎಂದು ಟ್ವೀಟ್ ಮಾಡಿದೆ. ಸಂವಿಧಾನವನ್ನು ಎತ್ತಿಹಿಡಿಯುವ ಕಾಂಗ್ರೆಸ್ ಆಶಯಕ್ಕೆ ಜಯ ಸಿಕ್ಕಿದೆ, ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿಯ ಪಿತೂರಿ ಬಯಲಾಗಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.

Congress Interprets SC Verdict as Powerful Validation of Truth in Rahuls Conviction Stay

ಮೋದಿ ಉಪನಾಮ ಹೇಳಿಕೆ ಮೇಲಿನ ಪ್ರಕರಣದಲ್ಲಿ ರಾಜೀವ್ ಗಾಂಧಿ ಅವರಿಗೆ ನೀಡಿರುವ ಶಿಕ್ಷೆಯ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದ್ದು, ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವನ್ನು ಮರಳಿ ಪಡೆಯಲು ಅವಕಾಶ ಮಾಡಿಕೊಟ್ಟಿದೆ.

ಲೋಕಸಭೆಯ ಸ್ಪೀಕರ್ ಈಗ ತಾವೇ ಸ್ವತಃ ತನ್ನ ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನು ಪುನರುಜ್ಜೀವನಗೊಳಿಸಬಹುದು ಅಥವಾ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಹುಲ್ ಗಾಂಧಿಯವರೇ ತಮ್ಮ ಸಂಸದನ ಸ್ಥಾನ ಮಾನ ಮರಳಿ ಪಡೆಯಲಿ ಪ್ರಯತ್ನಿಸಬಹುದು.

ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿರ್ಲಾ ಅವರನ್ನು ಭೇಟಿಯಾಗಿ ಗಾಂಧಿಯವರ ಸದಸ್ಯತ್ವವನ್ನು ಮತ್ತೆ ನೀಡುವಂತೆ ಒತ್ತಾಯಿಸಿದರು.

ಪ್ರಜಾಪ್ರಭುತ್ವ ಗೆದ್ದಿದೆ ಎಂದ ಖರ್ಗೆ

"'ಸತ್ಯಕ್ಕೆ ಸಿಕ್ಕ ಜಯ' ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶ್ಲಾಘಿಸಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಪರಿಹಾರ ನೀಡುವ ಗೌರವಾನ್ವಿತ ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ನ್ಯಾಯ ಸಿಕ್ಕಿದೆ. ಪ್ರಜಾಪ್ರಭುತ್ವ ಗೆದ್ದಿದೆ. ಸಂವಿಧಾನವನ್ನು ಎತ್ತಿ ಹಿಡಿಯಲಾಗಿದೆ. ರಾಹುಲ್ ಗಾಂಧಿ ಮೇಲೆ ಬಿಜೆಪಿಯ ಷಡ್ಯಂತ್ರವನ್ನು ಸಂಪೂರ್ಣವಾಗಿ ಬಹಿರಂಗಪಡಿಸಲಾಗಿದೆ," ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

"ಪ್ರತಿಪಕ್ಷದ ನಾಯಕರನ್ನು ತಮ್ಮ ದುರುದ್ದೇಶದಿಂದ ಗುರಿಯಾಗಿಸುವುದನ್ನು ನಿಲ್ಲಿಸಲು ಇದು ಸಮಯವಾಗಿದೆ. ಜನಾದೇಶವನ್ನು ಅವರು ಗೌರವಿಸಬೇಕು, ಬಿಜೆಪಿ ದೇಶವನ್ನು ಆಳುವಲ್ಲಿ 10 ವರ್ಷಗಳಿಂದ ವಿಫಲವಾಗಿದೆ" ಎಂದು ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಹೇಳಿದ್ದೇನು?

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದು, ಗೌತಮ ಬುದ್ಧನ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ - "ಮೂರು ವಿಷಯಗಳನ್ನು ದೀರ್ಘಕಾಲ ಮರೆಮಾಡಲು ಸಾಧ್ಯವಿಲ್ಲ: ಸೂರ್ಯ, ಚಂದ್ರ ಮತ್ತು ಸತ್ಯ." ಈ ತೀರ್ಪಿಗೆ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಸಲ್ಲಿಸಿದ ಅವರು 'ಸತ್ಯಮೇವ ಜಯತೆ' ಎಂದು ಬರೆದಿದ್ದಾರೆ.

ಈ ತೀರ್ಪು ಸತ್ಯ ಮತ್ತು ನ್ಯಾಯದ ಬಲವಾದ ಸಮರ್ಥನೆಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನಗಳ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದ್ದಾರೆ. "ಬಿಜೆಪಿಯ ಯಂತ್ರದ ಅವಿರತ ಪ್ರಯತ್ನಗಳ ಹೊರತಾಗಿಯೂ, ರಾಹುಲ್ ಗಾಂಧಿ ಕ್ಷಮೆ ಕೇಳಲು, ತಲೆ ಬಾಗಲು ನಿರಾಕರಿಸಿದ್ದಾರೆ, ಬದಲಿಗೆ ನ್ಯಾಯಾಂಗ ಪ್ರಕ್ರಿಯೆಯಲ್ಲಿ ನಂಬಿಕೆ ಇಟ್ಟಿದ್ದಾರೆ" ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.

"ಬಿಜೆಪಿ ಮತ್ತು ಅದರ ಸಹವರ್ತಿಗಳಿಗೆ ಇದು ಪಾಠವಾಗಲಿ: ನೀವು ಎಷ್ಟೇ ಕೆಟ್ಟದ್ದನ್ನು ಮಾಡಬಹುದು ಆದರೆ ನಾವು ಹಿಂದೆ ಸರಿಯುವುದಿಲ್ಲ. ನಾವು ಸರ್ಕಾರವಾಗಿ ಮತ್ತು ಪಕ್ಷವಾಗಿ ನಿಮ್ಮ ವೈಫಲ್ಯಗಳನ್ನು ಬಹಿರಂಗಪಡಿಸುತ್ತೇವೆ. ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ. ಸಾಂವಿಧಾನಿಕ ಆದರ್ಶಗಳು ಮತ್ತು ಸಂಸ್ಥೆಗಳಲ್ಲಿ ನಂಬಿಕೆಯನ್ನು ಇರಿಸಿ. ಸತ್ಯಮೇವ ಜಯತೆ!" ಜೈರಾಂ ರಮೇಶ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+