ನಿಮಗೆ 100ಕ್ಕೆ 99 ಬಂದಿಲ್ಲ, ನೀವು 543ಕ್ಕೆ 99 ಪಡೆದಿದ್ದೀರಿ: ವಿರೋಧ ಪಕ್ಷದ "ಕೈ" ಹಿಂಡಿದ ಪ್ರಧಾನಿ
18ನೇ ಲೋಕಸಭೆಯಲ್ಲಿ ಸಂಸತ್ ಅಧಿವೇಶನದ ಏಳನೇ ದಿನದಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ನೈಜ ಧಾಟಿಯಲ್ಲೇ ಮಾತನ್ನು ಆರಂಭಿಸಿದ ಮೋದಿ ವಿಪಕ್ಷಗಳನ್ನು ತಿವಿಯುತ್ತಲೇ ಸಾಗಿದರು.
ಕಾಂಗ್ರೆಸ್ 100ರ ಗಡಿ ದಾಟಲು ಸಾಧ್ಯವಾಗದೆ 99ಕ್ಕೆ ಸಿಲುಕಿದೆ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದ್ದಾರೆ. ಇದಕ್ಕೆ ಒಂದು ಸನ್ನಿವೇಶವನ್ನು ನೆನೆದು ಮಾತು ಮುಂದುವರಿಸಿದ ಅವರು, ಒಬ್ಬ ವಿದ್ಯರ್ಥಿ ಶೇಕಡಾ ಬಿದ್ದಿದೆ ಎಂದು ಸಂಭ್ರಮದಿಂದ ಎಲ್ಲರಿಗೂ ಸಿಹಿಯನ್ನು ಹಂಚುತ್ತಿದ್ದ. ಆದರೆ ಅಲ್ಲಿ ಮತ್ತೊಬ್ಬ ಬಂದು ನೀನು 100ಕ್ಕೆ 99 ಪಡೆದಿಲ್ಲ, 543ಕ್ಕೆ 99 ಪಡೆದಿದ್ದೀಯಾ ಎಂದು ತಿಳಿಸಿದ್ದರು. ಆಗಲೇ ಅವರಿಗೆ ತಮ್ಮ ಈಗಿನ ಸ್ಥಾನದ ಅರಿವಾಗಿತ್ತು ಎಂದು ತಿಳಿಸಿದ್ದರು.

ಇನ್ನು ಮುಂದು ವರೆದು ಮಾತನಾಡಿದ ಪ್ರಧಾನಿ ವಿಪಕ್ಷಗಳ ಬಾಲಿಶ ಬುದ್ಧಿಗೆ ಯಾರು ಸಮಜಾಯಿಷಿ ಕೊಡುತ್ತಾರೆ ನೀವು ಸೋಲಿನ ವಿಶ್ವ ದಾಖಲೆ ಬರಿದಿದ್ದೀರಿ ಎಂದು ಕುಟುಕಿದರು.
ಕಾಂಗ್ರೆಸ್ ನಾಯಕರ ಮಾತುಗಾರಿಕೆಯ ಮುಂದೆ ಖ್ಯಾತ ಶೋಲೆ ಚಿತ್ರದ ಡೈಲಾಗ್ ಸಹ ಹಿಂದೆ ಬಿಳುತ್ತಿವೆ. ಶೋಲೆ ಸಿನಿಮಾದ ಆ ಚಿಕ್ಕಮ್ಮ ನಿಮಗೆಲ್ಲ ನೆನಪಿರಬಹುದು. ನಾವು ಮೂರನೇ ಬಾರಿ ಸೋತಿದ್ದೇವೆ ಆದರೆ ಚಿಕ್ಕಮ್ಮ ಇದು ನಿಜ, ನಾವು ಮೂರನೇ ಬಾರಿಗೆ ಸೋತಿದ್ದೇವೆ ಆದರೆ ಅತ್ತೆ ಇದು ನೈತಿಕ ಗೆಲುವು ಅಲ್ಲವೇ? ಎನ್ನುತ್ತಾರೆ ಎಂದಿದ್ದಾರೆ.

ನಕಲಿ ಗೆಲುವಿನ ಪ್ರಭಾವದಿಂದ ಜನಾದೇಶವನ್ನು ಹತ್ತಿಕ್ಕಬೇಡಿ. ದೇಶವಾಸಿಗಳ ಆದೇಶವನ್ನು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ಒಪ್ಪಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಿ ಎಂದು ಪ್ರಧಾನಿ ತಿಳಿಸಿದ್ದಾರೆ.
ಭಾರತದಲ್ಲಿ ನಡೆದ ಚುನಾವಣೆ ವಿಶ್ವದ ಅತಿದೊಡ್ಡ ಚುನಾವಣಾ ಪ್ರಚಾರ ಎಂದು ನಾವು ಜಗತ್ತಿಗೆ ತೋರಿಸಿದ್ದೇವೆ. ವಿಶ್ವದ ಅತಿದೊಡ್ಡ ಚುನಾವಣಾ ಪ್ರಚಾರದಲ್ಲಿ ದೇಶದ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಸತತವಾಗಿ ಸುಳ್ಳುಗಳನ್ನು ಹಬ್ಬಿಸಿದರೂ ತೀವ್ರ ಸೋಲನ್ನು ಅನುಭವಿಸಿದ ಕೆಲವರ ನೋವು ನನಗೆ ಅರ್ಥವಾಗುತ್ತಿದೆ ಎಂದು ತಿಳಿಸಿದ್ದಾರೆ.
ದೇಶಕ್ಕೆ ಹಾನಿ ಆದರೆ ಸಹಿಸೆವು
ದೇಶವನ್ನು ವಿಭಜಿಸುವ ಶಕ್ತಿಗಳನ್ನು ಬೆಂಬಲಿಸುವ ಜನರಿದ್ದಾರೆ. ಇಂತಹವರ ಬಗ್ಗೆ ದೇಶವಾಸಿಗಳು ಜಾಗರೂಕರಾಗಿರಬೇಕು. ಇದಲ್ಲದೆ, ದೇಶವನ್ನು ನಾಶಮಾಡುವ ಕೆಲವು ವ್ಯವಸ್ಥೆಗಳಿವೆ. ಅವರ ಪ್ರತಿಯೊಂದು ಷಡ್ಯಂತ್ರಕ್ಕೂ ಅವರದೇ ಭಾಷೆಯಲ್ಲಿ ಉತ್ತರಿಸಲಾಗುವುದು ಎಂದು ಎಚ್ಚರಿಕೆ ನೀಡುತ್ತೇನೆ ಎಂದು ಗುಡುಗಿದರು.
ರಾಹುಲ್ ಹೇಳಿಗೆ ಪಿಎಂ ಮೋದಿ ಹೇಳಿದ್ದೇನು?
131 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಸಹಿಷ್ಣುತೆಯನ್ನು ಕಲಿಸಿದ ಧರ್ಮದಿಂದ ನಾನು ಬಂದಿದ್ದೇನೆ ಎಂದು ಹೆಮ್ಮೆಪಡುತ್ತೇನೆ. ಹಿಂದೂಗಳ ವಿರುದ್ಧ ಸುಳ್ಳು ಆರೋಪ ಮಾಡುವ ಷಡ್ಯಂತ್ರ ನಡೆಯುತ್ತಿರುವುದು ಗಂಭೀರ ವಿಚಾರ. ಹಿಂದೂಗಳು ಹಿಂಸಾವಾದಿಗಳು ಎಂದು ಹೇಳುವುದು ನಿಮ್ಮ ಸಂಸ್ಕೃತಿ. ಈ ದೇಶ ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ಹೇಳಿದರು.












Click it and Unblock the Notifications