ಕಾಂಗ್ರೆಸ್‌ಗೆ ಮಹಿಳೆಯರ ಬಗ್ಗೆ ಕಾಳಜಿ ಇಲ್ಲ: ರಾಜಸ್ಥಾನದ ಅಜ್ಮೀರ್‌ನಲ್ಲಿ ಪ್ರಧಾನಿ ಮೋದಿ ಆರೋಪ
ಅಜ್ಮೀರ್, ಮೇ 31: ರಾಜಸ್ಥಾನದ ಅಜ್ಮೀರ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್‌ಗೆ ಮಹಿಳೆಯರ ಬಗ್ಗೆ ಕಾಳಜಿ ಇಲ್ಲ, ನಾವು ಅವರಿಗಾಗಿ ಹಲವಾರು ಯೋಜನೆಗಳನ್ನು ತಂದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
'ಅಜ್ಮೀರ್‌ಗೆ ಬರುವ ಮೊದಲು, ನನಗೆ ಪುಷ್ಕರ್‌ಗೆ ಭೇಟಿ ನೀಡುವ ಅವಕಾಶ ಸಿಕ್ಕಿತು. ನಮ್ಮ ಗ್ರಂಥಗಳಲ್ಲಿ, ಬ್ರಹ್ಮ ದೇವರನ್ನು ಬ್ರಹ್ಮಾಂಡದ ಸೃಷ್ಟಿಕರ್ತ ಎಂದು ಕರೆಯಲಾಗುತ್ತದೆ. ಬ್ರಹ್ಮದೇವನ ಆಶೀರ್ವಾದದಿಂದ ಭಾರತದಲ್ಲಿ ಹೊಸ ಸೃಷ್ಟಿಯ ಯುಗ ನಡೆಯುತ್ತಿದೆ' ಎಂದು ಮೋದಿ ತಿಳಿಸಿದರು.

'ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 9 ವರ್ಷ ಪೂರೈಸಿದೆ. ಈ 9 ವರ್ಷಗಳನ್ನು ನಾಗರಿಕರ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ' ಎಂದು ಹೇಳಿದರು.
ಕಾಂಗ್ರೆಸ್ಸಿನ ಈ 'ಗ್ಯಾರೆಂಟಿ ಪದ್ಧತಿ' ಹೊಸದಲ್ಲ, ಇದು ಹಳೆಯದು. 50 ವರ್ಷಗಳ ಹಿಂದೆ ಕಾಂಗ್ರೆಸ್ ದೇಶಕ್ಕೆ 'ಗರೀಬಿ ಹಠಾವೋ' ಭರವಸೆ ನೀಡಿತ್ತು. ಇದು ಕಾಂಗ್ರೆಸ್ ಪಕ್ಷ ಬಡವರಿಗೆ ಮಾಡಿದ ದೊಡ್ಡ ದ್ರೋಹ. ಬಡವರನ್ನು ವಂಚಿಸುವುದು ಕಾಂಗ್ರೆಸ್‌ನ ತಂತ್ರವಾಗಿದೆ. ಇದರಿಂದ ರಾಜಸ್ಥಾನದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮೋದಿ ತಿಳಿಸಿದರು.
2014 ರ ಮೊದಲು ಪರಿಸ್ಥಿತಿ ಹೇಗಿತ್ತು? ಭ್ರಷ್ಟಾಚಾರದ ವಿರುದ್ಧ ಜನರು ಬೀದಿಗಿಳಿದಿದ್ದರು, ದೊಡ್ಡ ನಗರಗಳಲ್ಲಿ ಭಯೋತ್ಪಾದಕರ ದಾಳಿಗಳು ನಡೆಯುತ್ತಿದ್ದವು. ಗಡಿಯಲ್ಲಿ ರಸ್ತೆ ನಿರ್ಮಿಸಲು ಕಾಂಗ್ರೆಸ್ ಸರ್ಕಾರ ಹೆದರುತ್ತಿತ್ತು. ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚಾಗಿದ್ದವು, ಪ್ರಧಾನಮಂತ್ರಿಯವರ ಮೇಲೆ ಸೂಪರ್ ಪವರ್ ಇತ್ತು. ಕಾಂಗ್ರೆಸ್ ಸರ್ಕಾರ ರಿಮೋಟ್ ಕಂಟ್ರೋಲ್ ಮೂಲಕ ಕಾರ್ಯನಿರ್ವಹಿಸುತ್ತಿತ್ತು ಎಂದು ಮೋದಿ ಆರೋಪಿಸಿದರು.

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಕೇಳುತ್ತಾರೆ. ಮೋದಿಯವರು ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಹಣ ಎಲ್ಲಿಂದ ತರುತ್ತಾರೆ ಎಂದು. ಅಭಿವೃದ್ಧಿ ಕಾರ್ಯಗಳಿಗೆ ದೇಶದಲ್ಲಿ ಯಾವತ್ತೂ ಹಣದ ಕೊರತೆ ಇರಲಿಲ್ಲ. ಆದರೆ ಅವರ ಆಡಳಿತದಲ್ಲಿ ಕಾಂಗ್ರೆಸ್ ಸರ್ಕಾರವು ರಕ್ತ ಹೀರುವ ಭ್ರಷ್ಟ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತು. ಅದು ದೇಶದ ಅಭಿವೃದ್ಧಿಯನ್ನು ಹಾಳುಮಾಡಿತು. ಕಳೆದ 9 ವರ್ಷಗಳಲ್ಲಿ, ಬಿಜೆಪಿ ಸರ್ಕಾರದಿಂದ ದೇಶದ ಅಭಿವೃದ್ಧಿ ಸಾಧ್ಯವಾಯಿತು ಎಂದು ಪ್ರಧಾನಿ ತಿಳಿಸಿದರು.
ಭಾರತದ ಸಾಧನೆಗಳು, ಭಾರತದ ಜನರ ಯಶಸ್ಸು ಕೆಲವೇ ಜನರಿಗೆ ಜೀರ್ಣವಾಗುವುದಿಲ್ಲ. ಭಾರತಕ್ಕೆ ಹೊಸ ಸಂಸತ್ ಭವನ ಸಿಕ್ಕಿತು. ಹೊಸ ಸಂಸತ್ತಿನ ಬಗ್ಗೆ ನಿಮಗೆ ಹೆಮ್ಮೆ ಇಲ್ಲವೇ?... ಆದರೆ ಕಾಂಗ್ರೆಸ್ ಮತ್ತು ಅದರಂತೆ ಇತರ ಕೆಲವು ಪಕ್ಷಗಳು ಅದರ ಮೇಲೆ ರಾಜಕೀಯದ ಕೆಸರು ಎಸೆದವು ಎಂದು ಮೋದಿ ಆರೋಪಿಸಿದ್ದಾರೆ.

ತಮ್ಮ ಅಹಂಕಾರದ ಮುಂದೆ ಬಡವನ ಮಗ ಹೇಗೆ ನಿಂತಿದ್ದಾನೆ ಎಂದು ಅವರು ಕೋಪಗೊಂಡಿದ್ದಾರೆ? ಬಡವರ ಮಗ ತಮ್ಮ ನಿರಂಕುಶತೆಯನ್ನು ಏಕೆ ಬಿಡುತ್ತಿಲ್ಲ ಎಂದು ಅವರು ಕೋಪಗೊಂಡಿದ್ದಾರೆ. ಬಡವರ ಮಗ ತಮ್ಮ ಭ್ರಷ್ಟಾಚಾರ ಮತ್ತು ರಾಜವಂಶವನ್ನು ಏಕೆ ಪ್ರಶ್ನಿಸುತ್ತಿದ್ದಾನೆ ಎಂದು ಅವರು ಕೋಪಗೊಂಡಿದ್ದಾರೆ? ಎಂದು ಮೋದಿ ಪ್ರಶ್ನಿಸಿದ್ದಾರೆ.












Click it and Unblock the Notifications