ಕಾಂಗ್ರೆಸ್ ಕಾಳಜಿ ಏನಿದ್ದರೂ ಒಂದೇ ಕುಟುಂಬದ ಮೇಲೆ: ಮೋದಿ

ಮಾಲೌಟ್, ಜುಲೈ 11: 'ಕಾಂಗ್ರೆಸ್ ಕಾಳಜಿ ಏನಿದ್ದರೂ ಒಂದೇ ಕುಟುಂಬಕ್ಕೆ ಸೀಮಿತವಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪಂಜಾಬಿನ ಮಾಲೌಟ್ ನಲ್ಲಿ ರೈತರ rally ಯೊಂದರಲ್ಲಿ ಮಾತನಾಡುತ್ತಿದ್ದ ಅವರು, ಮೋದಿ ಸರ್ಕಾರ ಇತ್ತೀಚೆಗೆ ಘೋಷಿಸಿದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಮಾತನಾಡಿದರು.

"ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತ ಬಂದಿದೆ. ರೈತರ ಕಷ್ಟಗಳು ಅದಕ್ಕೆ ಅರ್ಥವಾಗಿಲ್ಲ. ರೈತರ ಕಲ್ಯಾಣಕ್ಕಾಗಿ ನೂರಾರು ಘೋಷಣೆಗಳನ್ನೇನೋ ಅವರು ಮಾಡಿದ್ದರು. ಆದರೆ ಕೊನೆಗೆ ಅವರೆಲ್ಲ ತಲೆ ಕೆಡಿಸಿಕೊಂಡಿದ್ದು ಕೇವಲ ಒಂದು ಕುಟುಂಬದ ಕಲ್ಯಾಣದ ಬಗ್ಗೆ ಮಾತ್ರ" ಎಂದು ಮೋದಿ ಕಾಂಗ್ರೆಸ್ಸನ್ನು ತರಾಟೆಗೆ ತೆಗೆದುಕೊಂಡರು.

Congress cared only for one family: PM Modi in Punjab

"ನಮ್ಮ ಸರ್ಕಾರ ರೈತರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳು ನಮಗೆ ರೈತರ ಪರ ಇರುವ ಕಾಳಜಿಗೆ ಸಾಕ್ಷಿ" ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಯ ತಯಾರಿಯಲ್ಲಿರುವ ಪ್ರಧಾನಿ ಮೋದಿ, ವಿವಿಧ ರಾಜ್ಯಗಳಲ್ಲಿ ಪ್ರಚಾರ ಕಾರ್ಯವನ್ನು ಈಗಲೇ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಪಂಜಾಬಿನ ಮಾಲೌಟ್ ನಲ್ಲಿ ರೈತರ rally ಯಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+