MP Assembly Elections 2023: ಫಕೀರನಿಂದ ಚಪ್ಪಲಿ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ!

ಭೋಪಾಲ್ ನವೆಂಬರ್ 18: ಚುನಾವಣೆಯಲ್ಲಿ ಗೆಲ್ಲಲು ಏನು ಮಾಡಬೇಕಾಗಿಲ್ಲ. ಒಂದಿಷ್ಟು ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಬಿಟ್ಟರೆ ಸಾಕು. ಅದೆಂದರೆ ಕೆಲವೊಮ್ಮೆ ಜನರ ಪಾದ ಮುಟ್ಟೋದು, ಇನ್ನು ಕೆಲವೊಮ್ಮೆ ವಿಚಿತ್ರ ರೀತಿಯಲ್ಲಿ ಪ್ರಚಾರ ಮಾಡೋದು. ಇಷ್ಟು ಮಾಡಿದರೆ ಸಾಕು ಆಮೇಲೆ ಜನವೋ ಜನ.

ಚುನಾವಣಾ ಸಮಯದಲ್ಲಿ ರಾಜಕಾರಣಿಗಳ ಇಂತಹ ಅನೇಕ ವೀಡಿಯೊಗಳು ವೈರಲ್ ಆಗುತ್ತವೆ. ಅದರಲ್ಲಿ ಅವರು ತಮ್ಮ ವಿಶಿಷ್ಟ ಪ್ರಚಾರಗಳು ಅಥವಾ ಅವರ ವಿಚಿತ್ರ ಚಟುವಟಿಕೆಗಳಿಂದ ಸುದ್ದಿ ಮಾಡುತ್ತಾರೆ. ಮಧ್ಯಪ್ರದೇಶದಲ್ಲಿ ಮತದಾನಕ್ಕೂ ಮುನ್ನ ಚುನಾವಣಾ ಪ್ರಚಾರದ ವೇಳೆ ನಾಯಕರೊಬ್ಬರ ಇದೇ ರೀತಿಯ ವಿಡಿಯೋ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಅವರು ವಯಸ್ಸಾದ ವ್ಯಕ್ತಿಯಿಂದ ಚಪ್ಪಲಿಯಿಂದ ಹೊಡೆಸಿಕೊಂಡಿದ್ದಾರೆ.

congress-candidate-who-got-blessed

ಬಾಬಾನ ಚಪ್ಪಲಿ ಆಶೀರ್ವಾದ

ಶೂ ಅಥವಾ ಚಪ್ಪಲಿಯಲ್ಲಿ ಹೊಡೆಸಿಕೊಳ್ಳುವುದು ಅವಮಾನವೆಂದು ಪರಿಗಣಿಸಲಾಗಿದ್ದರೂ, ಮಧ್ಯಪ್ರದೇಶದ ರತ್ಲಾಮ್‌ನ ಕಾಂಗ್ರೆಸ್ ಅಭ್ಯರ್ಥಿ ಪರಸ್ ಸಕ್ಲೇಚಾ ಅವರು ತಮ್ಮ ಕೆನ್ನೆ ಮತ್ತು ತಲೆಯ ಮೇಲೆ ಚಪ್ಪಲಿಯಿಂದ ಹೊಡೆಸಿಕೊಂಡು ಸಂತೋಷಗೊಂಡಿದ್ದಾರೆ. ಜೊತೆಗೆ ಇದು ಫಕೀರನಿಂದ ತಾವು ಪಡೆದ ಆಶೀರ್ವಾದ ಎಂದು ಹೇಳಿಕೊಂಡಿದ್ದಾರೆ.

ವಾಸ್ತವವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಕಪಾಳಮೋಕ್ಷ ಮಾಡುತ್ತಿರುವ ವೃದ್ಧ ಫಕೀರ. ಚಪ್ಪಲಿಯಿಂದ ಆಶೀರ್ವಾದ ನೀಡುವ ಫಕೀರ ಎಂದೇ ಹೆಸರುವಾಸಿ. ವೀಡಿಯೋದಲ್ಲಿ ಫಕೀರ್ ಪರಾಸ್ ಸಕ್ಲೇಚಾಗೆ 'ಬಸ್ ಬಸ್, ಹೋ ಗಯಾ' (ಸಾಕು, ಮುಗಿತು) ಎಂದು ಬಲವಾಗಿ ಹೊಡೆಯುವ ಮೂಲಕ ಆಶೀರ್ವದಿಸಿದ್ದಾರೆ.

ಮತದಾನದ ದಿನದಂದು ವಿಡಿಯೋ ವೈರಲ್

ಶುಕ್ರವಾರ ಮತದಾನದ ದಿನದಂದು ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸಕ್ಲೇಚಾ ಅವರು ಈ ವೀಡಿಯೊದಲ್ಲಿ ವ್ಯಕ್ತಿ ಪ್ರಸಿದ್ಧ ಫಕೀರ್ ಬಾಬಾ ಎಂದು ಹೇಳಿದ್ದಾರೆ. ಅವರನ್ನು ಆ ಪ್ರದೇಶದಲ್ಲಿ ಪ್ರೀತಿಯಿಂದ 'ಅಬ್ಬಾ' ಎಂದು ಕರೆಯಲಾಗುತ್ತದೆ. ಇವರು ಮೋಹೋ ರಸ್ತೆಯಲ್ಲಿರುವ ದರ್ಗಾದಲ್ಲಿ ವಾಸಿಸುತ್ತಾರೆ ಮತ್ತು ಹೆಚ್ಚಿನ ಗೌರವವನ್ನು ಹೊಂದಿದ್ದಾರೆ. ಜನರು ಅವನಿಗೆ ಲುಂಗಿ, ಬಟ್ಟೆ ಮತ್ತು ಚಪ್ಪಲಿಗಳನ್ನು ಉಡುಗೊರೆಯಾಗಿ ನೀಡಲು ಬಯಸುತ್ತಾರೆ, ಆದರೆ ಅವರು ಕೆಲವನ್ನು ಮಾತ್ರ ಸ್ವೀಕರಿಸುತ್ತಾರೆ ಮತ್ತು ಉಳಿದವುಗಳನ್ನು ಎಸೆಯುತ್ತಾರೆ.

ಬಾಬಾನಿಗೆ ಚಪ್ಪಲಿ ಕೊಟ್ಟ ಕಾಂಗ್ರೆಸ್ ಅಭ್ಯರ್ಥಿ

ಮತದಾನ ಮಾಡುವ ಒಂದು ದಿನ ಮೊದಲು ಸಕ್ಲೇಚಾ ಬಾಬಾರವರ ಆಶೀರ್ವಾದ ಪಡೆಯಲು ಹೋದಾಗ ಒಂದು ಜೊತೆ ಚಪ್ಪಲಿಯನ್ನು ತೆಗೆದುಕೊಂಡು ಹೋಗಿದ್ದರು. ಫಕೀರ ಬಾಬಾ ಅವರ ಚಪ್ಪಲಿಯನ್ನು ಸ್ವೀಕರಿಸಿ ಚಪ್ಪಲಿಯಿಂದ ಹೊಡೆದು ಆಶೀರ್ವದಿಸಿದರು. ಬಾಬಾ ನನ್ನಿಂದ ಎಲ್ಲಾ ದುಷ್ಟ ಛಾಯೆಗಳನ್ನು ತೆಗೆದುಹಾಕಿದ್ದಾರೆ ಎಂದು ಸಕ್ಲೇಚಾ ಹೇಳಿಕೊಂಡಿದ್ದಾರೆ.

ಸಕ್ಲೇಚಾ ಕಾಂಗ್ರೆಸ್ ಅಭ್ಯರ್ಥಿ

ಬಿಜೆಪಿಯ ಕೋಟ್ಯಾಧಿಪತಿ ಶಾಸಕ ಚೇತನ್ ಕಶ್ಯಪ್ ವಿರುದ್ಧ ಸಕ್ಲೇಚಾ ಸ್ಪರ್ಧಿಸುತ್ತಿದ್ದಾರೆ. 2008 ರಲ್ಲಿ ಸಕ್ಲೇಚಾ ಅವರು ಸ್ವತಂತ್ರವಾಗಿ ಸ್ಪರ್ಧಿಸಿ ರತ್ಲಾಮ್ ವಿಧಾನಸಭಾ ಸ್ಥಾನವನ್ನು ಗೆದ್ದರು. ಆದರೆ 2013 ರಲ್ಲಿ ಅವರು ಕಶ್ಯಪ್ ವಿರುದ್ಧ ಸೋತು ಮೂರನೇ ಸ್ಥಾನ ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+