ಕಾಂಗ್ರೆಸ್ ನನ್ನ ರಕ್ತಕ್ಕಾಗಿ ಊಳಿಡುತ್ತಿದೆ: ಮಧ್ಯಪ್ರದೇಶ ಮುಖ್ಯಮಂತ್ರಿ

ಭೋಪಾಲ್, ಸೆಪ್ಟೆಂಬರ್ 3: ಕಾಂಗ್ರೆಸ್ ಪಕ್ಷವು ತಮ್ಮ ರಕ್ತಕ್ಕಾಗಿ ಊಳಿಡುತ್ತಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಾಗ್ದಾಳಿ ನಡೆಸಿದ್ದಾರೆ.

ಅವರ ವಾಹನದ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಲ್ಲಿನ ದಾಳಿ ನಡೆಸಿದ ಮರುದಿನ ಅವರು ಈ ಹೇಳಿಕೆ ನೀಡಿದ್ದಾರೆ. ಇಂತಹ ದಾಳಿ ಹಿಂದೆಂದೂ ನಡೆದಿರಲಿಲ್ಲ ಎಂದಿದ್ದಾರೆ.

ಇದು ಕಾಂಗ್ರೆಸ್ಸಿಗರ ದುಷ್ಕೃತ್ಯ ಎಂದು ಚೌಹಾಣ್ ಆರೋಪಿಸಿದ್ದಾರೆ.

Congress baying for my blood: Madya Pradesh CM Shivraj singh chouhan accused

'ಕಾಂಗ್ರೆಸ್ ಸ್ಪಷ್ಟವಾಗಿ ನನ್ನ ರಕ್ತಕ್ಕೆ ಊಳಿಡುತ್ತಿದೆ. ಇಂತಹ ದಾಳಿಗಳು ಮಧ್ಯಪ್ರದೇಶದಲ್ಲಿ ಹಿಂದೆಂದೂ ಕೇಳಿರಲಿಲ್ಲ. ಅಭಿಪ್ರಾಯಭೇದಗಳು, ಸೈದ್ಧಾಂತಿಕ ವಿರೋಧಗಳು ಇರಬಹುದು. ಆದರೆ, ಇಂತಹ ಘಟನೆ ಸಂಭವಿಸಿರಲಿಲ್ಲ.

ಕಾಂಗ್ರೆಸ್‌ಅನ್ನು ಯಾವ ದಿಕ್ಕಿನೆಡೆಗೆ ಕೊಂಡೊಯ್ಯಲು ನೀವು ಬಯಸುತ್ತಿದ್ದೀರಿ ಎಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನು ಪ್ರಶ್ನಿಸಲು ಬಯಸುತ್ತೇನೆ. ಅವರ ಮುಖಂಡರು ಮತ್ತು ಕಾರ್ಯಕರ್ತರು ಮಾಡುತ್ತಿರುವುದು ಅವರಿಗೆ ಸರಿ ಎನಿಸುತ್ತದೆಯೇ?' ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಸಿಧಿ ಜಿಲ್ಲೆಯಲ್ಲಿ ಭಾನುವಾರ ಜನ ಆಶೀರ್ವಾದ ಯಾತ್ರೆ ನಡೆಸುತ್ತಿದ್ದ ಚೌಹಾಣ್ ಅವರ ವಾಹನದ ಮೇಲೆ ಕೆಲವರು ಕಲ್ಲು ಎಸೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+