ಹಸಿಬಿಸಿ ಕಾಂಡೋಮ್ ಜಾಹೀರಾತು ಪ್ರಸಾರ: ರೊಚ್ಚಿಗೆದ್ದ ಮಹಿಳೆ ವಿಡಿಯೋ ವೈರಲ್ !
Condom Ad: ಭಾರತದಲ್ಲಿ ಮೊದಲಿನಿಂದಲೂ ಕಾಂಡೋಮ್ ಜಾಹೀರಾತಿನ ಬಗ್ಗೆ ಹಾಗೂ ಅದನ್ನು ಪ್ರಸಾರ ಮಾಡುವ ಸಮಯದ ಬಗ್ಗೆ ಆಕ್ಷೇಪಣೆಗಳು ಕೇಳಿ ಬರುತ್ತಿವೆ. ಇದೀಗ ಭಾರತ ಮತ್ತು ಪಾಕಿಸ್ತಾನದ ಏಷ್ಯಾ ಕಪ್ ಫೈನಲ್ ಮ್ಯಾಚ್‌ನಲ್ಲಿ ಪ್ರಮುಖ ಕಾಂಡೋಮ್ ಕಂಪನಿಯೊಂದರ ಜಾಹೀರಾತು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇಷ್ಟೊಂದು ಹಸಿಬಿಸಿ ಕಾಂಡೋಮ್ ವಿಡಿಯೋವನ್ನು ಮ್ಯಾಚ್ ಸಮಯದಲ್ಲಿ ಯಾಕೆ ಪ್ರಸಾರ ಮಾಡಿದರು ಎಂದು ಮಹಿಳೆಯೊಬ್ಬರು ಪ್ರಶ್ನೆ ಮಾಡಿದ್ದು. ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಕಾಂಡೋಮ್ ವಿಡಿಯೋ & ಸುದ್ದಿ ನೋಡೋಣ.
ಸೆಪ್ಟೆಂಬರ್ 28ರಂದು ದುಬೈನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಏಷ್ಯಾ ಕಪ್ 2025 ರ ಫೈನಲ್ ಅನ್ನು ಗೆದ್ದ ನಂತರ ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಲವು ವಿಡಿಯೋಗಳು ವೈರಲ್ ಆಗಿವೆ. ಸಹಜವಾಗಿಯೇ ಭಾರತದ ಸಂಭ್ರಮಾಚರಣೆ, ಪಾಕಿಸ್ತಾನದ ಕ್ರಿಕೆಟರಿಗೆ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಚಮಕ್ ಕೊಟ್ಟಿದ್ದು, ರಿವೆಂಜ್ ವಿಡಿಯೋ ಮಾಡಿದ್ದೆಲ್ಲವೂ ವೈರಲ್ ಆಗಿದೆ. ಇದೇ ಸಂದರ್ಭದಲ್ಲಿ ಕಾಂಡೋಮ್ ಜಾಹೀರಾತಿನ ಬಗ್ಗೆಯೂ ಭಾರೀ ಚರ್ಚೆ ನಡೆದಿದ್ದು, ಮಹಿಳೆಯೊಬ್ಬರು ಮಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಕ್ರಿಕೆಟ್ ಪಂದ್ಯಗಳ ಸಮಯದಲ್ಲಿ ಪ್ರಸಾರವಾದ ಕಾಂಡೋಮ್ ಜಾಹೀರಾತಿನ ಬಗ್ಗೆ ಇಶಿನ್ನಾ (ishinna_b_sadana) ಎನ್ನುವವರು ಕಳವಳ ವ್ಯಕ್ತಪಡಿಸಿದ್ದು, ಈ ವಿಡಿಯೋದಲ್ಲಿ ಅವರು ಕಾಂಡೋಮ್ ವಿಚಾರವು ಅಥವಾ ಜಾಹೀರಾತು ಮಕ್ಕಳು ನೋಡುವುದಕ್ಕೆ ಸೂಕ್ತವಲ್ಲ ಎಂದು ಅಭಿಪ್ರಾಯ
ಪಟ್ಟಿದ್ದಾರೆ. ಈ ಕ್ರಿಕೆಟ್ ಮ್ಯಾಚ್‌ನ ಸಂದರ್ಭದಲ್ಲಿ ಅನೇಕ ಮಕ್ಕಳು ಜಾಹೀರಾತನ್ನು ನೋಡಿದ್ದಾರೆ. ಇದು ಮಕ್ಕಳು ಮತ್ತು ಯುವಕರ ಲೈಂಗಿಕ ವಿಷಯಕ್ಕೆ ಬೇಗನೆ ಒಡ್ಡಿಕೊಳ್ಳುವ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಹಸಿಬಿಸಿ ಕಾಂಡೋಮ್ ಜಾಹೀರಾತಿನ ವಿಡಿಯೋವನ್ನು ಹಂಚಿಕೊಂಡಿರುವ ಅವರು, ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದ ಎಲ್ಲಾ ಮಕ್ಕಳು ಈ ಜಾಹೀರಾತನ್ನು ವೀಕ್ಷಿಸಿದರು. ಭಾರತವು ಏಷ್ಯಾ ಕಪ್ ಗೆದ್ದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಆದರೆ ಈ ಜಾಹೀರಾತು ನಿರಂತರವಾಗಿ ಕಾಣಿಸಿಕೊಳ್ಳುತ್ತಲೇ ಇತ್ತು. ನಾನು ಆಶ್ಚರ್ಯ ಪಡುತ್ತಿದ್ದೆ, ಅನೇಕ ಪೋಷಕರು ತಮ್ಮ ಕುಟುಂಬದೊಂದಿಗೆ ಇದನ್ನು ವೀಕ್ಷಿಸುತ್ತಿದ್ದಾರೆ ಎಂದಿದ್ದಾರೆ.
ಇನ್ನು ಈ ರೀತಿ ಭಾರತದಲ್ಲಿ ಮಾತ್ರ ಆಗಲು ಸಾಧ್ಯ. ಯುರೋಪಿಯನ್ ದೇಶಗಳಲ್ಲಿ ಈ ರೀತಿಯ ಜಾಹೀರಾತುಗಳ ಪ್ರಸಾರಕ್ಕೆ ಬೇರೆಯದ್ದೇ ಮಾನದಂಡವನ್ನು ಅನುಸರಿಸಲಾಗುತ್ತದೆ. ಈ ರೀತಿಯ ಜಾಹೀರಾತುಗಳನ್ನು ಆ ದೇಶಗಳಲ್ಲಿ ರಾತ್ರಿ 11 ಗಂಟೆಯ ನಂತರ ಪ್ರಸಾರ ಮಾಡಲು ಮಾತ್ರ ಅವಕಾಶವಿದೆ ಎಂದು ಅವರು ಹೇಳಿದ್ದಾರೆ. ನಾವು ಯುವಕರಿಗೆ ಮೌಲ್ಯ ಕಲಿಸುತ್ತಿಲ್ಲ ಅಥವಾ ಇಂದಿನ ಯುವ ಸಮೂಹದಲ್ಲಿ ಮೌಲ್ಯ ಕಡಿಮೆ ಆಗುತ್ತಿದೆ ಎನ್ನುವುದಕ್ಕಿಂತ ಮೊದಲು ಈ ರೀತಿಯ ವಿಷಯಗಳನ್ನು ಗಮನಹರಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications