Coimbatore-Bengaluru Vande Bharat: ಕೊಯಮತ್ತೂರು-ಬೆಂಗಳೂರು ವಂದೇ ಭಾರತ್ ಪ್ರಯಾಣಿಕರಿಗೆ ಸಿಹಿಸುದ್ದಿ
ಚೆನ್ನೈ, ಫೆಬ್ರವರಿ.23: ಕೆಲವೊಂದು ರೈಲುಗಳ ವೇಳಾಪಟ್ಟಿಯಿಂದ ಜನರಿಗೆ ಉಪಯೋಗ ಆಗುವ ಬದಲು ತಿಂದರೆಯೇ ಹೆಚ್ಚಾಗುತ್ತದೆ. ಸಮಯ ಸರಿಯಾಗಿರದೆ, ರೈಲ್ವೆ ನಿಲ್ದಾಣಕ್ಕೆ ಹೋಗಲು ಆಗದೆ ಪರದಾಡುವ ಪ್ರಯಾಣಿಕರಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಹಲವು ಬಾರಿ ರೈಲ್ವೆ ವೇಳಾಪಟ್ಟಿಯನ್ನು ಬದಲಾಯಿಸಲಾಗುತ್ತದೆ.
ಸದ್ಯ ಕೊಯಮತ್ತೂರು - ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸಮಯವನ್ನು ರೈಲ್ವೆ ಮಂಡಳಿಯು ಪರಿಷ್ಕರಿಸಿದೆ. ಬೆಳಗ್ಗೆ 5 ಗಂಟೆಗೆ ಹೊರಡುತ್ತಿದ್ದ ಈ ಎಕ್ಸ್‌ಪ್ರೆಸ್‌ಗೆ ತಲುಪಲು ಜನ ಕಷ್ಟಪಡುತ್ತಿದ್ದಾರೆ. ಹೀಗಾಗಿಯೇ ಈ ಸಮಯದಿಂದ ಅನಾನುಕೂಲತೆಗೆ ಒಳಗಾಗಿದ್ದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

ಡಿಸೆಂಬರ್ 30, 2023 ರಿಂದ ಕೊಯಮತ್ತೂರು - ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡುತ್ತಿದೆ. ಅ ಸಮಯದಿಂದಲೂ ಪ್ರಯಾಣಿಕರ ಸಂಘಗಳು ಮತ್ತು ಜನಪ್ರತಿನಿಧಿಗಳು ರೈಲ್ವೆ ಸಚಿವಾಲಯಕ್ಕೆ ಪದೇ ಪದೇ ಮನವಿ ಮಾಡಿದ ಹಿನ್ನೆಲೆಯಲ್ಲಿ ರೈಲ್ವೇ ನಿರ್ಗಮನ ಸಮಯವನ್ನು 5 ಗಂಟೆಯ ಬದಲು ಬೆಳಗ್ಗೆ 7.25 ಗಂಟೆಗೆ ಬದಲಾಯಿಸಲಾಗಿದೆ.
ಪರಿಷ್ಕೃತ ಸಮಯದ ಪ್ರಕಾರ, ಕೊಯಮತ್ತೂರು - ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಧ್ಯಾಹ್ನ 1.50 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ವಾಪಸ್ ರೈಲು ಮಧ್ಯಾಹ್ನ 2.20 ಕ್ಕೆ ಇಲ್ಲಿಂದ ಹೊರಡಲಿದ್ದು, ರಾತ್ರಿ 8.45ಕ್ಕೆ ಕೊಯಮತ್ತೂರು ಜಂಕ್ಷನ್ ತಲುಪುತ್ತದೆ. ಕೊಯಮತ್ತೂರು - ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಗುರುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ನೈಋತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆಗೆ ಬರೆದ ಪತ್ರದಲ್ಲಿ, ರೈಲ್ವೆ ಮಂಡಳಿಯು (20641/20642) ಬೆಂಗಳೂರು ಕಂಟೋನ್ಮೆಂಟ್-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸಮಯವನ್ನು ಪರಿಷ್ಕರಿಸುವ ಪ್ರಸ್ತಾವನೆಯನ್ನು ರೈಲ್ವೆ ಸಚಿವಾಲಯ ಅನುಮೋದಿಸಿದೆ ಎಂದು ಹೇಳಿದೆ. ಜೊತೆಗೆ ರೈಲ್ವೇ ಸಮಯ ಬದಲಾವಣೆಗೆ ವ್ಯಾಪಕ ಪ್ರಚಾರ ನೀಡುವಂತೆ ನಿರ್ದೇಶನ ನೀಡಿದೆ. ಜೊತೆಗೆ "ಸಮಯದ ಬದಲಾವಣೆಯನ್ನು ಆರಂಭಿಕ ಅನುಕೂಲಕರ ದಿನಾಂಕದಿಂದ ಜಾರಿಗೆ ತರಬಹುದು" ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮುಂಜಾನೆ 5 ಗಂಟೆಗೆ ಕೊಯಮತ್ತೂರು - ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಹೊರಡುವ ಸಮಯವು ವಿಶೇಷವಾಗಿ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿತ್ತು. ಹಾಗೆಯೇ ಸಾರ್ವಜನಿಕ ಸಾರಿಗೆ ಸೇವೆಗಳ ಅನುಪಸ್ಥಿತಿಯಲ್ಲಿ ಅಥವಾ ಕೊರತೆಯ ಸಂದರ್ಭದಲ್ಲಿ ಪ್ರಯಾಣಿಕರು ತಮ್ಮ ಮನೆಗಳಿಂದ ಸ್ವಂತ ಅಥವಾ ಬಾಡಿಗೆ ವಾಹನಗಳಲ್ಲಿ ರೈಲ್ವೇ ನಿಲ್ದಾಣವನ್ನು ತಲುಪಬೇಕಿತ್ತು.
ಕೊಯಮತ್ತೂರಿನಿಂದ ಬೆಳಗ್ಗೆ 7.30ಕ್ಕೆ ಹೊರಡುವ ರೈಲು ಸಾಕಷ್ಟು ಅನುಕೂಲಕರವಾಗಿರುತ್ತದೆ ಎಂದು ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಮಾಜಿ ಸದಸ್ಯ ಮತ್ತು ಕೊಂಗು ಗ್ಲೋಬಲ್ ಫೋರಂನ ನಿರ್ದೇಶಕ ಜೆ.ಸತೀಶ್ ಹೇಳಿದ್ದಾರೆ. ಜೊತೆಗೆ, ರೈಲ್ವೆಯು ಎರಡೂ ದಿಕ್ಕುಗಳಲ್ಲಿ ಕನಿಷ್ಠ ಅರ್ಧ ಘಂಟೆಯ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ವ್ಯಾಪ್ತಿಯನ್ನು ನೋಡಬಹುದು ಎಂದು ಶ್ರೀ ಸತೀಶ್ ಒತ್ತಿ ಹೇಳಿದ್ದಾರೆ.











Click it and Unblock the Notifications