ದೆಹಲಿಯಲ್ಲಿ ಎಚ್ಡಿಕೆ, ದೇವೇಗೌಡರಿಂದ ರಾಜನಾಥ್ ಸಿಂಗ್ ಭೇಟಿ
Recommended Video

ದೆಹಲಿ, ಅಕ್ಟೋಬರ್ 05: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ದೆಹಲಿಯಲ್ಲಿಂದು(ಅ.05) ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದರು.
ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಭೀಕರ ಪ್ರವಾಹಕ್ಕೆ ತುತ್ತಾದ ಕರ್ನಾಟಕದ ಕೆಲವು ಜಿಲ್ಲೆಗಳ ದುರಸ್ಥಿ ಕಾರ್ಯಕ್ಕೆ ಕೇಂದ್ರ ಸರ್ಕಾರ ನೆರವು ಬೇಕೆಂದು ಈ ಸಂದರ್ಭದಲ್ಲಿ ಉಭಯ ನಾಯಕರು ಮನವಿ ಮಾಡಿಕೊಂಡರು.
ಇಂದು ಮುಖ್ಯಮಂತ್ರಿಗಳಾದ @hd_kumaraswamy ಅವರೊಂದಿಗೆ ಗೃಹ ಸಚಿವ @rajnathsingh ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಅತೀವೃಷ್ಟಿಯಿಂದ ಹಾನಿಯಾಗಿರುವ ರಾಜ್ಯದ ಜಿಲ್ಲೆಗಳಿಗೆ ತುರ್ತು ನೆರವು ನೀಡುವ ಕುರಿತು ಮನವಿ ಸಲ್ಲಿಸಿದೆವು. pic.twitter.com/BRppwgnjYQ
— H D Devegowda (@H_D_Devegowda) October 5, 2018
ಕೊಡಗಿನಲ್ಲಿ ಆಗಸ್ಟ್ ಎರಡನೇ ವಾರದಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಪ್ರವಾಹ ತಲೆದೂರಿತ್ತು. ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನ ಮೃತರಾಗಿದ್ದರೆ, ಸಾವಿರಾರು ಕೋಟಿ ಮೌಲ್ಯದ ಜಮೀನು, ಆಸ್ತಿ ನಷ್ಟವಾಗಿದೆ.

ಸದ್ಯಕ್ಕೆ ಸಂಚಾರಕ್ಕೆ ರಸ್ತೆಗಳೂ ಇಲ್ಲದೆ ಜನ ಪರದಾಡುವಂತಾಗಿದೆ. 1500 ಕಿ.ಮೀ. ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದೆ. 150 ಕಿ.ಮೀ. ರಸ್ತೆಯನ್ನು ಪರ್ಯಾಯ ಮಾರ್ಗದಲ್ಲಿ ಹೊಸದಾಗಿ ನಿರ್ಮಿಸಬೇಕಿದೆ. 58 ಸೇತುವೆ, 258 ಕಟ್ಟಡಗಳಿಗೆ ಹಾನಿಯಾಗಿದೆ. ತನ್ನಿಮಿತ್ತ ಕೇಂದ್ರ ಸರ್ಕಾರದ ನೆರವನ್ನು ರಾಜ್ಯ ಸರ್ಕಾರ ಬಯಸಿದೆ.












Click it and Unblock the Notifications