ಆನ್‌ಲೈನ್ ಡ್ರೈವಿಂಗ್ ಲೈಸನ್ಸ್ ವೆಬ್‌ಸೈಟ್‌ಗೆ ಸಿಎಂ ಮಾನ್ ಚಾಲನೆ
ಚಂಡಿಗಢ ಜೂ. 15: ಕಲಿಕಾ ವಾಹನ ಚಾಲಕರಿಗೆ ಚಾಲನೆ ಪರವಾನಿಗೆ ಪಡೆಯಲು ಸುಲಭವಾಗುವ ನಿಟ್ಟಿನಲ್ಲಿ ಪಂಜಾಬ್ ರಾಜ್ಯದಲ್ಲಿ ಹೊಸ ವೆಬ್ ಪೋರ್ಟಲ್ ಆರಂಭಿಸಲಾಗಿದೆ. ನೂತನ ಆನ್ ಲೈನ್ ಡ್ರೈವಿಂಗ್ ಲೈಸನ್ಸ್ ಸೌಲಭ್ಯ ಒದಗಿಸುವ ವೆಬ್ ಪೋರ್ಟಲ್‌ಗೆ ಮುಖ್ಯಮಂತ್ರಿ ಭಗವಂತ್ ಮಾನ್ ಚಾಲನೆ ನೀಡಿದ್ದಾರೆ. ಇದರಿಂದಾಗಿ ಹೊಸದಾಗಿ ಲೈಸನ್ಸ್ ಪಡೆಯಲು ಮುಂದಾಗುವ ಅರ್ಹ, ಆಸಕ್ತರು ಮನೆಯಿಂದಲೇ ಆನ್ ಲೈನ್ ಮೂಲಕ ಡ್ರೈವಿಂಗ್ ಲೆಸೆನ್ಸ್ (ಡಿಎಲ್) ಪಡೆಯಲು ಸಾಧ್ಯವಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಭಗವಂತ್ ಮಾನ್, ''ಪ್ರಸ್ತುತ ಈ ನೂತನ ವೆಬ್‌ಸೈಟ್‌ನ ಸಹಾಯದಿಂದ ನೀವು ಮನೆಯಲ್ಲೆ ಕೂತು ವಾಹನಗಳ ಪರವಾನಿಗೆ ಪಡೆಯಬಹುದಾಗಿದೆ. ಇದರಿಂದ ನಿಮ್ಮ ಸಮಯ, ಶಕ್ತಿ ಸಾಕಷ್ಟು ಉಳಿತಾಯವಾಗಲಿದೆ. ಮನೆಯಲ್ಲೇ ಕುಳಿತು ಲ್ಯಾಪ್ ಟಾಪ್, ಮೊಬೈಲ್ ಇಲ್ಲವೇ ಟ್ಯಾಬ್ಲೆಟ್‌ನಲ್ಲಿಒಂದೇ ಒಂದು ಕ್ಲಿಕ್ ಮೂಲಕ ಆರ್ ಟಿ ಓ ಸೌಲಭ್ಯ ಪಡೆಯಬಹುದಾಗಿದೆ'' ಎಂದರು.
ಅಕ್ರಮಕ್ಕೆ ಕಡಿವಾಣ:
ಈ ರೀತಿ ಸರ್ಕಾರದ ಸೌಲಭ್ಯಗಳು ಮನೆಬಾಗಿಲಿಗೆ ತಲುಪಿಸುವುದರಿಂದ ಸಾರ್ವಜನಿಕರಿಗೆ ಹೆಚ್ಚು ನೆರವಾಗುತ್ತದೆ. ಅಲ್ಲದೆ ಸಮಯ, ಶಕ್ತಿ ಉಳಿತಾಯವಾಗುವ ಜತೆಗೆ ಭ್ರಷ್ಟಚಾರಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಈ ರೀತಿ ಸರ್ಕಾರದ ವಿವಿಧ ಇಲಾಖೆಗಳ ಎಲ್ಲ ಸೌಲಭ್ಯಗಳು ಜನರಿಗೆ ತಾವಿರುವಲ್ಲಿಯೇ ಸುಲಭವಾಗಿ ದೊರೆತರೆ ಅಕ್ರಮಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಾಹನ ಚಾಲನೆ ಕಲಿಕಾ ಹಂತದವರು, ಹೊಸದಾಗಿ ಪರವಾನಿಗೆ ಪಡೆಯಲಿಚ್ಛಿಸುವವರು ಆರ್ ಟಿ ಓ ಕಚೇರಿಗೆ ಹೋಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಈ ಹೊಸ ಪೋರ್ಟಲ್ (ಸಾರತಿ ಟಾಟ್ ಪರಿವಾಹನ್) ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಮನೆಯಲ್ಲಿ ಕುಳಿತು ಪಡೆಯಬಹದು. ಒಂದು ವೇಳೆ ಪೋರ್ಟಲ್‌ನಲ್ಲಿ ಅಗತ್ಯ ಮಾಹಿತಿ ತುಂಬುವ ವಿಚಾರದಲ್ಲಿ ಗೊಂದಲ ಉಂಟಾದರೆ ಅಭ್ಯರ್ಥಿಯು ಹತ್ತಿರ ಸುವಿಧಾ ಕಚೇರಿಗೆ ತೆರಳಿ ಅಲ್ಲಿ ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಸೇರಿದಂತೆ ಇತರ ದಾಖಲೆ ಮೂಲಕ ಪರವಾನಿಗೆಗೆ ಆನ್‌ಲೈನ್ ಮೂಲಕ ಅಜಿ ಸಲ್ಲಿಸಬಹುದು ಎಂದರು.
5.21 ಲಕ್ಷ ಅರ್ಜಿದಾರರಿಗೆ ಡಿಎಲ್ ವಿತರಣೆ
Recommended Video
ಅರ್ಜಿದಾರರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಒಂದು ಬಾರಿ ಕಲಿಕಾ ಚಾಲನೆ ಪರೀಕ್ಷೆ ಸಂದರ್ಭದಲ್ಲಿ ಆರ್‌ಟಿಓ ಕಚೇರಿಗೆ ತೆರಳಬಹುದು. ಈ ಎಲ್ಲ ಪ್ರಕ್ರಿಯೆಗಳಿಂದ ಪರವಾನಿಗೆ ಪಡೆಯುವವರೆಗೂ ಪದೇ ಪದೆ ಆರ್ ಟಿ ಓ ಕಚೇರಿಗೆ ಅಲೆಯುವುದು ತಪ್ಪಲಿದೆ. ಸಮಯದ ಹಣವು ಖರ್ಚಾಗುವುದು ತಪ್ಪುತ್ತದೆ. ರಾಜ್ಯವು ಕಳೆದ ವರ್ಷ 2021-2022 ರ ಅವಧಿಯಲ್ಲಿ 5.21 ಲಕ್ಷ ಅರ್ಜಿದಾರರಿಗೆ ವಾಹನ ಚಾಲನಾ ಪರವಾನಿಗೆ ನೀಡಿದೆ ಎಂದು ಮಾನ್ ವಿವರಿಸಿದರು.












Click it and Unblock the Notifications