ಗೂಢಚಾರರ ಜಾಲ: ಎಸ್ಪಿ ಮುಖಂಡನ ನಿಕಟವರ್ತಿ ಬಂಧನ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 29: ಪಾಕಿಸ್ತಾನದ ಹೈ ಕಮಿಷನ್ ಕಚೇರಿ ಅಧಿಕಾರಿ ಬಂಧನ ವಿಚಾರಣೆ ಬಳಿಕ ಭಾರತದಲ್ಲಿ ಅಡಗಿರುವ ಪಾಕಿಸ್ತಾನದ ಗೂಢಚಾರರ ಜಾಲವನ್ನು ಭೇದಿಸುವ ಕಾರ್ಯಾಚರಣೆ ತೀವ್ರಗೊಂಡಿದೆ.

ಇಸ್ರೋ ಅಧಿಕಾರಿಯ ಬಗ್ಗೆ ಮಾಹಿತಿ ಸಿಕ್ಕ ಬಳಿಕ ಸಮಾಜವಾದಿ ಪಕ್ಷದ ಹಿರಿಯ ಮುಖಾಂಡ ಮುನಾವರ್ ಸಲೀಂ ಅವರ ಆಪ್ತ ಕಾರ್ಯದರ್ಶಿ ಫರಾತ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.[ಪಾಕಿಸ್ತಾನಿ ಗೂಢಚಾರಿಯಾಗಿದ್ದ ಇಸ್ರೋದ ಅಧಿಕಾರಿ]

ಉತ್ತರಪ್ರದೇಶ ಪೊಲೀಸರು ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಮುನಾವರ್ ಸಲೀಂ ಅವರ ಪಿಎ ಫಾರತ್ ಒಬ್ಬ ಪಾಕಿಸ್ತಾನದ ಸ್ಪೈ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Close aide of SP leader arrested in espionage case

ಭಾರತ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಹೊಂದಿದ್ದ ಆರೋಪಕ್ಕೆ ಗುರಿಯಾಗಿರುವ ಪಾಕಿಸ್ತಾನ ಹೈಕಮಿಷನರ್ ಕಚೇರಿ ಬೇಹುಗಾರಿಕೆಯ ವ್ಯವಸ್ಥಿತ ವ್ಯೂಹದ ಕಬಂಧ ಬಾಹುಗಳು ದೇಶದ ಹಲವೆಡೆ ವಿಸ್ತರಣೆಯಾಗಿರುವುದು ದೃಢಪಟ್ಟಿದೆ.

ಭಾರತದ ರಕ್ಷಣಾ ದಾಖಲೆಗಳನ್ನು ಹೊಂದಿದ್ದ ಪಾಕಿಸ್ತಾನ ಹೈಕಮಿಷನ್ ಕಚೇರಿಯ ಹಿರಿಯ ಅಧಿಕಾರಿ ಮೆಹಮೂದ್ ಅಖ್ತರ್ ಜೊತೆ ನಿಕಟ ಸಂಪರ್ಕ ಹೊಂದಿರುವ ಇತರ ಬೇಹುಗಾರರಿಗಾಗಿ ದೆಹಲಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದ, ವಿವಿಧ ರಾಜ್ಯಗಳ ಜೊತೆ ಸಂಪರ್ಕದಲ್ಲಿದ್ದಾರೆ.

ಉತ್ತರ ಪ್ರದೇಶದ ಪೊಲೀಸರು ಕಳೆದ ರಾತ್ರಿ ಲಕ್ನೋದಲ್ಲಿ ಪಾಕಿಸ್ತಾನ ಗೂಢಚಾರ ಎಂಬ ಆರೋಪದ ಮೇಲೆ ಫರಾತ್ ನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇದೇ ವೇಳೆ ಭಾರತದ ರಕ್ಷಣಾ ದಾಖಲೆಗಳನ್ನು ಹೊಂದಿದ್ದ ಪಾಕಿಸ್ತಾನ ಹೈಕಮಿಷನ್ ಕಚೇರಿಯ ಹಿರಿಯ ಅಧಿಕಾರಿ ಮೆಹಮೂದ್ ಅಖ್ತರ್ ಜೊತೆ ನಿಕಟ ಸಂಪರ್ಕ ಹೊಂದಿರುವ ಇತರ ಬೇಹುಗಾರರಿಗಾಗಿ ದೆಹಲಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದ, ವಿವಿಧ ರಾಜ್ಯಗಳ ಜೊತೆ ಸಂಪರ್ಕದಲ್ಲಿದ್ದಾರೆ.

ಈಗಾಗಲೇ ಈ ಗೂಢಚಾರಿಕೆ ಪ್ರಕರಣದಲ್ಲಿ ರಾಜಸ್ಥಾನದಲ್ಲಿ ಮೌಲಾನಾ ರಂಜಾನ್ ಮತ್ತು ಸುಭಾಷ್ ಜಹಂಗೀರ್ ಎಂಬುವವರನ್ನು ಬಂಧಿಸಲಾಗಿದೆ. ಜೋಧ್ ಪುರದಲ್ಲಿ ವೀಸಾ ಏಜೆಂಟ್ ಶೋಯಿಬ್‍ನನ್ನು ಸೆರೆ ಹಿಡಿಯಲಾಗಿದೆ. ಇಸ್ರೋ ಸಂಸ್ಥೆಯ ಅಧಿಕಾರಿಯೊಬ್ಬರ ಮೇಲೆ ಶಂಕೆ ವ್ಯಕ್ತವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Arrests in connection with the espionage racket being run by a staffer in the Pakistan High Commission continues. Farhat, said to be a close aide of Samajwadi Party leader Munawwar Saleem, was arrested by the Delhi Crime Branch based on the confessions made by Akthar.
Please Wait while comments are loading...