CJP: ಮತ್ತೊಂದು ಹೊಸ ಘೋಷಣೆ ಮಾಡಿದ ಸಿಜೆಪಿ

CJP: ನೀಟ್ ಪರೀಕ್ಷೆ ಅಕ್ರಮ ಪ್ರಕರಣ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ವೇಳೆ ವಿದ್ಯಾರ್ಥಿಗಳ ಪರ ನಿಂತು ಪ್ರತಿಭಟನೆ ನಡೆಸಿದ್ಧ ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ಇದೀಗ ಮತ್ತೊಂದು ನಿರ್ಧಾರಕ್ಕೆ ಮುಂದಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ದೇಶಾದ್ಯಂತ ಸಾರ್ವಜನಿಕರನ್ನು ನೇರವಾಗಿ ಭೇಟಿಯಾಗಿ ಅವರ ದೈನಂದಿನ ಸಮಸ್ಯೆಗಳು, ಆಕಾಂಕ್ಷೆಗಳು ಹಾಗೂ ಇಂದಿನ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳ ಕುರಿತು ಜನಾಭಿಪ್ರಾಯ ಸಂಗ್ರಹಿಸುವ ಉದ್ದೇಶದಿಂದ ಸಿಜೆಪಿ ಮುಂಬರುವ ಸೆಪ್ಟೆಂಬರ್ ತಿಂಗಳಿನಿಂದ ಬೃಹತ್ 'ಕ್ಯಾ ಬೋಲ್ತಿ ಪಬ್ಲಿಕ್' ಅಭಿಯಾನಕ್ಕೆ ಚಾಲನೆ ನೀಡಲಿದೆ ಎಂದು ಅಭಿಜೀತ್ ದೀಪ್ಕೆ ಅವರು ತಿಳಿಸಿದ್ದಾರೆ.

CJP to Launch Kya Bolti Public Campaign from September After NEET Protest Success Know details

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ನಿವಾಸದಲ್ಲಿ ಎರಡು ದಿನ ಕೋರ್ ಕಮಿಟಿ ಸಭೆ ನಡೆಸಲಾಗಿತ್ತು. ಇದಾದ ನಂತರ ಗುರುವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು, 'ನಮ್ಮ ಸಂಘಟನೆಯು ಸದ್ಯಕ್ಕೆ ಚುನಾವಣಾ ರಾಜಕೀಯಕ್ಕೆ ಧುಮುಕದೆ, ದೇಶದ ಜನರಿಗೆ ಅತ್ಯಗತ್ಯವಾಗಿರುವ ಕೆಲಸಗಳನ್ನು ಮಾಡಲಿದೆ. 'ಕ್ಯಾ ಬೋಲ್ತಿ ಪಬ್ಲಿಕ್' ಆಂದೋಲನದ ಮೂಲಕ ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಜನರು ಏನು ಯೋಚಿಸುತ್ತಿದ್ದಾರೆ ಮತ್ತು ಅವರು ದಿನನಿತ್ಯ ಎದುರಿಸುತ್ತಿರುವ ಕಷ್ಟ-ನಷ್ಟಗಳೇನು ಎಂಬುದನ್ನು ತಿಳಿಯಲಿದ್ದೇವೆ,' ಎಂದರು.

ಇತ್ತೀಚೆಗೆ ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ಫಲವಾಗಿ ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದನ್ನು ದೀಪ್ಕೆ ಉಲ್ಲೇಖಿಸಿದರು. 'ಇದು ಯುವಜನತೆ ಮತ್ತು ವಿದ್ಯಾರ್ಥಿಗಳ ದೀರ್ಘ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಗೆಲುವಾಗಿದೆ,' ಎಂದು ಅವರು ಹೇಳಿದರು.

'ಕಳೆದ 10-12 ವರ್ಷಗಳಿಂದ ದೇಶದ ಜನಸಾಮಾನ್ಯರಲ್ಲಿ ಸರ್ಕಾರ ಸೃಷ್ಟಿಸಿದ್ದ ಭಯದ ವಾತಾವರಣ ಈಗ ಕೊನೆಗೊಂಡಿದೆ. ಇಂದು ಒಬ್ಬ ಸಚಿವರ ರಾಜೀನಾಮೆ ಕೇಳಿ ಯಶಸ್ವಿಯಾಗಿರುವ ಜನರು, ನಾಳೆ ಸರ್ಕಾರದ ಇತರ ವೈಫಲ್ಯಗಳ ಮೇಲೆಯೂ ಪ್ರಶ್ನೆ ಎತ್ತಲಿದ್ದಾರೆ ಮತ್ತು ಹೊಣೆಗಾರಿಕೆ ಬಗ್ಗೆ ವಿಚಾರಿಸಲಿದ್ದಾರೆ,' ಎಂದು ಹೇಳಿದರು.

ತಮ್ಮ ಸಿದ್ಧಾಂತದ ಬಗ್ಗೆ ಮಾತನಾಡಿದ ಅವರು, 'ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧಿ ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಅವರ ವಿಕಸಿತ ಹಾಗೂ ಜಾತ್ಯತೀತ ಭಾರತದ ಕನಸಿನಂತೆ ಸಿಜೆಪಿ ಶ್ರಮಿಸಲಿದ್ದು, ಭಾರತದ ಸಂವಿಧಾನವೇ ನಮ್ಮ ಸಿದ್ಧಾಂತವಾಗಿದೆ,' ಎಂದು ಹೇಳಿದರು.

'ಇಂದು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮತ್ತು ಶಿಕ್ಷಣ ಕ್ಷೇತ್ರದ ವಿಪರೀತ ವ್ಯಾಪಾರೀಕರಣ ದೊಡ್ಡ ಸವಾಲಾಗಿ ಪರಿಣಮಿಸಿವೆ. ಶಾಲಾ-ಕಾಲೇಜುಗಳ ದುಬಾರಿ ಶುಲ್ಕಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳನ್ನು ಸಾಲದ ಸುಳಿಗೆ ಸಿಲುಕಿಸುತ್ತಿದ್ದು, ಗುಣಮಟ್ಟದ ಉಚಿತ ಹಾಗೂ ಕೈಗೆಟುಕುವ ಶಿಕ್ಷಣ ಸುಧಾರಣೆಗಾಗಿ ಮತ್ತು ಯುವಕರಿಗೆ ಉದ್ಯೋಗ ಭದ್ರತೆ ಒದಗಿಸಲು ಈ 'ಕ್ಯಾ ಬೋಲ್ತಿ ಪಬ್ಲಿಕ್' ಅಭಿಯಾನದ ಮೂಲಕ ಸರ್ಕಾರಕ್ಕೆ ಒತ್ತಡ ಹೇರಲಾಗುವುದು,' ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+