ತ್ರಿವರ್ಣ ಧ್ವಜವನ್ನು ದ್ವೇಷಿಸುವ ವ್ಯಕ್ತಿ ಪ್ರಧಾನಿ ಹುದ್ದೆಗೆ ಅರ್ಹರೇ? ರಾತ್ರಿ ಪ್ರೆಸ್ ಮೀಟ್ ಮಾಡಿ Deepke ವಾಗ್ದಾಳಿ

Abhijeet Deepke: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸ್ಥಾಪಕ ಅಭಿಜೀತ್ ದೀಪ್ಕೆ, ತಮ್ಮನ್ನು ದೆಹಲಿ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ಗುರುವಾರ (ಅಕ್ಟೋಬರ್ 16) ತಡರಾತ್ರಿ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಮ್ಮ ಮನೆಯ ಬಳಿ ಪೊಲೀಸರು ಹಾಗೂ ಇಂಟೆಲಿಜೆನ್ಸ್ ಬ್ಯೂರೋ ಸಿಬ್ಬಂದಿ ತೀವ್ರ ನಿಗಾ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ತ್ರಿವರ್ಣ ಧ್ವಜ ಹಾರಿಸುವ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಗುರುವಾರ ತಡರಾತ್ರಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೀಪ್ಕೆ, 'ನಾವು ಶುಕ್ರವಾರ ಶಾಂತಿಯುತವಾಗಿ ತೆರಳಿ ತ್ರಿವರ್ಣ ಧ್ವಜವನ್ನು (ತಿರಂಗಾ) ಹಾರಿಸಲಿದ್ದೇವೆ. ಈ ದೇಶದ ಪ್ರಜೆಯಾಗಿ ರಾಷ್ಟ್ರಧ್ವಜ ಹಾರಿಸುವುದೇ ಅಪರಾಧ ಎಂದು ಭಾವಿಸುವುದಾದರೆ, ಹಾಗೆ ಭಾವಿಸುವವರೇ ದೇಶದ ದೊಡ್ಡ ದೇಶದ್ರೋಹಿಗಳು. ತ್ರಿವರ್ಣ ಧ್ವಜ ಹಾರಿಸಲು ಜೈಲಿಗೆ ಹೋಗಬೇಕಾಗಿ ಬಂದರೂ ನಾವು ಅದಕ್ಕೆ ಸಂಪೂರ್ಣ ಸಿದ್ಧರಾಗಿದ್ದೇವೆ,' ಎಂದು ಸ್ಪಷ್ಟಪಡಿಸಿದರು.

CJP Founder Abhijeet Deepke Alleges Police Surveillance Vows to Hoist Tricolour in Delhi Viral

ಜಂಟರ್ ಮಂತರ್ ಬಂದ್ ನಿರ್ಧಾರಕ್ಕೆ ವ್ಯಂಗ್ಯ

ಪ್ರತಿಭಟನೆ ನಿಗದಿಯಾಗಿದ್ದ ಕನ್ನಾಟ್ ಪ್ಲೇಸ್‌ನ (CP) ಸೆಂಟ್ರಲ್ ಪಾರ್ಕ್ ಅನ್ನು ಅಕ್ಟೋಬರ್ 16 ಮತ್ತು 17ರಂದು ಮುಚ್ಚಲಾಗುವುದು ಎಂದು ನವದೆಹಲಿ ಪಾಲಿಕೆ ಘೋಷಿಸಿತ್ತು. ಈ ಬಗ್ಗೆ ಮಾತನಾಡಿದ ದೀಪ್ಕೆ ಅವರು, 'ನಾವು ಶುಕ್ರವಾರ 100 ಬೇರೆ ಬೇರೆ ಸ್ಥಳಗಳಲ್ಲಿ ಧ್ವಜ ಹಾರಿಸುತ್ತೇವೆ ಎಂದರೆ ಆ ಎಲ್ಲಾ 100 ಸ್ಥಳಗಳನ್ನೂ ಮುಚ್ಚುತ್ತೀರಾ? ಅಥವಾ ನರೇಂದ್ರ ಮೋದಿಯವರ ರ‍್ಯಾಲಿಯಲ್ಲಿ ಧ್ವಜ ಹಾರಿಸುತ್ತೇವೆ ಎಂದರೆ ಆ ರ‍್ಯಾಲಿಯನ್ನೇ ರದ್ದುಗೊಳಿಸುತ್ತೀರಾ? ದೇಶದ ಆಡಳಿತ ವ್ಯವಸ್ಥೆ ವಿರುದ್ಧ,' ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ಮುಖ್ಯ ಉದ್ದೇಶ ಏನು?

ಮುಖ್ಯ ಚುನಾವಣೆ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ಸಿಜೆಪಿ ಈ ಪ್ರತಿಭಟನೆಗೆ ಕರೆ ನೀಡಿದೆ. ಸಾರ್ವಜನಿಕರು ಹಾಗೂ ತಮ್ಮ ಬೆಂಬಲಿಗರು ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಒಟ್ಟುಗೂಡಿ ತ್ರಿವರ್ಣ ಧ್ವಜ ಹಾರಿಸುವಂತೆ ಮನವಿ ಮಾಡಲಾಗಿದೆ ಎಂದು ದೀಪ್ಕೆ ತಿಳಿಸಿದ್ದಾರೆ.

'ತ್ರಿವರ್ಣ ಧ್ವಜವನ್ನು ದ್ವೇಷಿಸುವ ವ್ಯಕ್ತಿ ಪ್ರಧಾನಿ ಹುದ್ದೆಗೆ ಅರ್ಹರೇ?'

ತಮ್ಮ ಸಹೋದ್ಯೋಗಿಗಳಾದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನು ಧ್ವಜ ಹಾರಿಸಿದ್ದಕ್ಕಾಗಿ ಜೈಲಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿದ ಅವರು, 'ತ್ರಿವರ್ಣ ಧ್ವಜ ಹಾರಿಸುವುದಿಲ್ಲ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಲಿ. ಧ್ವಜವನ್ನು ದ್ವೇಷಿಸುವ ವ್ಯಕ್ತಿ ಪ್ರಧಾನಿ ಹುದ್ದೆಗೆ ಅರ್ಹರೇ?,' ಎಂದು ಪ್ರಶ್ನಿಸಿದರು. ಅಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ತಮ್ಮನ್ನು ಹಿಂಬಾಲಿಸುತ್ತಿವೆ ಮತ್ತು ಇಂಟೆಲಿಜೆನ್ಸ್ ಬ್ಯೂರೋ ಸಿಬ್ಬಂದಿ ತಮ್ಮ ಮನೆಯ ವಾಚ್‌ಮನ್‌ನಿಂದ ಮಾಹಿತಿ ಪಡೆಯುತ್ತಿದ್ದಾರೆ ಎಂದು ದೀಪ್ಕೆ ಇದೇ ವೇಳೆ ಆರೋಪಿಸಿದರು.

'ನಮ್ಮ ಬೇಡಿಕೆ ಅತ್ಯಂತ ಸರಳವಾಗಿದೆ. ಸಹೋದ್ಯೋಗಿ ಆಯುಕ್ತರ ಮಾತು ಕೇಳದ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಿ, ಸ್ವತಂತ್ರ ಹಾಗೂ ನಿಷ್ಪಕ್ಷಪಾತವಾಗಿ ಹೊಸ ಚುನಾವಣೆ ಆಯುಕ್ತರನ್ನು ನೇಮಿಸಿ. ಇದು ಅಪರಾಧವೇ? ನಾವು ಸರ್ಕಾರ ಬದಲಾಯಿಸಿ ಎಂದು ಕೇಳುತ್ತಿಲ್ಲ. ದೇಶದಲ್ಲಿ ಪ್ರಸ್ತುತ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಆದರೆ ತಮ್ಮ ಹೆಸರು ಹಾಳಾಗುತ್ತದೆ ಎಂಬ ಭಯದಿಂದ ಪ್ರಧಾನಿ ನರೇಂದ್ರ ಮೋದಿ ಇದನ್ನು ಅಧಿಕೃತವಾಗಿ ಘೋಷಿಸುತ್ತಿಲ್ಲ,' ಎಂದು ಅಭಿಜೀತ್ ದೀಪ್ಕೆ ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಹೇಳುವುದಾದರೆ, ದೀಪ್ಕೆ ಅವರು ಯಾರೂ ಏನೇ ಅಂದುಕೊಳ್ಳಲು ತ್ರಿವರ್ಣ ಧ್ವಜ ಹಾರಿಸಲು ನಮಗೆ ಹಕ್ಕಿದೆ. ಇದನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ ಹೇಳುವ ಮೂಲಕ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+