ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವಕರು ಚೀನಾ ಗಡಿಯೊಳಗೆ ಪತ್ತೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 8: ಭಾರತ-ಚೀನಾ ಗಡಿಯಲ್ಲಿನ ಅರುಣಾಚಲಪ್ರದೇಶದಿಂದ ನಾಪತ್ತೆಯಾಗಿದ್ದ ಐವರು ಯುವಕರು ನಮ್ಮ ಗಡಿಯೊಳಗೆ ಪತ್ತೆಯಾಗಿದ್ದಾರೆ ಎಂದು ಚೀನಾ ಹೇಳಿದೆ. ಭಾರತೀಯ ಸೇನೆಯು ಕಳುಹಿಸಿದ್ದ ಹಾಟ್‌ಲೈನ್ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾದ ಪೀಪಲ್ ಲಿಬರೇಷನ್ ಆರ್ಮಿ (ಪಿಎಲ್‌ಎ), ಕಣ್ಮರೆಯಾಗಿದ್ದ ಐವರು ಭಾರತೀಯರು ತಮ್ಮ ಭಾಗದ ಗಡಿಯೊಳಗೆ ಇದ್ದಾರೆ ಎಂಬುದನ್ನು ಒಪ್ಪಿಕೊಂಡಿದೆ.

ಭಾರತೀಯ ಸೇನೆಯು ರವಾನಿಸಿದ್ದ ಹಾಟ್‌ಲೈನ್ ಸಂದೇಶಕ್ಕೆ ಚೀನಾದ ಪಿಎಲ್‌ಎ ಪ್ರತಿಕ್ರಿಯೆ ನೀಡಿದೆ. ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಯುವಕರು ಅವರ ಭಾಗದ ಗಡಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಅವರನ್ನು ನಮ್ಮ ಅಧಿಕಾರಿಗಳಿಗೆ ಹಸ್ತಾಂತರ ಮಾಡುವ ಮುಂದಿನ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ಮತ್ತೊಂದು ಆಘಾತಕಾರಿ ಘಟನೆ: ಚೀನಾದಿಂದ ಅರುಣಾಚಲ ಪ್ರದೇಶದ ಐವರು ಭಾರತೀಯರ ಅಪಹರಣಮತ್ತೊಂದು ಆಘಾತಕಾರಿ ಘಟನೆ: ಚೀನಾದಿಂದ ಅರುಣಾಚಲ ಪ್ರದೇಶದ ಐವರು ಭಾರತೀಯರ ಅಪಹರಣ

ಅಪ್ಪರ್ ಸುಬಾನ್ಸಿರಿ ಜಿಲ್ಲೆಯ ನಾಚೋ ಪ್ರದೇಶದ ಗ್ರಾಮದ ಈ ಐವರು ಭಾರತೀಯ ಸೇನೆಯ ಕೂಲಿಗಳು ಹಾಗೂ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದರು. ಕಾಡಿನಲ್ಲಿ ಬೇಟೆಯಾಡಲು ಹೋಗಿದ್ದ ಏಳು ಜನರ ಗುಂಪಿನಲ್ಲಿ ಇದ್ದ ಈ ಮಂದಿ ನಾಪತ್ತೆಯಾಗಿದ್ದರು. ಮನೆಗೆ ಮರಳಿದ್ದ ತಂಡ ಇನ್ನಿಬ್ಬರು, ನಾಚೋದ ಉತ್ತರ ಭಾಗದ 12 ಕಿ.ಮೀ. ದೂರದ ಸೇನಾ ಕಾವಲು ವಲಯ ಸೆರಾ-7ರಿಂದ ಚೀನಾ ಪಡೆಗಳು ಉಳಿದ ಐವರನ್ನು ಅಪಹರಣ ಮಾಡಿದೆ ಎಂದು ಮಾಹಿತಿ ನೀಡಿದ್ದರು.

ಭಾರತೀಯ ಸೇನೆಯ ಸಂದೇಶ

ಭಾರತೀಯ ಸೇನೆಯ ಸಂದೇಶ

ತಾನು ಯಾರನ್ನೂ ಅಪಹರಿಸಿಲ್ಲ ಎಂದೇ ಚೀನಾ ಕೆಲವು ದಿನಗಳ ಹಿಂದೆ ಪ್ರತಿಪಾದಿಸಿತ್ತು. ಬಳಿಕ ಭಾರತೀಯ ಸೇನೆಯು ಚೀನಾ ಸೇನೆಗೆ ಸಂದೇಶ ರವಾನಿಸಿತ್ತು. ತನು ಬಾಕರ್, ಪ್ರಸಾತ್ ರಿಂಗ್ಲಿಂಗ್, ಗರು ಡಿರಿ, ಡೊಂಗ್ಟು ಎಬಿಯಾ ಮತ್ತು ಟೊಚ್ ಸಿಂಗ್‌ಕಮ್ ಎಂಬುವವರನ್ನು ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿಯಲ್ಲಿನ ಅಪ್ಪರ್ ಸುಬಾನ್ಸಿರಿ ಜಿಲ್ಲೆಯ ಸೆರಾ 7 ಪ್ರದೇಶದಿಂದ ಅಪಹರಿಸಲಾಗಿತ್ತು.

ಮಾಹಿತಿ ನೀಡಿದ್ದ ಕುಟುಂಬ

ಮಾಹಿತಿ ನೀಡಿದ್ದ ಕುಟುಂಬ

ಪ್ರಕಾಶ್ ರಿಂಗ್ಲಿಂಗ್ ಎಂಬುವವರು ತಮ್ಮ ಸಹೋದರ ಪ್ರಸಾತ್ ರಿಂಗ್ಲಿಂಗ್ ಮತ್ತು ಇತರೆ ನಾಲ್ವರು ಯುವಕರನ್ನು ಚೀನಾ ಸೈನಿಕರು ಅಪಹರಣ ಮಾಡಿದ್ದಾಗಿ ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಅವರನ್ನು ಚೀನಾ ಪಡೆಗಳಿಂದ ಬಿಡಿಸಿಕೊಂಡು ಕರೆತರಲು ಸೇನಾಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಅವರು ಮನವಿ ಮಾಡಿದ್ದರು.

ಅಪಹರಣ ನಿರಾಕರಿಸಿದ್ದ ಚೀನಾ

ಅಪಹರಣ ನಿರಾಕರಿಸಿದ್ದ ಚೀನಾ

ಅರುಣಾಚಲ ಪ್ರದೇಶದಿಂದ ಚೀನಾ ಸೇನೆಯು ಐವರನ್ನು ಅಪಹರಣ ಮಾಡಿದೆ ಎಂಬ ಆರೋಪವನ್ನು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ನಿರಾಕರಿಸಿದ್ದರು, 'ಪ್ರದೇಶದಿಂದ ಐವರು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ಪಿಎಲ್ಎಗೆ ಭಾರತೀಯ ಸೇನೆ ಕಳುಹಿಸಿರುವ ಸಂದೇಶದ ಪ್ರಶ್ನೆಯ ಕುರಿತು ನಮಗೆ ಬಿಡುಗಡೆ ಮಾಡಲು ಯಾವುದೇ ವಿವರವೇ ಇಲ್ಲ' ಎಂದಿದ್ದಾರೆ.

ಅರುಣಾಚಲ ಪ್ರದೇಶವೇ ಇಲ್ಲ

ಅರುಣಾಚಲ ಪ್ರದೇಶವೇ ಇಲ್ಲ

ಅಷ್ಟೇ ಅಲ್ಲದೆ, ಅರುಣಾಚಲ ಪ್ರದೇಶ ಎಂದು ಕರೆಯಲಾಗುವ ಜಾಗಕ್ಕೆ ಚೀನಾ ಎಂದಿಗೂ ಮಾನ್ಯತೆಯನ್ನೇ ನೀಡಿಲ್ಲ. ಅದನ್ನು ಅರುಣಾಚಲ ಪ್ರದೇಶ ಎಂದು ಚೀನಾ ಪರಿಗಣಿಸಿಲ್ಲ. ಅದು ಚೀನಾದ ದಕ್ಷಿಣ ಟಿಬೆಟ್‌ ಪ್ರದೇಶ' ಎಂದು ಝಾವೋ ಹೇಳಿದ್ದರು.

English summary
Union minister Kiren Rijiju said, China's PLA has confirmed 5 missing youths from Arunachal Pradesh were found on their side of border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X