ಭಾರತಕ್ಕೆ ಮಗ್ಗಲ ಮುಳ್ಳಾಗಿರುವ ಪಾಕಿಸ್ತಾನ ನಾಯಕರು?
ಶ್ರೀನಗರ: ಭಾರತ ಬಲಿಷ್ಠವಾಗಿ ಬೆಳೆದು ನಿಂತಿದೆ, ಕಳೆದ 75 ವರ್ಷದಿಂದ ಇಡೀ ಜಗತ್ತು ಭಾರತವನ್ನು ಕಂಡ್ರೆ ಗೌರವ ನೀಡುತ್ತಿದೆ. ಆದ್ರೆ ನಮ್ಮ ಪಕ್ಕದಲ್ಲೇ ಇರುವ ಕೆಲ ದೇಶಗಳು ಭಾರತಕ್ಕೆ ಮಗ್ಗಲ ಮುಳ್ಳಾಗಿದ್ದು, ಪಾಪಿ ಪಾಕಿಸ್ತಾನ ನಡೆಯಿಂದ ಭಾರತಕ್ಕೆ ಪದೇ ಪದೆ ಕೆಂಡದಂತಹ ಕೋಪ ಬರುತ್ತಲೇ ಇದೆ. ಈಗಲೂ ಅಂತಹದ್ದೇ ಕಿತಾಪತಿ ಮಾಡಿ ಮುಖಭಂಗ ಅನುಭವಿಸಿದೆ ಪಾಕ್.
ಇಷ್ಟು ದಿನ ಬರೀ ಗುಂಡಿನ ದಾಳಿ, ಬಾಂಬ್ ಅಟ್ಯಾಕ್‌ನಿಂದ ನಲುಗಿದ್ದ ಕಣಿವೆ ರಾಜ್ಯಕ್ಕೆ ಹೊಸ ರೂಪ ಸಿಗುತ್ತಿದೆ. ಉಗ್ರರ ಉಪಟಳದ ಕಾರಣ ನರಳಿದ್ದ ಕಾಶ್ಮೀರದಲ್ಲಿ, ಹೊಸ ಯುಗ ಆರಂಭವಾಗಿದೆ. ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆ ಇಂದಿನಿಂದ ಆರಂಭವಾಗಿದೆ. ಆದರೆ ಈ ಸಭೆಯಲ್ಲಿ ತನ್ನ ಸ್ನೇಹಿತ ರಾಷ್ಟ್ರಗಳು ಭಾಗವಹಿಸದಂತೆ ಪಾಕಿಸ್ತಾನ ಅಡ್ಡಿ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಿದ್ರೆ ಅವರೆಲ್ಲಾ ಯಾರು? ಈಗ ಪಾಕಿಸ್ತಾನದ ಮಾತನ್ನ ಏಕೆ ಕೇಳಿರಬಹುದು? ತಿಳಿಯೋಣ ಬನ್ನಿ.

ಚೀನಾ, ಸೌದಿ, ಟರ್ಕಿ ಎಸ್ಕೇಪ್!
ಪಾಪಿ ಪಾಕಿಸ್ತಾನ ಇಲ್ಲೂ ಕಿರಿಕ್ ಬಿಟ್ಟಿಲ್ಲ. ಈಗಾಗಲೇ ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಯಿಂದ ಚೀನಾ, ಸೌದಿ, ಟರ್ಕಿ ದೇಶಗಳು ಎಸ್ಕೇಪ್ ಆಗಿವೆ. ಕಾಶ್ಮೀರದಲ್ಲಿ ಈ ಸಭೆ ನಡೆಯುತ್ತಿರುವ ಕಾರಣ ನಾನು ಬರಲ್ಲ ಅಂತಾ ಚೀನಾ ಹೇಳಿದ್ದರೆ, ಟರ್ಕಿ ಕೂಡ ಪರೋಕ್ಷವಾಗಿ ಇದೇ ಮಾತನ್ನ ತಿಳಿಸಿದೆ. ಇನ್ನು ಸೌದಿ ಅರೇಬಿಯಾ ಯಾವ ರಿಯಾಕ್ಷನ್ ನೀಡದೆ ಚಕ್ಕರ್ ಹಾಕಿದೆ. ಹೀಗೆ ಪಾಕ್ ನಾಯಕರ ಮನ ಒಲಿಸಲು ಈ ರಾಷ್ಟ್ರಗಳು ಪ್ರಯತ್ನಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಆದರೆ ಭಾರತಕ್ಕೆ ಇದರಿಂದ ಯಾವುದೇ ರೀತಿ ನಷ್ಟವಿಲ್ಲ ಅನ್ನೋದು ಪಕ್ಕಾ.
ಕಣಿವೆ ರಾಜ್ಯ ಎಂದಿಗೂ ನಮ್ಮದು!
ಜಮ್ಮು & ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ 2019ರಲ್ಲಿ ಕೇಂದ್ರ ಸರ್ಕಾರ ರದ್ದುಪಡಿಸಿತು. ಆ ಬಳಿಕ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಕಾರ್ಯಕ್ರಮ ಇದು. ಚೀನಾ, ಸೌದಿ ಅರೇಬಿಯಾ & ಟರ್ಕಿ ಹೊರತುಪಡಿಸಿ ಪಾಕಿಸ್ತಾನ & ಚೀನಾ ವಿರೋಧದ ನಡುವೆಯೂ ಜಿ20ಗೆ ಒಕ್ಕೂಟದ ಬಹುತೇಕ ಎಲ್ಲಾ ದೇಶಗಳು ಸಭೆಗೆ ಹಾಜರಾಗಿವೆ. ಈ ಮೂಲಕ ಪಾಕ್ ಎಷ್ಟೇ ಪ್ರಯತ್ನಿಸಿದ್ರೂ ಭಾರತದ ಶಕ್ತಿಯನ್ನ ಜಾಗತಿಕ ಮಟ್ಟದಲ್ಲಿ ಕುಗ್ಗಿಸಲು ಆಗಿಲ್ಲ.

G20 ಒಕ್ಕೂಟದ ಸದಸ್ಯ ರಾಷ್ಟ್ರಗಳು ಇವರು!
ಜಗತ್ತಿನ ಅತ್ಯಂತ ಶಕ್ತಿಶಾಲಿ ಒಕ್ಕೂಟಗಳ ಪೈಕಿ ಜಿ20 ಗುಂಪು ಕೂಡ ಒಂದು. ಭಾರತ ಸೇರಿದಂತೆ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೊನೇಷ್ಯಾ, ಇಟಲಿ, ಜಪಾನ್, ಸೌತ್ ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಇಂಗ್ಲೆಂಡ್, ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಜಿ20 ಭಾಗವಾಗಿವೆ. ಹೀಗಾಗಿ ಇಡೀ ಜಗತ್ತಿನ ಗಮನ ಈಗ ಭಾರತದ ಮೇಲೆ ನೆಟ್ಟಿದೆ. ಈ ಪೈಕಿ ಈಗ ಚೀನಾ, ಸೌದಿ ಅರೇಬಿಯಾ ಮತ್ತು ಟರ್ಕಿ ಮಹತ್ವದ ಸಭೆಗೆ ಚಕ್ಕರ್ ಹಾಕಿವೆ.
ಅರುಣಾಚಲ ಸಭೆಗೂ ಚೀನಾ ಬಂದಿರಲಿಲ್ಲ
ಈ ಹಿಂದೆ ಅರುಣಾಚಲ ಸಭೆಯಿಂದ ದೂರವಾಗಿದ್ದ ಚೀನಾ, 22ರಿಂದ 25ರ ವರೆಗೆ ನಡೆಯಲಿರುವ ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಯಿಂದಲೂ ದೂರ ಉಳಿಯಲು ನಿರ್ಧರಿಸಿದೆ. ಈ ಸಭೆ ಕಾಶ್ಮೀರದಲ್ಲಿ ನಡೆಯುತ್ತಿರುವ ಕಾರಣ ಪಾಕಿಸ್ತಾನದ ಜೊತೆಗಿನ ಸಂಬಂಧ ಹಾಳಾಗಬಾರದು ಅಂತಾ ಚೀನಾ ಇಂತಹ ನಿರ್ಧಾರ ಕೈಂಡಿದೆ ಎನ್ನುವ ಮಾತು ಕೇಳಿಬಂದಿದೆ. ಮಾರ್ಚ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದ ಜಿ20 ಸಭೆಯಿಂದಲೂ ಚೀನಾ ಹಿಂದೆ ಸರಿದಿತ್ತು. ಈ ನೋಡಿದರೆ ಚೀನಾ, ಸೌದಿ ಅರೇಬಿಯಾ ಮತ್ತು ಟರ್ಕಿ ಎಸ್ಕೇಪ್ ಆಗಿವೆ.

ಈ ಬೆಳವಣಿಗೆ ಪಾಕಿಸ್ತಾನದ ಮತ್ತೊಂದು ಮುಖ ತೋರಿಸುತ್ತಿದೆ. ಸದಾ ಭಯೋತ್ಪಾದಕರನ್ನು ಪೋಷಿಸುತ್ತಾ, ಭಾರತಕ್ಕೆ ಕಳೆದ 75 ವರ್ಷಗಳಿಂದಲೂ ಗಡಿಯಲ್ಲಿ ತೊಂದರೆ ನೀಡುತ್ತಿರುವ ಪಾಕಿಸ್ತಾನ ಇನ್ನೂ ಬದಲಾಗಿಲ್ಲ ಅನ್ನೋದು ಸಬೀತಾಗಿದೆ. ಜೊತೆಗೆ ತನ್ನ ಮಾನವನ್ನ ಜಗತ್ತಿನ ಎದುರು ತಾನೇ ಹರಾಜು ಮಾಡಿಕೊಂಡಿದೆ ನೆರೆ ದೇಶ. ಇನ್ನಾದರೂ ಪಾಕಿಸ್ತಾನಕ್ಕೆ ಬುದ್ಧಿ ಬರುತ್ತೆ ಅಂತಾ ಅಂದುಕೊಂಡರೆ ಅದೇ ದಡ್ಡತನವಾಗಲಿದೆ.












Click it and Unblock the Notifications