ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಶಾಲಾ ಕಾರ್ಯಕ್ರಮದಲ್ಲಿ ವಿಷಾಹಾರ ಸೇವನೆ: ಮಕ್ಕಳು, ಪೋಷಕರು ಅಸ್ವಸ್ಥ

|
Google Oneindia Kannada News

ತಿರುವಂತನಪರಂ, ಜನವರಿ 08: ಜಿಲ್ಲೆಯ ನಕೀಜ್‌ವೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ ಸುಮಾರು 100 ಮಂದಿ ಅಸ್ವಸ್ಥರಾಗಿದ್ದ ಬೆನ್ನಲ್ಲೆ ಮತ್ತೊಂದು ಅಂತದ್ದೆ ಘಟನೆ ನಡೆದಿದೆ. ಶಾಲೆಯ ಕಾರ್ಯಕ್ರಮವೊಂದರಲ್ಲಿ ನೀಡಲಾಗಿದ್ದ ಊಟ ಸೇವಿಸಿದ ಕೆಲವು ವಿದ್ಯಾರ್ಥಿಗಳು ಮತ್ತು ಪೋಷಕರು ಅಸ್ವಸ್ಥರಾದ ಘಟನೆ ನಡೆದಿದೆ.

ಶನಿವಾರ ಶಾಲೆಯೊಂದರಲ್ಲಿ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಸೇವಿಸಿದ ಆಹಾರದಿಂದ ನಾಲ್ವರು ಮಕ್ಕಳು ಸೇರಿದಂತೆ ಸಮಾರು ಮಂದಿ ಆಹಾರ ವಿಷಾಹಾರ ಸೇವನೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರ ಬಗ್ಗೆ ಮಾಹಿತಿ ಲಭಿಸಿದೆ ಭಾನುವಾರ ಕೊಡುಮೊನ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಘಟನೆಯ ಕುರಿತು ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಯಾರೊಬ್ಬರಿಂದಲೇ ದೂರು ದಾಖಲಾಗಿಲ್ಲ. ಕೂಲಂಕುಶಾಗಿ ಪರಿಶೀಲಿಸಿ ಘಟನೆ ಸಂಬಂಧ ಸೂಕ್ತ ತನಿಖೆ ನಡೆಸುತ್ತಿದ್ದೇವೆ. ಕಾರ್ಯಕ್ರಮ ನಡೆದ ಶಾಲೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜೊತೆಗೆ ಕಾರ್ಯಕ್ರಮದಲ್ಲಿ ಸೇವನೆಯಾದ ಆಹಾರ, ಅದರ ತಯಾರಿಕೆ ಹಾಗೂ ಎಲ್ಲಿ ಆಹಾರ ಸರಬರಾಜು ಆಗಿದೆ ಎಂಬುದರ ಕುರಿತು ಸಮಗ್ರ ಪರಿಶೀಲನೆ ನಡೆಯುತ್ತಿದೆ.

Children and parents sick after consuming poisoned food at school in Kerala

ಕಳೆದ ಎರಡು ವಾರಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಷಾಹಾರ ಸೇವನೆ, ಜನರು ಅಸ್ವಸ್ಥರಾದ ಬಗ್ಗೆ ಸರಣಿ ಘಟನೆಗಳು ನಡೆದ ಬಗ್ಗೆ ವರದಿಯಾಗಿವೆ. ಇದರ ಬೆನ್ನಲ್ಲೆ ಇದೀಗ ಶಾಲೆಯೊಂದರಲ್ಲಿ ಅಂತದ್ದೆ ಘಟನೆ ಮರುಕಳಿಸಿದೆ. ಈ ಸರಣಿ ಘಟನೆಗಳ ಪೈಕಿ ಕೊಟ್ಟಾಯಂ ಮತ್ತು ಕಾಸರಗೋಡಿನಲ್ಲಿ ಇಬ್ಬರು ವ್ಯಕ್ತಿಗಳು ವಿಷಾಹಾರ ಸೇವನೆಯಿಂದಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಬಿರಿಯಾನಿ ತಿಂದು ಸಾವು

ಕಾಸರಗೋಡು ಜಿಲ್ಲೆಯ ಪೆರುಂಬಳದ ಅಂಜು ಪಾರ್ವತಿ ಎಂಬ ಯುವತಿ ಶನಿವಾರ ಸ್ಥಳೀಯ ಹೋಟೆಲ್‌ನಿಂದ ಖರೀದಿಸಿದ ಬಿರಿಯಾನಿ ತಿಂದು ಸಾವನ್ನಪ್ಪಿದ್ದರು. ಆದರೆ, ಭಾನುವಾರ ಜಿಲ್ಲೆಯ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಯೊಬ್ಬರು ಸಾವಿಗೆ ಆಹಾರ ವಿಷಾಹಾರ ಕಾರಣವಲ್ಲ. ಮಹಿಳೆ ಆಹಾರವನ್ನು ಆರ್ಡರ್ ಮಾಡಿದ ತಿಂಡಿಯಿಂದ ಯಾವುದೇ ಅವಧಿ ಮೀರಿದ, ಕಲಬೆರಕೆ ಅಥವಾ ಅಶುಚಿಯಾದ ಆಹಾರ ಪದಾರ್ಥಗಳು ಕಂಡುಬಂದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

Children and parents sick after consuming poisoned food at school in Kerala

ಅದಕ್ಕೂ ಕೆಲವು ದಿನಗಳ ಹಿಂದೆ ಕೊಟ್ಟಾಯಂನ ನರ್ಸ್ ರೇಶ್ಮಿ ಎಂಬುವರು ಉಪಾಹಾರ ಗೃಹದಿಂದ ಆಹಾರ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಪತ್ತನಂತಿಟ್ಟದಲ್ಲಿ, ಜನವರಿ 1 ರಂದು ಕೀಜ್‌ವೈಪುರ ಬಳಿಯ ಚರ್ಚ್‌ನಲ್ಲಿ ಬಡಿಸಿದ ಆಹಾರವನ್ನು ಸೇವಿಸಿದ ಸುಮಾರು 100 ಜನರು ಬಳಲಿದ್ದು, ಅವರೆಲ್ಲರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

English summary
Children and parents sick after consuming poisoned food at school in Kerala, police are investigating
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X