ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧದ ಪ್ರಕರಣದಿಂದ ಹಿಂದೆ ಸರಿದ ಮುಖ್ಯ ನ್ಯಾಯಮೂರ್ತಿ
ನವದೆಹಲಿ, ಜ. 05: ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹಿಂದೆ ಸರಿದಿದ್ದಾರೆ.
ಎರಡು ವರ್ಷಗಳ ಹಿಂದೆ ಆತ್ಮಹತ್ಯೆ ಪ್ರಕರಣದಲ್ಲಿ ಟಿವಿ ನಿರೂಪಕ ಅರ್ನಾಬ್ ಗೋಸ್ವಾಮಿಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್ ಆದೇಶದ ಕುರಿತು 2020 ರಲ್ಲಿ ಟ್ವೀಟ್ ಮಾಡಿದ್ದಕ್ಕಾಗಿ ಕುನಾಲ್ ಕಾಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಆರೋಪವಿದೆ.
ಆ ಆದೇಶ ನೀಡಿದ ನ್ಯಾಯಾಧೀಶರಲ್ಲಿ ತಾನೂ ಇದ್ದ ಕಾರಣ, ಕುನಾಲ್ ಕಾಮ್ರಾ ವಿರುದ್ಧದ ಪ್ರಕರಣದ ವಿಚಾರಣೆಯ ಭಾಗವಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

2018 ರಲ್ಲಿ ಆರ್ಕಿಟೆಕ್ಟ್, ಅನ್ವಯ್ ನಾಯಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಒಂದು ವಾರದ ನಂತರ ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಜಾಮೀನು ಮಂಜೂರು ಮಾಡಿದ್ದನ್ನು ಟೀಕಿಸಿ ಕುನಾಲ್ ಕಾಮ್ರಾ ಅನೇಕ ಟ್ವೀಟ್‌ಗಳನ್ನು ಹಾಕಿದ್ದರು.
ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರ ಅಂದಿನ ದ್ವಿಸದಸ್ಯ ಪೀಠವು ಪತ್ರಕರ್ತ ಅರ್ನಾಬ್ ಗೋಸ್ವಾಮಿ ಬಂಧನದ ಬಗ್ಗೆ ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ನಾವು ಸಾಂವಿಧಾನಿಕ ನ್ಯಾಯಾಲಯವಾಗಿ ಕಾನೂನನ್ನು ರೂಪಿಸದಿದ್ದರೆ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸದಿದ್ದರೆ, ಮತ್ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿತ್ತು.
ಕುನಾಲ್ ಕಾಮ್ರಾ ಅರ್ನಬ್ ಗೋಸ್ವಾಮಿಗೂ ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಕಿತ್ತಾಟ ನಡೆಯುತ್ತಲೆ ಇತ್ತು. ಮೂರು ವರ್ಷಗಳ ಹಿಂದೆ, ಮುಂಬೈನಿಂದ ಲಕ್ನೋಗೆ ವಿಮಾನದಲ್ಲಿ ಅರ್ನಬ್‌ರನ್ನು ಕೆಣಕಿದ್ದ ಕುನಾಲ್‌ಗೆ ಹಲವಾರು ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿದ್ದವು.

ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾಡಿದ ಟ್ವೀಟ್‌ಗಳಿಗೆ ಕ್ಷಮೆಯಾಚಿಸದೆ ಕುನಾಲ್ ಕಮ್ರಾ ಅವರು ತಮ್ಮ ಟೀಕೆ ಹಾಸ್ಯ ಮತ್ತು ಜೋಕ್‌ಗಳು ವಾಸ್ತವವಲ್ಲ ಎಂದು ಹೇಳಿದರು. "ಜೋಕ್‌ಗಳಿಗೆ ಯಾವುದೇ ರಕ್ಷಣೆ ಅಗತ್ಯವಿಲ್ಲ. ಇದು ಹಾಸ್ಯನಟನ ಗ್ರಹಿಕೆಯನ್ನು ಆಧರಿಸಿದೆ" ಎಂದು ಕುನಾಲ್ ಕಾಮ್ರಾ ಹೇಳಿದ್ದರು.
ಕುನಾಲ್ ಕಮ್ರಾ ಅವರನ್ನು ವಿಚಾರಣೆಗೆ ಒಳಪಡಿಸಲು ತಕ್ಷಣ ಅನುಮತಿ ನೀಡಿದ ಸರ್ಕಾರದ ಆಗಿನ ಉನ್ನತ ಕಾನೂನು ಅಧಿಕಾರಿ ಕೆಕೆ ವೇಣುಗೋಪಾಲ್ ಅವರು ಹಾಸ್ಯನಟನ ಟ್ವೀಟ್‌ಗಳು "ಕೆಟ್ಟ ಅಭಿರುಚಿಯಲ್ಲಿದೆ" ಎಂದು ಹೇಳಿದ್ದಾರೆ.
{document2}x












Click it and Unblock the Notifications