ಮಾಜಿ ಹಣಕಾಸು ಸಚಿವರೀಗ ಗ್ಯಾಸ್ ಕಂಪನಿ ವಕೀಲರು!

ಅಹಮದಾಬಾದ್. ಸೆ. 25 : ನ್ಯೂಜಿಲೆಂಡ್‌ ಆಲ್‌ ರೌಂಡರ್‌ ಕ್ರಿಸ್‌ ಕ್ರೇನ್ಸ್ ಲಾರಿ ಓಡಿಸುತ್ತಿದ್ದಾರಂತೆ, ಅದರಂತೆ ಇತ್ತ ಭಾರತದಲ್ಲಿ ಕೇಂದ್ರದ ಮಾಜಿ ಹಣಕಾಸು ಸಚಿವರೊಬ್ಬರು ವಕೀಲಿ ವೃತ್ತಿ ಆರಂಭಿಸಿದ್ದಾರೆ.

ಆದರೆ ಒಂದು ವ್ಯತ್ಯಾಸವಿದೆ. ಕ್ರಿಸ್‌ ಕ್ರೇನ್ಸ್ ಕುಟುಂಬ ನಿರ್ವಹಣೆಗೆ ಲಾರಿ ಓಡಿಸಿದರೆ ಇವರು ಯಾವ ಕಾರಣಕ್ಕೆ ಕಪ್ಪು ಕೋಟು ಹಾಕಿದರೋ ತಿಳಿಯದು. ಹೊಟ್ಟೆ ಪಾಡಿಗಾಗಂತೂ ವಕೀಲಿ ಕೆಲಸಕ್ಕೆ ಬರುವ ಅಗತ್ಯವೇನಿಲ್ಲ ಬಿಡಿ.

chidambaram

ಹೌದು.. ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಗುಜರಾತ್ ಹೈ ಕೋರ್ಟ್‌ನಲ್ಲಿ ಬುಧವಾರ ಕಪ್ಪು ಕೋಟು ಧರಿಸಿ ಕಾಣಿಸಿಕೊಂಡರು. ಖಾಸಗಿ ಕಂಪನಿಯೊಂದರ ಪರವಾಗಿ ವಾದವನ್ನು ಮಂಡಿಸಿದರು. ಗ್ಯಾಸ್‌ ಕಂಪನಿಯೊಂದರ ಪರವಾಗಿ ವಾದಿಸಿದ ಪಿ.ಚಿದಂಬರಂ ಯಾವುದೆ ಭದ್ರತೆ ಇಲ್ಲದೇ ಕೋರ್ಟ್‌ಗೆ ಆಗಮಿಸಿದ್ದು ವಿಶೇಷವಾಗಿತ್ತು.(ಕೊಚ್ಚಿ ಸೆಕ್ಸ್ ಹಗರಣ ಕೊಚ್ಚೆಯಲ್ಲಿ ಚಿದಂಬರಂ?)

ಚಿದಂಬರಂ ಕಾರಿಗೆ ತಡೆ
ಚಿದಂಬರಂ ಕಾರು ಕೋರ್ಟ್‌ ಆವರಣ ಪ್ರವೇಶಿಸುತ್ತಿದ್ದಂತೆ ಪೊಲೀಸರು ಒಳಗೆ ಬಿಡಲು ಅನುಮತಿ ನೀಡಲಿಲ್ಲ. ಬಾರ್‌ ಲೈಸನ್ಸ್‌ ಇಲ್ಲದ ಕಾರಣ ಕಾರಿಗೆ ತಡೆ ಒಡ್ಡಲಾಯಿತು. ನಂತರ ವಾದ ಮುಗಿಸಿ ಹೊರಬಂದ ಚಿದಂಬರಂ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಿಲ್ಲ. ಅಲ್ಲದೇ ಖಾಸಗಿ ಟ್ಯಾಕ್ಸಿಯೊಂದನ್ನು ಏರಿ ನಡೆದರು.

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಚಿದಂಬರಂ ಸ್ಪರ್ಧಿಸಿರಲಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಅನೇಕ ಬಾರಿ ಬಜೆಟ್‌ ಮಂಡಿಸಿರುವ ಚಿದಂಬರಂ ಕಪ್ಪು ಕೋಟಿನಲ್ಲಿ ಕಾಣಿಸಿಕೊಂಡು ಕೆಲ ಕಾಲ ಅಚ್ಚರಿ ಮೂಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+