ಛತ್ತೀಸ್ ಗಢ ನಕ್ಸಲ್ ದಾಳಿ: ಮಾಧ್ಯಮದ ಮುಂದೆ ಮಾತಾಡುವಾಗ ಕಣ್ಣೀರಿಟ್ಟ ಎಸ್‌ಪಿ
ದಾಂತೇವಾಡ (ಛತ್ತೀಸ್ ಗಢ), ಅಕ್ಟೋಬರ್ 30: ನಕ್ಸಲರ ದಾಳಿಯಲ್ಲಿ ದೂರದರ್ಶನದ ಕ್ಯಾಮೆರಾಮ್ಯಾನ್ ಸೇರಿದಂತೆ ಮೂವರು ಹತ್ಯೆಯಾದ ಘಟನೆ ಕುರಿತು ಮಾಧ್ಯಮದ ಎದುರು ಪ್ರತಿಕ್ರಿಯೆ ನೀಡುವ ವೇಳೆ ಛತ್ತೀಸಗಢದ ದಾಂತೇವಾಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕಣ್ಣೀರಿಟ್ಟಿದ್ದಾರೆ.
ಘಟನೆ ಕುರಿತು ಹೇಳಿಕೆ ನೀಡುತ್ತಿದ್ದ ಎಸ್‌ಪಿ ಅಭಿಷೇಕ್ ಪಲ್ಲವ್, 'ಚುನಾವಣೆ ಸಮೀಪಿಸುತ್ತಿರುವುದರಿಂದ ಕಳೆದ ಹದಿನೈದು ದಿನಗಳಿಂದ ಮಾಧ್ಯಮದವರು ಇಲ್ಲಿನ ಕುಗ್ರಾಮಗಳಿಗೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳ ಕುರಿತು ವರದಿ ಮಾಡುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ನಕ್ಸಲರು ಅವರ ಮೇಲೆ ದಾಳಿ ಮಾಡಿದ್ದಾರೆ' ಎಂದು ತಿಳಿಸಿದರು.
'ನಕ್ಸಲರು ಒಬ್ಬ ಕ್ಯಾಮೆರಾಮ್ಯಾನ್‌ನಿಂದ ಕ್ಯಾಮೆರಾವನ್ನು ಕಸಿದುಕೊಂಡರು. ದೆಹಲಿಯಿಂದ ಬಂದ ಇನ್ನಿಬ್ಬರನ್ನು ಎಳೆದಾಡಿದರು. ನನ್ನ ಕಾನ್‌ಸ್ಟೆಬಲ್‌ಗಳು ಅವರ ವಿರುದ್ಧ ಹೋರಾಡಿದರು. ಇಲ್ಲದಿದ್ದರೆ ಮಾಧ್ಯಮದ ಇನ್ನೂ ಹೆಚ್ಚಿನವರಿಗೆ ತೊಂದರೆಗಳಾಗುತ್ತಿತ್ತು' ಎಂದು ವಿವರಿಸಿದರು.
#WATCH: Dantewada SP Abhishek Pallav breaks down while talking about death of 2 police personnel & DD cameraman in Naxal attack, "For past 15 days, media persons were coming to remote villages to report problems of locals, ahead of polls. Agitated by this, Naxals attacked them" pic.twitter.com/OCrYbr0B4x
— ANI (@ANI) 30 October 2018
ದೇಶ ವಿದೇಶಗಳಿಂದ ಮಾಧ್ಯಮದವರು ಬರುತ್ತಿದ್ದರು. ಏನೇನು ಆಗುತ್ತಿದೆ ಎಂಬುದನ್ನು ವರದಿ ಮಾಡುತ್ತಿದ್ದರು. ಜನರು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡರು. ಇದರಿಂದಾಗಿ ನಕ್ಸಲರು ಅವರನ್ನು ಗುರಿಯಾಗಿರಿಸಿಕೊಂಡರು. ಮಾಧ್ಯಮದವರನ್ನು ರಕ್ಷಿಸುವ ಪ್ರಯತ್ನದಲ್ಲಿ ನಮ್ಮ ಕಾನ್‌ಸ್ಟೆಬಲ್‌ಗಳು ಜೀವ ಕಳೆದುಕೊಂಡರು ಎಂದು ಹೇಳುವಾಗ ಎಸ್‌ಪಿ ಅಭಿಷೇಕ್ ಪಲ್ಲವ್ ಭಾವುಕರಾಗಿ ಕಣ್ಣೀರಿಟ್ಟರು.

'ಹತ್ಯೆಯಾದ ಛಾಯಾಗ್ರಾಹಕ ಸಾಹು ಬೇರೆ ಕಾರ್‌ನಲ್ಲಿದ್ದು ನಮ್ಮಿಂದ 50 ಮೀಟರ್ ಮುಂದೆ ಇದ್ದರು. ಮೊದಲು ಅವರ ಮೇಲೆ ಗುಂಡು ಹಾರಿಸಲಾಯಿತು. ನಮ್ಮ ಮೇಲೆ ಗುಂಡು ಹಾರಿಸಿದಾಗ ನಾನು ಹೊಂಡವೊಂದರಲ್ಲಿ ಬಿದ್ದೆ. ಸುಮಾರು 45 ನಿಮಿಷ ಅನೇಕ ಸುತ್ತು ಗುಂಡು ಮತ್ತು ಗ್ರೆನೇಡ್ ಸದ್ದು ನನ್ನ ಸಮೀಪದಲ್ಲಿ ಕೇಳುತ್ತಿತ್ತು' ಎಂದು ಘಟನೆಯಲ್ಲಿ ಬದುಕುಳಿದ ದೂರದರ್ಶನದ ವರದಿಗಾರ ಧೀರಜ್ ಕುಮಾರ್ ತಿಳಿಸಿದ್ದಾರೆ.
#DDNews had deputed team to cover #Chhattisgarhpolls, comprising of Camera person-Achyuta Nanda Sahu, Dheeraj Kumar and MM Sharma. In a #Naxal attack #AchyutaNandaSahu was martyred. The entire #DDNnews Family salutes his service and stands by his family in this hour of grief pic.twitter.com/xIh74b055g
— Doordarshan News (@DDNewsLive) 30 October 2018
ದೆಹಲಿಯಿಂದ ಬಂದಿದ್ದ ದೂರದರ್ಶನ ವಾಹಿನಿಯ ವರದಿಗಾರರ ತಂಡ, ಬೆಳಿಗ್ಗೆ ಅಭಿಷೇಕ್ ಪಲ್ಲವ್ ಅವರ ಸಂದರ್ಶನ ಮುಗಿಸಿ, ನೀಲಭಯ ಎಂಬ ಸ್ಥಳಕ್ಕೆ ತೆರಳುತ್ತಿದ್ದರು. ಆಗ ನಕ್ಸಲರ ತಂಡ ಅವರ ಮೇಲೆ ದಾಳಿ ನಡೆಸಿತ್ತು.
ದೂರದರ್ಶನದ ಕ್ಯಾಮೆರಾಮ್ಯಾನ್ ಮತ್ತು ಇಬ್ಬರು ಪೊಲೀಸರು ನಕ್ಸಲರ ದಾಳಿಗೆ ಬಲಿಯಾಗಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications