ಛತ್ತೀಸ್ ಗಢ: 'ಆಪರೇಷನ್ ಪ್ರಹಾರ'ಕ್ಕೆ 6 ನಕ್ಸಲರು ಬಲಿ
ನಾರಾಯಣಪುರ(ಛತ್ತೀಸ್ ಗಢ), ನವೆಂಬರ್ 08: ಛತ್ತೀಸ್ ಗಢದ ನಾರಾಯಣಪುರದಲ್ಲಿ ಭದ್ರತಾ ಪಡೆ ನಡೆಸಿದ 2 ಎನ್ ಕೌಂಟರ್ ದಾಳಿಯಲ್ಲಿ ಓರ್ವ ಮಹಿಳೆ ಸೇರಿದಂತೆ ಆರು ನಕ್ಸಲರು ಬಲಿಯಾಗಿದ್ದಾರೆ.
ಸೇನೆಯ ಆಪರೇಷನ್ ಪ್ರಹಾರ್ -2 ರ ಭಾಗವಾಗಿದ್ದ ಈ ಎನ್ ಕೌಂಟರ್ ನ.07 ರ ರಾತ್ರಿ ನಡೆಯಿತು. ನಕ್ಸಲರಿಂದ ಒಂಬತ್ತು ವಿವಿಧ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಕಳೆದ ತಿಂಗಳಷ್ಟೆ, ಕೆಲವು ಸ್ಫೋಟಕಗಳನ್ನು ಹೊಂದಿದ್ದ 7 ಜನ ನಕ್ಸಲರನ್ನು ಇಲ್ಲಿಯೇ ಬಂಧಿಸಲಾಗಿತ್ತು. ಛತ್ತೀಸ್ ಗಢದಲ್ಲಿ ನಕ್ಸಲ್ ಚಟುವಟಿಕೆಯನ್ನು ನಿಯಂತ್ರಿಸುವ ಸಲುವಾಗಿ ಛತ್ತೀಸ್ ಗಢ ಪೊಲೀಸರು ಕಳೆದ ಜೂನ್ ನಲ್ಲಿ 'ಆಪರೇಷನ್' ಪ್ರಹಾರ್ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದರು.












Click it and Unblock the Notifications