Breaking: ಛತ್ತೀಸ್‌ಗಢದಲ್ಲಿ ಮುಂದುವರಿದ ನಕ್ಸಲರ ಅಟ್ಟಹಾಸ, ಬ್ಲಾಸ್ಟ್‌ಲ್ಲಿ ಯೋಧರಿಗೆ ಗಾಯ....
ಬೆಂಗಳೂರು, ಜೂನ್ 05: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರ ಹಾವಳಿ ಮತ್ತೆ ಶುರುವಾಗಿದ್ದು, ಸೋಮವಾರ ಐಇಡಿ ಬ್ಲಾಸ್ಟ್ ಮಾಡುವ ಮೂಲಕ ನಕ್ಸಲರು ಯೋಧರನ್ನು ಕೊಲ್ಲಲ್ಲು ಸಂಚು ರೂಪಿಸಿದ್ದರು. ಸದ್ಯ ಸುಧಾರಿತ ಸ್ಪೋಟಕವಾದ ಐಇಡಿ ಬ್ಲಾಸ್ಟ್‌ನಿಂದಾಗಿ ಸಿಆರ್‌ಪಿಎಫ್ 85 ಬೆಟಾಲಿಯನ್‌ನ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಈ ಬಗ್ಗೆ ಛತ್ತೀಸ್‌ಗಢ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.
ಸೋಮವಾರ ಬೆಳಗ್ಗೆ 10:30ರ ಸುಮಾರಿಗೆ ಬಿಜಾಪುರ ಜಿಲ್ಲೆಯ ತಕ್ಮೆಟಾ ಹಿಲ್ ಬಳಿಯ ಗಂಗಾಲೂರು ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಗಾಯಗೊಂಡ ಇಬ್ಬರು ಯೋಧರನ್ನು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಅವರನ್ನು ವಿಮಾನದಲ್ಲಿ ರಾಯ್‌ಪುರಕ್ಕೆ ಕರೆತರಲಾಗುತ್ತಿದೆ. ಘಟನಾ ಸ್ಥಳದಿಂದ ಸಿಆರ್‌ಪಿಎಫ್ ತಂಡವು ಪುಸ್ನಾರ್ ಕ್ಯಾಂಪ್‌ನಿಂದ ಹಿರೋಲಿಗೆ ಹೊರಟಿತ್ತು. ಈ ವೇಳೆ ನಕ್ಸಲರು ಭೂಗತದಲ್ಲಿ ಹಾಕಿದ್ದ ಒತ್ತಡ-ಪ್ರಚೋದಿತ ಐಇಡಿ ಮೇಲೆ ತೆರಳಿದ್ದಾರೆ. ಈ ವೇಳೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಕಳೆದ ಮೇ ತಿಂಗಳಿಂದಲೂ ಸಣ್ಣನೆಯ ಜಕಮಕಿ ನಡೆಯುತ್ತಲೇ ಇದೆ ಎನ್ನಲಾಗಿದೆ. ಬಿಜಾಪುರದ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಪಡೆಯ ಇಬ್ಬರು ಜವಾನರು ಗಾಯಗೊಂಡಿದ್ದರು. ಪುಸ್ನಾರ್ ಮತ್ತು ಹಿರೋಲಿ ಗ್ರಾಮ ಪ್ರದೇಶದಲ್ಲಿ ಮಾವೋವಾದಿಗಳು ಐಇಡಿ ದಾಳಿ ನಡೆಸಲು ಯೋಜಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ.
ಇಲ್ಲಿನ ಗಂಗಲೂರು ಪೊಲೀಸ್ ಠಾಣೆಯಿಂದ ಶೋಧ ಕಾರ್ಯಾಚರಣೆ ನಡೆಸಲು ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ), ಕೋಬ್ರಾ ಪಡೆಯನ್ನು ಕಳುಹಿಸಲಾಗಿದೆ. ಕೋಬ್ರಾ ಪಡೆಗಳು ಮತ್ತು ನಕ್ಸಲರ ನಡುವೆ ಎನ್‌ಕೌಂಟರ್ ನಡೆಯಿತು, ಇದರಲ್ಲಿ ಇಬ್ಬರು ಜವಾನರು ಗಾಯಗೊಂಡಿದ್ದಾರೆ. ಮೂರು ಮಂದಿ ಮಾವೋವಾದಿಗಳಿಗೂ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ.












Click it and Unblock the Notifications