ಛತ್ತೀಸ್‌ಗಢದಲ್ಲಿ ಯುವತಿ ಅಪಹರಣ: 7 ತಿಂಗಳಲ್ಲಿ 7 ಬಾರಿ ಮಾರಾಟ
ಅಪಹರಣಕ್ಕೊಳಗಾಗಿದ್ದ ಯುವತಿಯನ್ನು 7 ತಿಂಗಳಲ್ಲಿ ಏಳು ಬಾರಿ ಮಾರಾಟ ಮಾಡಿದ್ದರು ಎನ್ನುವ ವಿಚಾರ ಬಹಿರಂಗಗೊಂಡಿದೆ.
18 ವರ್ಷದ ಯುವತಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು, ಅದಕ್ಕೂ ಮುನ್ನ ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಆಕೆಯನ್ನು ಏಳು ಬಾರಿ ಮಾರಾಟ ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದೆ. ಛತ್ತೀಸ್‌ಗಢ,ಮಧ್ಯಪ್ರದೇಶ,ಉತ್ತರ ಪ್ರದೇಶ ರಾಜ್ಯಗಳ ಪೊಲೀಸರು ತನಿಖೆ ನಡೆಸಿದ್ದಾರೆ. ಯುವತಿಯನ್ನು ಒತ್ತಾಯಪೂರ್ವಕವಾಗಿ ಬುದ್ಧಿಮಾಂದ್ಯ ವ್ಯಕ್ತಿಯನ್ನು ಹುಡುಕಬೇಕಿದೆ ಎಂದು ತಿಳಿಸಿದ್ದಾರೆ.

ಯುವತಿಯನ್ನು ಅಪಹರಿಸಿ ಪೋಷಕರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು, ಆಕೆ ಚತ್ತೀಸ್‌ಗಢದ ಜಶ್‌ಪುರದವಳಾಗಿದ್ದಳು. ಆಕೆಯ ಸಂಬಂಧಿ ಕೆಲಸ ಕೊಡಿಸುವ ನೆಪದಲ್ಲಿ ಆಕೆಯನ್ನು ಮಧ್ಯಪ್ರದೇಶಕ್ಕೆ ಕರೆತಂದಿದ್ದರು.
ಬಳಿಕ ಹಣ ನೀಡದಿದ್ದರೆ ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.ಬಳಿಕ ಅವರ ಪೋಷಕರಿಗೆ ಹಣ ನೀಡಲು ಸಾಧ್ಯವಾಗದಿದ್ದಾಗ ಪೊಲೀಸರಿಗೆ ಮೊರೆ ಹೋಗಿದ್ದರು.
ಈ ಪ್ರಕರಣ ಸಂಬಂಧ ಅವರ ಸಂಬಂಧಿ ಪಂಚಮ್ ಸಿಂಗ್ ರಾಜ್ ಹಾಗೂ ಪತ್ನಿಯನ್ನು ಬಂಧಿಸಲಾಗಿದೆ. ಕೆಲಸ ಕೊಡಿಸುವ ನೆಪದಲ್ಲಿ ಕರೆತಂದು ಮಾರಾಟ ಮಾಡಿದ್ದರು. ಆಕೆಯನ್ನು 20 ಸಾವಿರ ರೂ.ಗೆ ಕಲ್ಲು ಎಂಬುವವರಿಗೆ ಮಾರಾಟ ಮಾಡಿದ್ದರು.
ಬಳಿಕ ಆತನಿಂದ ಉತ್ತರ ಪ್ರದೇಶದ ಸಂತೋಷ್ ಎಂಬುವವನು 70 ಸಾವಿರ ನೀಡಿ ಆಕೆಯನ್ನು ಕರೆತಂದಿದ್ದ. ಬಳಿಕ ಬುದ್ಧಿಮಾಂದ್ಯ ಯುವಕನ ಜತೆಯಲ್ಲಿ ಆಕೆಯ ಮದುವೆ ಮಾಡಲಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು.












Click it and Unblock the Notifications